ಎಫ್‌–16: ಅಮೆರಿಕ ಮನವಿ ಕುರಿತು ಮಾಹಿತಿ ಇಲ್ಲ: ಪಾಕ್‌

ಬುಧವಾರ, ಮಾರ್ಚ್ 27, 2019
26 °C
ರಾಯಭಾರಿ ಅಸದ್ ಮಜೀದ್ ಖಾನ್ ಹೇಳಿಕೆ

ಎಫ್‌–16: ಅಮೆರಿಕ ಮನವಿ ಕುರಿತು ಮಾಹಿತಿ ಇಲ್ಲ: ಪಾಕ್‌

Published:
Updated:
Prajavani

ವಾಷಿಂಗ್ಟನ್: ಎಫ್‌–16 ಯುದ್ಧ ವಿಮಾನ ಕುರಿತು ಮಾಹಿತಿ ನೀಡುವಂತೆ ಅಮೆರಿಕ ಮನವಿ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಅಮೆರಿಕಕ್ಕೆ ಪಾಕಿಸ್ತಾನದ ರಾಯಭಾರಿ ಆಗಿರುವ ಅಸದ್ ಮಜೀದ್ ಖಾನ್ ತಿಳಿಸಿದ್ದಾರೆ. 

‘ಭಾರತದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಗೆ ಅಮೆರಿಕ ನಿರ್ಮಿತ ಎಫ್‌–16 ಬಳಸಲಾಗಿದೆ’ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಎಫ್–16 ದುರ್ಬಳಕೆಯಾಗಿದೆ ಮತ್ತು ಬಳಕೆದಾರರ ಒಪ್ಪಂದವನ್ನು ಪಾಕಿಸ್ತಾನ ಉಲ್ಲಂಘಿಸಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ಕೋರಲಾಗಿದೆ ಎಂದು ಅಮೆರಿಕ ವಿದೇಶಾಂಗ ಇಲಾಖೆ ತಿಳಿಸಿತ್ತು. 

‘ತೀರ್ಪುಗಾರರಂತೆ ವರ್ತಿಸಿದ ಭಾರತ’: ಪುಲ್ವಾಮಾ ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನದ ಮೇಲೆ ದಾಳಿ ನಡೆಸಿದ ಭಾರತ, ‘ತೀರ್ಪುಗಾರ ಹಾಗೂ ಮರಣದಂಡನೆ ವಿಧಿಸುವವರಂತೆ’ ವರ್ತಿಸಲು ಮುಂದಾಯಿತು ಎಂದು ಅಸದ್ ಮಜೀದ್ ಖಾನ್ ಹೇಳಿದ್ದಾರೆ. 

‘ಪಾಕಿಸ್ತಾನದಲ್ಲಿರುವ ಭಯೋತ್ಪಾದಕರ ನೆಲೆ ಮೇಲೆ ದಾಳಿ ನಡೆಸಿ 300ಕ್ಕೂ ಹೆಚ್ಚು ಉಗ್ರರನ್ನು ಕೊಂದಿದ್ದೇವೆ ಎನ್ನುವ ಭಾರತದ ಹೇಳಿಕೆಯನ್ನು, ತಟಸ್ಥ ಧೋರಣೆ ಹೊಂದಿರುವ ವೀಕ್ಷಕರು ಹಾಗೂ ಭಾರತದಲ್ಲಿಯೇ ಇರುವ ಹಲವರು ನಿರಾಕರಿಸಿದ್ದಾರೆ’ ಎಂದು ಖಾನ್ ಹೇಳಿದ್ದಾರೆ. 

‘ಪಾಕಿಸ್ತಾನದಲ್ಲಿ ಸಂಘಟಿತ ಉಗ್ರರ ಗುಂಪು ಇಲ್ಲ’ ಎಂದು ಖಾನ್ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !