ಜೀವ ವೈವಿಧ್ಯಕ್ಕೆ ಧಕ್ಕೆಯಾದರೆ ಅನಾಹುತ: ನಿರ್ಮಲಾನಂದ ಸ್ವಾಮೀಜಿ

7

ಜೀವ ವೈವಿಧ್ಯಕ್ಕೆ ಧಕ್ಕೆಯಾದರೆ ಅನಾಹುತ: ನಿರ್ಮಲಾನಂದ ಸ್ವಾಮೀಜಿ

Published:
Updated:
Deccan Herald

ಬೆಂಗಳೂರು: ಜೀವ ವೈವಿಧ್ಯಕ್ಕೆ ಧಕ್ಕೆ ಉಂಟಾಗಿರುವುದೇ ಕೇರಳದಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪಕ್ಕೆ ಕಾರಣ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿಶ್ವ ಒಕ್ಕಲಿಗರ ಮಹಾವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತಾಯಿ ಸ್ವರೂಪಿ ಪ್ರಕೃತಿ ಸಕಲ ಚರಾಚರ ಜೀವಿಗಳನ್ನು ಸಲಹುತ್ತಿದೆ. ಸ್ವಾರ್ಥ ಮನೋಭಾವದ ಮನುಜ ಅದೇ ಪ್ರಕೃತಿಯ ಒಡಲಿಗೆ ನಿರಂತರ ಘಾಸಿ ಮಾಡುತ್ತಿದ್ದಾನೆ. ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಮತ್ತಷ್ಟು ಆತಂಕಗಳನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ನಿರ್ದಿಷ್ಟ ಸಮಾಜದ ಹೆಸರಿನಲ್ಲಿ ಒಗ್ಗಟ್ಟಾದರೂ ಇಡೀ ಸಮುದಾಯ ಒಳಿತು ಸಂಘಟನೆಯ ಮೂಲಭೂತ ಗುರಿಯಾಗಬೇಕು. ಇದೇ ಸತ್ಸಂಗದ ಮೂಲ ಉದ್ದೇಶ’ ಎಂದು ತಿಳಿಸಿದರು.

ಶಾಸಕ ಎಸ್.ಟಿ.ಸೋಮಶೇಖರ್, ವಿ.ವಿ.ಕುಲಪತಿ ಕೆ.ಆರ್. ವೇಣುಗೋಪಾಲ್ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !