ವಾಷಿಂಗ್ಟನ್ (ಪಿಟಿಐ): ಅಮೆರಿಕದ ಅಟಾರ್ನಿ ಜನರಲ್‌ಗಳ ಪೈಕಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ `ಸುರಸುಂದರಿ ಮತ್ತು ತೀಕ್ಷ್ಣಮತಿ' ಎಂದು ಅಧ್ಯಕ್ಷ ಬರಾಕ್ ಒಬಾಮ ಹಾಡಿ ಹೊಗಳಿದ್ದು, ಅವರ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ.

`ಅವರು ಬುದ್ಧಿವಂತೆ, ಕೆಲಸದ ಬಗ್ಗೆ ಅಪಾರ ಶ್ರದ್ಧೆ ಮತ್ತು ಅಷ್ಟೇ ಕಠಿಣವಾಗಿದ್ದಾರೆ. ಕಾನೂನು ಜಾರಿಗೊಳಿಸುವ ಸಂಬಂಧ ಒಬ್ಬ ಅಧಿಕಾರಿಯಲ್ಲಿ ಯಾವ ಗುಣಗಳು ಇರಬೇಕು ಎಂದು ಬಯಸುತ್ತೇವೆಯೋ ಅದನ್ನು ಅವರು ಹೊಂದಿದ್ದಾರೆ' ಎಂದು ಒಬಾಮ ಕೊಂಡಾಡಿದರು.

`ಅವರೊಬ್ಬ ಒಳ್ಳೆಯ ಸ್ನೇಹಿತರು ಮತ್ತು ಹಲವು ವರ್ಷಗಳಿಂದ ಒಬ್ಬ ಉತ್ತಮ ಬೆಂಬಲಿಗರಾಗಿದ್ದಾರೆ' ಎಂದು ಕ್ಯಾಲಿಫೋರ್ನಿಯಾದಲ್ಲಿ ಆಯೋಜಿಸಿದ್ದ ದೇಣಿಗೆ ಸಂಗ್ರಹ ಕಾರ್ಯಕ್ರಮದಲ್ಲಿ ಹೇಳಿದರು.

2008ರಲ್ಲಿ ವರದಿಗಾರ್ತಿಯೊಬ್ಬರನ್ನು `ಸ್ವೀಟಿ' ಎಂದು ಒಬಾಮ ಕರೆದು ಟೀಕೆಗೆ ಗುರಿಯಾಗಿದ್ದರು. ಈಗ ಕಮಲಾ ಬಗ್ಗೆ ನೀಡಿರುವ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.