‘ಭಾನುವಾರ ಸಂಜೆ ನಡೆದ ಈ ಘಟನೆಯಿಂದ ಭಯಗೊಂಡಿದ್ದೇನೆ. ನನ್ನ ಧರ್ಮ ಮತ್ತು ನಂಬಿಕೆಗೆ ಅವಮಾನವಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಘಟನೆಯ ವಿವರ: ಮೂವರು ಯುವಕರು ಮತ್ತು ಒಬ್ಬ ಯವತಿಯನ್ನು ಮೆಡಿಸನ್ ವೃತ್ತದಲ್ಲಿ ಹತ್ತಿಸಿಕೊಂಡು ಬ್ರೊನಕ್ಸ್ನಲ್ಲಿ ಬಿಟ್ಟಾಗ, ಪ್ರಯಾಣಿಕರು ತಪ್ಪು ವಿಳಾಸಕ್ಕೆ ಕರೆದುಕೊಂಡು ಬರಲಾಗಿದೆ ಎಂದು ದೂರಿದರು. ಅವರೆಲ್ಲ ಪಾನಮತ್ತರಾಗಿದ್ದರು. ಎಲ್ಲಿಗೆ ಹೋಗಬೇಕು ಎಂಬುದನ್ನು ಸ್ಪಷ್ಟವಾಗಿ ಹೇಳಲಿಲ್ಲ. ನಂತರ ಈ ಪ್ರಯಾಣಿಕರು ನಿಂದಿಸಲು ಆರಂಭಿಸಿದರು. ಒಬ್ಬ ಪ್ರಯಾಣಿಕ ಟ್ಯಾಕ್ಸಿ ಮೀಟರ್ನ್ನು ಧ್ವಂಸ ಮಾಡಿ ತಮ್ಮ ಮೇಲೆ ಹಲ್ಲೆ ಮಾಡಿದ ಎಂದು ಸಿಂಗ್ ದೂರಿದ್ದಾರೆ.