ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಉಸ್ತುವಾರಿ ಪ್ರಧಾನಿಯಾಗಿ ನಾಸಿರುಲ್‌ ಆಯ್ಕೆ

Last Updated 28 ಮೇ 2018, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಪಾಕಿಸ್ತಾನದ ಉಸ್ತುವಾರಿ ಪ್ರಧಾನಿಯಾಗಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನಾಸಿರುಲ್‌ ಮುಲ್ಕ್‌ ಅವರನ್ನು ಆಯ್ಕೆ ಮಾಡಲಾಗಿದೆ. ಜುಲೈ 25ರಂದು ಪಾಕಿಸ್ತಾನದ ಸಂಸತ್ತಿಗೆ ಚುನಾವಣೆ ನಡೆಯಲಿದೆ.

ಸ್ಪೀಕರ್‌ ಅಯಾಜ್‌ ಸಾದೀಕ್‌, ಹಾಲಿ ಪ್ರಧಾನಿ ಶಾಹೀದ್‌ ಖಾಕನ್‌ ಅಬ್ಬಾಸಿ ಹಾಗೂ ಪ್ರತಿಪಕ್ಷದ ನಾಯಕ ಖುರ್ಷಿದ್‌ ಶಾ ಅವರ ನೇತೃತ್ವದಲ್ಲಿ ನಡೆದ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಲಾಯಿತು.

ಮುಲ್ಕ್‌ ಅವರು ಪ್ರಧಾನಿಯಾಗಿ ಶುಕ್ರವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈಗಿರುವ ಸರ್ಕಾರದ ಅವಧಿ ಮೇ 31ಕ್ಕೆ ಮುಕ್ತಾಯಗೊಳ್ಳಲಿದೆ.

ಮುಂದಿನ ಸರ್ಕಾರ ಚುನಾಯಿತಗೊಂಡು ಹೊಸ ಪ್ರಧಾನಿ ಆಯ್ಕೆಯಾಗುವ ತನಕ ಮುಲ್ಕ್‌ ಅವರೇ ಪ್ರಧಾನಿಯಾಗಲಿದ್ದಾರೆ.

ಉಸ್ತುವಾರಿ ಪ್ರಧಾನಿ ಆಯ್ಕೆ ಸಂಬಂಧ ಆಡಳಿತ ಹಾಗೂ ಪ್ರತಿಪಕ್ಷದ ನಾಯಕರ ನಡುವೆ ವೈಮನಸ್ಸು ಉಂಟಾಗಿತ್ತು. ಆರು ಸಭೆ ಬಳಿಕ ಮುಲ್ಕ್‌ ಅವರನ್ನು ಸರ್ವಾನುಮತದಿಂದ ಪ್ರಧಾನಿಯಾಗಿ ಆಯ್ಕೆಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT