ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರು ಶುದ್ಧೀಕರಣಕ್ಕೆ ನುಗ್ಗೆ ಬೀಜ

Last Updated 18 ಜೂನ್ 2018, 18:30 IST
ಅಕ್ಷರ ಗಾತ್ರ

ವಾಷಿಂಗ್ಟನ್ : ನುಗ್ಗೇಕಾಯಿ ಬೀಜದಿಂದ (ಮೊರಿಂಗಾ ಒಲಿಫೆರಾ) ತೆಗೆದ ಪ್ರೊಟೀನ್, ಅತ್ಯಂತ ಯಶಸ್ವಿಯಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ನೀರು ಶುದ್ಧೀಕರಿಸಲು ನೆರವಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಭಾರತ ಮೂಲದ ಈ ಸಸ್ಯ, ಆಹಾರ ಮತ್ತು ನೈಸರ್ಗಿಕ ತೈಲಗಳ ಉತ್ಪಾದನೆಗೆ ಬಳಕೆಯಾಗುತ್ತಿದೆ. ಇದರ ಬೀಜದಿಂದ ಈಗಾಗಲೇ ಪ್ರಾಥಮಿಕ ಹಂತದ ನೀರು ಶುದ್ಧೀಕರಣ ಮಾಡಲಾಗುತ್ತಿದೆ.

ಅಮೆರಿಕದ ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯದ ಸಂಶೋಧಕರು, ಮರಳು ಹಾಗೂ ನುಗ್ಗೇಕಾಯಿ ಗಿಡದ ಬೀಜದ ಪ್ರೊಟೀನ್ ಬಳಸಿ ‘ಎಫ್–ಸ್ಯಾಂಡ್’ ಎಂಬ ಕಡಿಮೆ ದರದ ಹಾಗೂ ಖಚಿತ ಫಲಿತಾಂಶ ನೀಡಬಲ್ಲ ನೀರು ಶುದ್ಧೀಕರಣ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ.

ಮರಳಿನ ಮುಖ್ಯ ವಸ್ತುವಾದ ಸಿಲಿಕಾದ ಕಣಗಳ ಮೇಲ್ಮೈಯನ್ನು ಈ ಪ್ರೊಟೀನ್‌ ಆವರಿಸಿಕೊಳ್ಳುತ್ತದೆ. ಸೂಕ್ಷ್ಮ ಜೀವಿಗಳನ್ನು ಕೊಲ್ಲುತ್ತದೆ. ಜತೆಗೆ ನೀರಿನಲ್ಲಿರುವ ಅನಪೇಕ್ಷಿತ ಮಾಲಿನ್ಯಕಾರಕಗಳು ಹಾಗೂ ಕರಗಿದ ಜೈವಿಕ ಇಂಗಾಲವನ್ನು (ಡಿಒಸಿ) ತೆಗೆದುಹಾಕುತ್ತದೆ. ಈ ನೀರು ಹೆಚ್ಚು ಕಾಲ ಬಳಸಲು ಯೋಗ್ಯ. ಎಫ್‌–ಸ್ಯಾಂಡ್ ಮರುಬಳಕೆಗೂ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT