ಭಾನುವಾರ, ಅಕ್ಟೋಬರ್ 20, 2019
22 °C

ಇಥಿಯೊಪಿಯಾ ಪ್ರಧಾನಿ ಅಬಿ ಅಹಮದ್ ಅಲಿಗೆ ನೊಬೆಲ್‌ ಶಾಂತಿ ಪ್ರಶಸ್ತಿ

Published:
Updated:
Prajavani

ಸ್ಟಾಕ್‌ಹೋಮ್‌: ಅಂತರ ರಾಷ್ಟ್ರೀಯ ಸಹಕಾರ ಮತ್ತು ಶಾಂತಿ ಸುವ್ಯವಸ್ಥೆಗೆ ನೀಡಿದ ಕೊಡುಗೆಗಾಗಿ ಇಥಿಯೊಪಿಯಾದ ಪ್ರಧಾನಿ ಅಬಿ ಅಹಮದ್‌ ಅಲಿ ಅವರಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ನೀಡಲಾಗಿದೆ.

ವಾರ್ಷಿಕ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಶುಕ್ರವಾರ ಪ್ರಕಟಿಸಲಾಗಿದೆ.

ಅಬಿ ಅಹಮದ್‌ ಅಲಿ ಅವರು ಪೂರ್ವ ಆಫ್ರಿಕಾದ ಉತ್ತರದಲ್ಲಿನ ಕೆಂಪು ಸಮುದ್ರ ತೀರಕ್ಕೆ ಹೊಂದಿಕೊಂಡಿರುವ ಎರಿಟ್ರಿಯ ದೇಶದ ಗಡಿ ಸಂಘರ್ಷವನ್ನು ಪರಿಹರಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು.

2019ರ ಶಾಂತಿ ಪುರಸ್ಕಾರವನ್ನು ಇಥಿಯೊಪಿಯಾದಲ್ಲಿ ಹಾಗೂ ಪೂರ್ವ ಮತ್ತು ಈಶಾನ್ಯ ಆಫ್ರಿಕಾದ ದೇಶಗಳಲ್ಲಿ ಶಾಂತಿ ಸಾಮರಸ್ಯಕ್ಕಾಗಿ ಕಾರ್ಯ ನಿರ್ವಹಿಸದ ಎಲ್ಲಾ ಪಾಲುದಾರರನ್ನು ಗುರುತಿಸಲು ಉದ್ದೇಶಿಸಲಾಗಿದೆ. 

ನೊಬೆಲ್‌ ಶಾಂತಿ ಪುರಸ್ಕೃತರಾದ ಅಬಿ ಅಹಮದ್ ಅಲಿ ಅವರು ಎರಿಟ್ರಿಯಾದ ಅಧ್ಯಕ್ಷ ಇಸಾಯಸ್‌ ಅಫ್ವೆರ್ಕಿ ಅವರ ನಿಟಕ ಸಹಕಾರದೊಂದಿಗೆ ದೇಶಗಳ ಮಧ್ಯೆ ಇದ್ದ ‘ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ’ದ ಬಿಕ್ಕಟ್ಟಿನ ಪರಿಸ್ಥಿತಿಯನ್ನು ನಿವಾರಿಸಲು ಶಾಂತಿ ಒಪ್ಪಂದದ ತತ್ವಗಳನ್ನು ತ್ವರಿತವಾಗಿ ರೂಪಿಸಿದ್ದರು.

* ಇವನ್ನೂ ಓದಿ...

ಓಲ್ಗಾ, ಪೀಟರ್‌ಗೆ ಸಾಹಿತ್ಯ ನೊಬೆಲ್‌

ರಸಾಯನ ವಿಜ್ಞಾನ ಕ್ಷೇತ್ರ: ಮೂವರಿಗೆ ನೊಬೆಲ್‌ ಪ್ರಶಸ್ತಿ

2019ನೇ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಣೆ

 

Post Comments (+)