ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯ ಸಮಸ್ಯೆಗೆ ಸ್ಪಂದಿಸುವ ಮೊಬೈಲ್ ಫೋನ್

Last Updated 18 ಫೆಬ್ರುವರಿ 2011, 16:40 IST
ಅಕ್ಷರ ಗಾತ್ರ

ಬಾರ್ಸಿಲೊನಾ (ಎಎಫ್‌ಪಿ): ಈ ಮೊಬೈಲ್‌ಫೋನ್ ನಿಮ್ಮ ಹೃದಯಕ್ಕೆ ಹತ್ತಿರವಾಗಿರುತ್ತದೆ. ಆದರೆ ಜೇಬಿನಲ್ಲಿ ಇಟ್ಟಿರುತ್ತೀರಿ ಎಂಬ ಕಾರಣದಿಂದಲ್ಲ. ಇದು ನಿಮ್ಮ ಹೃದಯದ ಸಮಸ್ಯೆಗೆ ತಕ್ಷಣ ಸ್ಪಂದಿಸುತ್ತದೆ.

ಇದು  ಹೃದಯದ ಇಸಿಜಿ (ವಿದ್ಯುತ್‌ತರಂಗದ ನಕಾಶೆ) ದಾಖಲಿಸುತ್ತದೆ, ನಾಡಿ ಮಿಡಿತ ಅಳೆಯುತ್ತದೆ. ಇವೆಲ್ಲವನ್ನೂ ಆಸ್ಪತ್ರೆಗೆ ರವಾನಿಸುತ್ತದೆ. ಹೃದಯದ ತಕ್ಷಣದ ಸ್ಥಿತಿಯ ಬಗ್ಗೆ ವೈದ್ಯರ ತಪಾಸಣಾ ವರದಿಯನ್ನು ಎಸ್‌ಎಂಎಸ್ ಮೂಲಕ ನಿಮಗೆ ಒದಗಿಸುತ್ತದೆ. ತೀರಾ ಗಂಭೀರ, ಜೀವಕ್ಕೆ ಅಪಾಯವೊಡ್ಡುವ ಸ್ಥಿತಿ ಇದ್ದರೆ ‘ಸರ್, ಅಂಬುಲೆನ್ಸ್ ನಿಮಗಾಗಿ ಬರುತ್ತಿದೆ’ ಎಂಬ ಕರೆಯ ಜತೆಗೇ ಆಸ್ಪತ್ರೆಗೆ ಒಯ್ಯುವ ವಾಹನ ನಿಮ್ಮ ಮುಂದೆ ಬಂದು ನಿಲ್ಲುವಂತೆ ಮಾಡುತ್ತದೆ!

ಮೊಬೈಲ್ ಫೋನ್ ರಂಗದಲ್ಲಿ ಚಿರಪರಿಚಿತವಾಗಿರುವ ಇಪಿಐ ಕಂಪೆನಿ ಈ ಹೊಸ ಸಲಕರಣೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ‘ಇಪಿಐ ಲೈಫ್’ ಹೆಸರಿನ ಈ ಸ್ಮಾರ್ಟ್‌ಫೋನ್ ಹ್ಯಾಂಡ್‌ಸೆಟ್‌ನ ಬೆಲೆ 700 ಡಾಲರ್ (ಸುಮಾರು 35,000 ರೂಪಾಯಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT