ಮಾಲೆ (ಪಿಟಿಐ): ಮಾಲ್ಡೀವ್ಸ್ನಲ್ಲಿ ಮತ್ತೆ ಹಿಂಸಾಚಾರ ಉಲ್ಬಣಿಸಿದೆ. ಮಾಜಿ ಅಧ್ಯಕ್ಷ ಮೊಹಮದ್ ನಶೀದ್ ಅವರ ಬೆಂಬಲಿಗ ಸಂಸದರು ಸಂಸತ್ತಿನಲ್ಲಿ ದಾಂಧಲೆ ನಡೆಸಿ ಕಲಾಪಕ್ಕೆ ಅಡ್ಡಿಪಡಿಸಿದರೆ, ಅವರ ಬೆಂಬಲಿಗರು ಸಂಸತ್ತಿನ ಹೊರಗೆ ಪೊಲೀಸರೊಂದಿಗೆ ಜಟಾಪಟಿ ನಡೆಸಿ ಹಿಂಸಾಚಾರಕ್ಕೆ ಕಾರಣರಾದರು.

ಸಂಸತ್ ಅಧಿವೇಶನದ ಮೊದಲ ದಿನವಾದ ಗುರುವಾರ ನೂತನ ಅಧ್ಯಕ್ಷ ಮೊಹಮದ್ ವಹೀದ್ ಹಸನ್ ಅವರು ಭಾಷಣ ಮಾಡಲು ಮುಂದಾಗುತ್ತಿದ್ದಂತೆಯೇ ನಶೀದ್ ಅವರ ಮಾಲ್ಡೀವ್ಸ್ ಡೆಮಾಕ್ರೆಟಿಕ್ ಪಕ್ಷದ (ಎಂಡಿಪಿ) ಸದಸ್ಯರು ಘೋಷಣೆ ಕೂಗಲು ಆರಂಭಿಸಿದರು. ನಂತರ ವಹೀದ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಕುರ್ಚಿಗಳನ್ನು ಎಸೆದಾಡಿ, ಕೂಡಲೇ ಅವರೆಲ್ಲರೂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಇದರಿಂದ ಕೋಪೋದ್ರಿಕ್ತರಾದ ವಹೀದ್ ಸಂಸತ್ನ ಆವರಣದಿಂದ ಹೊರನಡೆದರು.

ಎಂಡಿಪಿ ಬೆಂಬಲಿಗರು ಭದ್ರತಾ ಸಿಬ್ಬಂದಿಯತ್ತ ಕಲ್ಲು ಮತ್ತು ಇಟ್ಟಿಗೆಗಳನ್ನು ತೂರಾಡಿದರು. ನಶೀದ್ ಸಹೋದರ ನಜೀಮ್ ಸತ್ತಾರ್ ಸೇರಿ 34 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಉದ್ವಿಗ್ನ ಸ್ಥಿತಿ ಹಿನ್ನೆಲೆಯಲ್ಲಿ ರಾಜಧಾನಿ ಮಾಲೆ ಹಾಗೂ ದ್ವೀಪ ನಗರ ಅದ್ದುವಿನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.