2008ರಲ್ಲಿ ಬಾಹ್ಯಾಕಾಶ ನಿಲ್ದಾಣದ ಸಾರಥ್ಯ ವಹಿಸಿಕೊಳ್ಳುವ ಮೂಲಕ ಈ ಗೌರವ ಪಡೆದ ಮೊದಲ ಮಹಿಳೆ ಎನಿಸಿಕೊಂಡಿದ್ದ ಪೆಗ್ಗಿ, 53 ಗಂಟೆಗೂ ಹೆಚ್ಚು ಕಾಲ ಬಾಹ್ಯಾಕಾಶ ನಡಿಗೆ ನಡೆಸಿದ ದಾಖಲೆಯನ್ನೂ ಮಾರ್ಚ್ನಲ್ಲಿ ತಮ್ಮದಾಗಿಸಿಕೊಂಡಿದ್ದರು. ಭಾರತ ಮೂಲದ ಅಮೆರಿಕದ ನಿವಾಸಿ ಸುನಿತಾ ವಿಲಿಯಮ್ಸ್ ಅವರು 50 ಗಂಟೆ 40 ನಿಮಿಷದ ಅವಧಿಯಲ್ಲಿ ಒಟ್ಟು ಏಳು ಬಾರಿ ಬಾಹ್ಯಾಕಾಶ ನಡಿಗೆ ಮಾಡಿದ್ದರು.