ಸ್ಟಾಕ್ಹೋಂ (ಎಎಫ್ಪಿ): ಅಮೆರಿಕದ ಪಾಲ್ ವಾಕರ್, ಪ್ಯಾಲೆಸ್ಟೈನ್ನ ರಾಜಿ ಸೌರಾನಿ, ಕಾಂಗೋದ ಡೆನಿಸ್ ಮುಕ್ವೆಗೆ ಹಾಗೂ ಸ್ವೀಡನ್ನ ಹನ್ಸ್ ರುಡಾಲ್ಫ್ ಹರೆನ್ ಅವರು ನೊಬೆಲ್ಗೆ ಪರ್ಯಾಯವೆಂದು ಪರಿಗಣಿಸಲಾದ ಪ್ರತಿಷ್ಠಿತ ‘ದಿ ಸ್ವೀಡಿಸ್ ರೈಟ್ ಲೈವ್ಲಿ ಹುಡ್’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪೌಲ್ ರಾಸಾಯನಿಕ ಅಸ್ತ್ರ ವಿರೋಧಿ ಹೋರಾಟಗಾರರು, ರಜಿ ಮಾನವ ಹಕ್ಕುಗಳ ಹೋರಾಟಗಾರ್ತಿ, ಡೆನಿಸ್ ಶಸ್ತ್ರಚಿಕಿತ್ಸಕರು ಹಾಗೂ ಹನ್ಸ ಆಹಾರ ಭದ್ರತಾ ಪರಿಣಿತರು. ಈ ನಾಲ್ವರು ಪ್ರಶಸಿ್ತಯ ಮೊತ್ತ 20 ಲಕ್ಷ ಕ್ನೊನಾರ್ ಅನ್ನು (ಅಂದಾಜು ` 1.93 ಕೋಟಿ) ಸಮಾನ ಹಂಚಿಕೊಳ್ಳಲಿದ್ದಾರೆ.
ಡಿ.2ರಂದು ಸ್ವೀಡನ್ ಸಂಸತ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರತಿಷ್ಠಾನ ತಿಳಿಸಿದೆ.
ಸ್ವೀಡಿಸ್– ಜರ್ಮನ್ ಸ್ಟ್ಯಾಂಪ್ ಸಂಗ್ರಹಕಾರ ಜಾಕೊಬ್ ವೊನ್ ಉಕ್ಷ ಕುಲ್ ಈ ಪ್ರಶಸ್ತಿ ಸ್ಥಾಪಿಸಿದ್ದಾರೆ.