ಉತ್ತಮವಾದ, ಆದರೆ ದುಬಾರಿಯಾದ ಫೋನ್ಗಳನ್ನು ತಯಾರಿಸುತ್ತಿರುವ ಸ್ಯಾಮ್ಸಂಗ್ನವರಿಂದ ಇನ್ನೊಂದು ದುಬಾರಿ ಫೋನ್ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7

ಸ್ಯಾಮ್ಸಂಗ್ ಕಂಪೆನಿ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಸದ್ಯದಲ್ಲಿ ಮುಂಚೂಣಿಯಲ್ಲಿದೆ ಎನ್ನಬಹುದು. ಕೆಲವು ಉತ್ತಮ ಹಾಗೂ ಅತ್ಯುತ್ತಮ ಫೋನ್ಗಳನ್ನು ಅದು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಬಂದಿದೆ. ಆದರೆ ಭಾರತೀಯ ಸಂದರ್ಭದಲ್ಲಿ ಈ ಉತ್ಪನ್ನಗಳು ದುಬಾರಿ ಎಂದು ಹೇಳಬಹುದು.

ಸ್ಯಾಮ್ಸಂಗ್ನವರ ದುಬಾರಿ ಉತ್ಪನ್ನಗಳನ್ನು ಈ ಅಂಕಣದಲ್ಲಿ ವಿಮರ್ಶೆ ಮಾಡಲಾಗಿತ್ತು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್7 (Samsung Galaxy S7) ಎಂಬ ದುಬಾರಿ ಉತ್ಪನ್ನವನ್ನು.

ಗುಣವೈಶಿಷ್ಟ್ಯಗಳು
2.6 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಮತ್ತು 1.6 ಗಿಗಾಹರ್ಟ್ಸ್ ವೇಗದ ನಾಲ್ಕು ಹೃದಯಗಳ ಪ್ರೊಸೆಸರ್, ಗ್ರಾಫಿಕ್ಸ್ಗಾಗಿ ಅಧಿಕ ಪ್ರೊಸೆಸರ್, 4+32 ಗಿಗಾಬೈಟ್ ಮೆಮೊರಿ, ಅಧಿಕ ಮೆಮೊರಿಗೆ ಮೈಕ್ರೊಎಸ್ಡಿ ಕಾರ್ಡ್ ಹಾಕಿಕೊಳ್ಳುವ ಸೌಲಭ್ಯ ಇದೆ, 5.1 ಇಂಚು ಗಾತ್ರದ 2560X1440 ಪಿಕ್ಸೆಲ್ ರೆಸೊಲೂಶನ್ನ ಸೂಪರ್ ಅಮೋಲೆಡ್ ಪರದೆ, ಗೊರಿಲ್ಲ-4 ಗಾಜು,

12 ಮೆಗಾಪಿಕ್ಸೆಲ್ನ ಪ್ರಾಥಮಿಕ ಕ್ಯಾಮೆರಾ, ಅದಕ್ಕೆ ಎಲ್ಇಡಿ ಫ್ಲಾಶ್, 5 ಮೆಗಾಪಿಕ್ಸೆಲ್ನ ಇನ್ನೊಂದು ಎದುರುಗಡೆಯ ಸ್ವಂತಿ ಕ್ಯಾಮೆರಾ, ಮೂರು ಮೈಕ್ಗಳು, 2G/3G/4G ಮೈಕ್ರೋ ಮತ್ತು ನ್ಯಾನೋ ಸಿಮ್, ವೈಫೈ, ಅಕ್ಸೆಲೆರೋಮೀಟರ್, ಬೆರಳಚ್ಚು ಸ್ಕ್ಯಾನರ್, ಯುಎಸ್ಬಿ ಓಟಿಜಿ, ಎನ್ಎಫ್ಸಿ, 3000mAh ಬ್ಯಾಟರಿ, 142.4 x69.6 x7.9 ಮಿ.ಮೀ. ಗಾತ್ರ, 152 ಗ್ರಾಂ ತೂಕ, ಆಂಡ್ರಾಯ್ಡ್ 6.0.1, ವಯರ್ಲೆಸ್ ಚಾರ್ಜಿಂಗ್, ಇತ್ಯಾದಿ. ಮಾರುಕಟ್ಟೆ ಬೆಲೆ ಸುಮಾರು ₹52,000.

ಬಹುಮಟ್ಟಿಗೆ ಇದು ಇತರೆ ಗ್ಯಾಲಕ್ಸಿ ಫೋನ್ಗಳಂತೆಯೇ ಇದೆ. ರಚನೆ ಮತ್ತು ವಿನ್ಯಾಸ ತುಂಬ ಚೆನ್ನಾಗಿದೆ. ಲೋಹದ ಫ್ರೇಂ ಇದೆ. ಹಿಂಭಾಗದ ಕವಚ ತೆಗೆಯಲು ಬರುವುದಿಲ್ಲ. ಅದನ್ನು ಲೋಹದಿಂದ ತಯಾರಿಸಿದಂತಿದೆ. ಈ ಕವಚ ತುಂಬ ನಯವಾಗಿದೆ. ಆದುದರಿಂದಾಗಿ ಅದು ಕೈಯಿಂದ ಜಾರಿ ಬೀಳುವ ಸಂಭವ ಹೆಚ್ಚು. ಬಲಭಾಗದಲ್ಲಿ ಆನ್/ಆಫ್ ಸ್ವಿಚ್, ಎಡಭಾಗದಲ್ಲಿ ವಾಲ್ಯೂಮ್ ಬಟನ್ಗಳಿವೆ. ಮೇಲ್ಭಾಗದಲ್ಲಿ ಸಿಮ್ ಕಾರ್ಡ್ ಹಾಕಲು ಹೊರಬರುವ ಟ್ರೇ ಇದೆ. ಅದನ್ನು ತೆಗೆಯಲು ಚಿಕ್ಕ ಪಿನ್ ಬಳಸಬೇಕು.

ಕೆಳಭಾಗದಲ್ಲಿ ಮೈಕ್ರೊಯುಎಸ್ಬಿ ಕಿಂಡಿ ಮತ್ತು 3.5 ಮಿ.ಮೀ. ಇಯರ್ಫೋನ್ ಕಿಂಡಿ ನೀಡಿದ್ದಾರೆ. ಕೆಳಭಾಗದಲ್ಲಿ ಮೈಕ್ರೋಯುಎಸ್ಬಿ ಕಿಂಡಿ ಮತ್ತು ಪಕ್ಕದಲ್ಲೇ 3.5 ಮಿ.ಮೀ. ಇಯರ್ಫೋನ್ ಕಿಂಡಿ ನೀಡಿದ್ದು, ನನಗೇನೋ ಅಷ್ಟೊಂದು ಹಿಡಿಸಲಿಲ್ಲ. ಯುಎಸ್ಬಿ ಓಟಿಜಿ ಬೆಂಬಲ ಇರುವುದರಿಂದ ಅಂತಹ ಡ್ರೈವ್ ಜೋಡಿಸಿದರೆ ಆಗ 90 ಡಿಗ್ರಿ ಕೋನದಲ್ಲಿ ಬಾಗಿರುವ ಇಯರ್ಫೋನ್ ಕನೆಕ್ಟರ್ ಜೋಡಿಸಲಿಕ್ಕೆ ಸ್ವಲ್ಪ ಕಷ್ಟಪಡಬೇಕಾಗುತ್ತದೆ.

12 ಮೆಗಾಪಿಕ್ಸೆಲ್ನ ಕ್ಯಾಮೆರಾ ಇದೆ. ಎಲ್ಇಡಿ ಫ್ಲಾಶ್ ಇದೆ. ಕ್ಯಾಮೆರಾದ ಗುಣಮಟ್ಟ ನಿಜಕ್ಕೂ ತುಂಬ ಚೆನ್ನಾಗಿದೆ. ಉತ್ತಮ ಬೆಳಕಿನಲ್ಲಿ ಮಾತ್ರವಲ್ಲ ಕಡಿಮೆ ಬೆಳಕಿನಲ್ಲೂ ಉತ್ತಮ ಫೋಟೊ ಮೂಡಿಬರುತ್ತದೆ. ಹತ್ತಿರದ ವಸ್ತುಗಳ ಚಿತ್ರದ (closeup) ಜೊತೆಗೆ ದೂರದ ವಸ್ತುಗಳ ಚಿತ್ರ ಕೂಡ ತುಂಬ ಚೆನ್ನಾಗಿ ಮೂಡಿಬರುತ್ತದೆ.

16, 20 ಮೆಗಾಪಿಕ್ಸೆಲ್ ರೆಸೊಲೂಶನ್ ಇದ್ದರೂ ಇದಕ್ಕಿಂತ ಕಳಪೆ ಗುಣಮಟ್ಟದ ಫೋಟೊ ತೆಗೆಯುವ ಹಲವು ಫೋನ್ ಕ್ಯಾಮೆರಾಗಳನ್ನು ನಾನು ನೋಡಿದ್ದೇನೆ. ಚಿತ್ರದ ಗುಣಮಟ್ಟವನ್ನು ಕೇವಲ ಮೆಗಾಪಿಕ್ಸೆಲ್ ತೀರ್ಮಾನಿಸುವುದಿಲ್ಲ ಎಂದು ನಾನು ಹಲವು ಸಲ ಬರೆದಿದ್ದೇನೆ. ಕಡಿಮೆ ಮೆಗಾಪಿಕ್ಸೆಲ್ ರೆಸೊಲೂಶನ್ ಇದ್ದೂ ಉತ್ತಮ ಫೋಟೊ ತೆಗೆಯುವ ಕ್ಯಾಮೆರಾ ಈ ಫೋನ್ನಲ್ಲಿದೆ.

ಸ್ವಂತಿ ತೆಗೆಯಲು ಇದು ವಿಶೇಷ ಸವಲತ್ತು ನೀಡಿದೆ. ಸ್ವಂತಿ ತೆಗೆಯುವಾಗ, ಬೇಕಿದ್ದಲ್ಲಿ ಇಡಿಯ ಪರದೆಯನ್ನೇ ಪ್ರಖರವಾಗಿಸಿ ಅದು ಫ್ಲಾಶ್ನಂತೆ ಕೆಲಸ ಮಾಡುತ್ತದೆ. ಆಗ ಕಡಿಮೆ ಬೆಳಕಿನಲ್ಲೂ ಸ್ವಂತಿ ಚೆನ್ನಾಗಿ ಮೂಡಿಬರುತ್ತದೆ. ಇದು ಹೈಡೆಫಿನಿಶನ್ ವಿಡಿಯೊ ರೆಕಾರ್ಡಿಂಗ್ ಕೂಡ ಮಾಡಬಲ್ಲುದು.

ಇದು ತಯಾರಿಸಿದ ವಿಡಿಯೊ ಗುಣಮಟ್ಟ ಚೆನ್ನಾಗಿದೆ. ವಿಡಿಯೊ ಚಿತ್ರೀಕರಣ ಮಾಡುವಾಗ ಧ್ವನಿಯನ್ನು ಸ್ಟಿರಿಯೊ ವಿಧಾನದಲ್ಲಿ ರೆಕಾರ್ಡಿಂಗ್ ಮಾಡುತ್ತದೆ. ಇದರ ಆಡಿಯೊ ಇಂಜಿನ್ ಚೆನ್ನಾಗಿದೆ. ಉತ್ತಮ ಹೆಡ್ಫೋನ್ ಅಥವಾ ಇಯರ್ಫೋನ್ ಬಳಸಿ ಅತ್ಯುತ್ತಮ ಸಂಗೀತ ಆಲಿಸುವ ಅನುಭವ ಪಡೆಯಬಹುದು.
ದುಬಾರಿ ಫೋನ್ ಆಗಿರುವುದರಿಂದ, ಎಂಟು ಹೃದಯಗಳ ಪ್ರೊಸೆಸರ್ ಇರುವುದರಿಂದ, ಇದರ ಕೆಲಸದ ವೇಗ ಅತ್ಯುತ್ತಮವಾಗಿದೆ.

ಪರದೆಯಲ್ಲಿ ಐಕಾನ್ಗಳನ್ನು ಸರಿಸುವ ಅನುಭವ ಅತ್ಯುತ್ತಮವಾಗಿದೆ. ಅತಿ ವೇಗದ ಪ್ರೊಸೆಸರ್ ಮತ್ತು ಸೂಪರ್ ಅಮೋಲೆಡ್ ಪರದೆ ಇರುವುದರಿಂದ ಇದು ಸಾಧ್ಯವಾಗಿದೆ. ಸೂಪರ್ ಅಮೋಲೆಡ್ ಆಗಿರುವುದರಿಂದ ಬ್ಯಾಟರಿ ಬಳಕೆ ಕೂಡ ಕಡಿಮೆಯೇ. ಎಲ್ಲಾ ನಮೂನೆಯ ಆಟಗಳನ್ನು ಸಂಪೂರ್ಣ ತೃಪ್ತಿದಾಯಕವಾಗಿ ಆಡಬಹುದು.

ಇದರಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಇದರ ಬೆರಳಚ್ಚು ಸ್ಕ್ಯಾನರ್ ತೃಪ್ತಿದಾಯಕವಾಗಿದೆ. ನಿಮ್ಮ ಬೆರಳಚ್ಚನ್ನೇ ನೀವು ಪಾಸ್ವರ್ಡ್ ಮಾಡಿಟ್ಟುಕೊಳ್ಳಬಹುದು. ಇದನ್ನು ವಯರ್ಲೆಸ್ ವಿಧಾನದಲ್ಲಿ ಚಾರ್ಜ್ ಮಾಡಬಹುದು. ಆದರೆ ಅದಕ್ಕಾಗಿ ಸ್ಯಾಮ್ಸಂಗ್ನವರದೇ ವಿಶೇಷ ಚಾರ್ಜರ್ ಕೊಂಡುಕೊಳ್ಳಬೇಕು. ಅದರ ಮೇಲೆ ಈ ಫೋನನ್ನು ಇಟ್ಟರೆ ಸಾಕು. ಯಾವುದೇ ಕೇಬಲ್ ಜೋಡಣೆಯಿಲ್ಲದೆ ಫೋನ್ ಚಾರ್ಜ್ ಆಗುತ್ತದೆ.

ಕನ್ನಡದ ತೋರುವಿಕೆ ಸರಿಯಾಗಿದೆ ಮಾತ್ರವಲ್ಲ ಸಂಪೂರ್ಣ ಕನ್ನಡ ಯೂಸರ್ ಇಂಟರ್ಫೇಸ್ ಕೂಡ ಇದೆ. ಸ್ಯಾಮ್ಸಂಗ್ನವರದೇ ಆದ ಕೀಲಿಮಣೆ ಇದೆ. ಆದರೆ ಅದರ ವಿನ್ಯಾಸ ಮಾತ್ರ ಸ್ವಲ್ಪ ವಿಚಿತ್ರವಾಗಿದೆ. ಒಟ್ಟಿನಲ್ಲಿ ದುಬಾರಿಯಾದ ಆದರೆ ಅತ್ಯುತ್ತಮ ಫೋನ್ ಎನ್ನಬಹುದು.

ವಾರದ ಆ್ಯಪ್ - ವಿಜ್ಞಾನ ಆಟ
ನಿಮ್ಮೊಳಗೊಬ್ಬ ಐನ್ಸ್ಟೀನ್ ಇದ್ದಾನೆಯೇ? ಅಂದರೆ ನಿಮ್ಮಳಗೊಬ್ಬ ಭೌತವಿಜ್ಞಾನಿ ಇದ್ದಾನೆಯೇ? ನೀವು ವಿದ್ಯಾರ್ಥಿ, ಅಧ್ಯಾಪಕ ಅಥವಾ ವಿಜ್ಞಾನದಲ್ಲಿ ಆಸಕ್ತಿ ಇರುವ ಯಾರೂ ಆಗಿರಬಹುದು. ಭೌತವಿಜ್ಞಾನ, ಅದರಲ್ಲೂ ಮುಖ್ಯವಾಗಿ ಅಲೆಗಳ ಬಗ್ಗೆ ಸುಲಭವಾಗಿ ಕಲಿಯಲು ಈ Science Game - Magnetism Waves ಎಂಬ ಕಿರು ತಂತ್ರಾಂಶ (ಆ್ಯಪ್) ನಿಮಗೆ ಸಹಾಯ ಮಾಡುತ್ತದೆ.

ಇದು ಬೇಕಿದ್ದಲ್ಲಿ ನೀವು ನಿಮ್ಮ ಬ್ರೌಸರಿನಲ್ಲಿ bitly.com/gadgetloka226 ಎಂದು ಟೈಪ್ ಮಾಡಿ. ಇದು ಆಂಡ್ರಾಯ್ಡ್ ಫೋನಿನಲ್ಲಿ ಕೆಲಸ ಮಾಡುತ್ತದೆ. ಅಯಸ್ಕಾಂತ, ವಿದ್ಯುತ್, ಅಲೆಗಳು, ಡೈನಾಮೊ, ಮೋಟಾರ್, ಇತ್ಯಾದಿ ಸುಮಾರು 200 ವಿಷಯಗಳ ಬಗೆಗೆ ಮಾಹಿತಿ, ವಿವರಣೆ ಹಾಗೂ ಆಟಗಳು ಇಲ್ಲಿವೆ. ವಿದ್ಯಾರ್ಥಿಗಳಿಗಂತೂ ನಿಜಕ್ಕೂ ಉತ್ತಮ ಉಪಯುಕ್ತ ಕಿರುತಂತ್ರಾಂಶ. ಇದನ್ನು ತಯಾರಿಸಿದವರು ನಮ್ಮ ಬೆಂಗಳೂರಿನವರೇ.

ಗ್ಯಾಜೆಟ್ ಸುದ್ದಿ- ಬಳಸಿದ ಐಫೋನ್ಗೆ ಭಾರತದಲ್ಲಿ ಜಾಗವಿಲ್ಲ
ಬಳಸಿದ ಹಳೆಯ ಹಾಗೂ ದುರಸ್ತಿ ಮಾಡಿದ ಐಫೋನ್ಗಳನ್ನು ಭಾರತಕ್ಕೆ ತಂದು ಮಾರಲು ಆಪಲ್ ಕಂಪೆನಿ ಭಾರತ ಸರ್ಕಾರಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ ಅವರ ಅರ್ಜಿಯನ್ನು ಭಾರತ ಸರ್ಕಾರ ಮಂಜೂರು ಮಾಡಿಲ್ಲ. ಇದರಿಂದಾಗಿ ಭಾರತದಲ್ಲಿ ಕಡಿಮೆ ಬೆಲೆಗೆ ಐಫೋನ್ ದೊರೆಯುವ ಸಾಧ್ಯತೆ ಇಲ್ಲದಾಗಿದೆ.

ಭಾರತ ಸರ್ಕಾರದ ‘ಭಾರತದಲ್ಲೇ ತಯಾರಿಸಿ’ ಘೋಷಣೆಗೆ ವ್ಯತಿರಿಕ್ತವಾಗಿ ಹಳೆಯ, ದುರಸ್ತಿ ಮಾಡಿದ ಐಫೋನ್ಗಳನ್ನು ಭಾರತಕ್ಕೆ ತಂದು ಮಾರಲು ಆಪಲ್ ಕಂಪೆನಿಗೆ ಅನುವು ಮಾಡಿಕೊಡಬಾರದು ಎಂದು ಹಲವು ಪ್ರಾಜ್ಞರು ಸರ್ಕಾರಕ್ಕೆ ಒತ್ತಡ ತಂದಿದ್ದರು.

ಅದರಲ್ಲಿ ತಥ್ಯ ಇರುವುದನ್ನು ಮನಗಂಡ ಸರ್ಕಾರ ಈ ತೀರ್ಮಾನ ತೆಗೆದುಕೊಂಡಿದೆ. ಬೆಲೆ ಕಡಿಮೆ ಮಾಡುವುದು ಆಪಲ್ ಕಂಪೆನಿಯ ಜಾಯಮಾನವಲ್ಲ. ಆದುದರಿಂದ ಎಂದಿನಂತೆ ಅತಿ ಶ್ರೀಮಂತರು ಮಾತ್ರ ಕೊಂಡುಕೊಳ್ಳುವ ವಸ್ತುವಾಗಿ ಐಫೋನ್ ಭಾರತದಲ್ಲಿ ಮುಂದುವರೆಯಲಿದೆ. ಅಂದ ಹಾಗೆ ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಐಫೋನ್ ಪಾಲು ಕೇವಲ 2% ಅಥವಾ ಅದಕ್ಕಿಂತಲೂ ಕಡಿಮೆ.

ಗ್ಯಾಜೆಟ್ ಸಲಹೆ- ವನಿತಾ ಅವರ ಪ್ರಶ್ನೆ: ಶಿಯೋಮಿ ಎಂಐ4i ಓಟಿಜಿ ಬೆಂಬಲಿಸುತ್ತದೆಯೇ ಹಾಗೂ ಈ ಫೋನ್ ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆಯೇ?
ಉ: ಎರಡು ಪ್ರಶ್ನೆಗಳಿಗೂ ‘ಹೌದು’ ಎಂದೇ ಉತ್ತರ. buy.mi.com/in/buy/product/mi4i ಜಾಲತಾಣದಿಂದ ಕೊಳ್ಳಬಹುದು.

ಗ್ಯಾಜೆಟ್ ತರ್ಲೆ- ಮುಂಚೆ ಎಲ್ಲ ಜನ ರಾತ್ರಿ ಮಲಗಿದ್ದಾಗ ಎಚ್ಚರ ಆದ್ರೆ ಪಕ್ಕದಲ್ಲಿ ಇಟ್ಟುಕೊಂಡ ನೀರು ಕುಡಿದು ಮತ್ತೆ ಮಲಗುತ್ತಿದ್ರು. ಈವಾಗ ರಾತ್ರಿ ಹೊತ್ತು ಎಚ್ಚರ ಆದ್ರೆ, ಮತ್ತೆ ನಿದ್ದೆ ಬರೋವರೆಗೂ ಫೇಸ್ಬುಕ್, ವಾಟ್ಸ್ಆಪ್ ನೋಡ್ತಾರೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.