ಅದೊಂದು ಸಮುದ್ರ ತೀರದಲ್ಲಿದ್ದ ಕಟ್ಟಡ. ಸಂಜೆಯಾಗುತ್ತಿತ್ತು. ಆಗೊಬ್ಬ ಹಿರಿಯ ವಯಸ್ಸಿನ ಮನುಷ್ಯ ನಿಧಾನವಾಗಿ ಮೇಲಕ್ಕೆದ್ದ. ಮೇಜಿನ ಮೇಲಿದ್ದ ಮೇಣದ ಬತ್ತಿ ತೆಗೆದುಕೊಂಡ. ಅದರ ಮುಂದಿನ ಬತ್ತಿಯನ್ನು ಕೈಯಿಂದ ಹೊಸೆದು ಕಪ್ಪಗಾಗಿದ್ದ ಭಾಗವನ್ನು ತೆಗೆದುಬಿಟ್ಟ.

ನಂತರ ಕಡ್ಡಿಗೀರಿ ದೀಪ ಹಚ್ಚಿದ. ಅದು ಚೆನ್ನಾಗಿ ಉರಿಯತೊಡಗಿದ ಮೇಲೆ ತನ್ನ ಎಡಗೈಯನ್ನು ಅದಕ್ಕೆ ಮರೆಯಾಗಿ ಗಾಳಿ ತಾಗದಂತೆ ಮಾಡಿದ. ಆಮೇಲೆ ನಿಧಾನವಾಗಿ ಮೆಟ್ಟಿಲುಗಳನ್ನು ಏರತೊಡಗಿದ.

ಅವು ಸುತ್ತಿಸುತ್ತಿಕೊಂಡು ಹೋಗುವ ಮೆಟ್ಟಿಲುಗಳು. ಆಗ ಮೇಣದ ಬತ್ತಿ ಕೇಳಿತು, `ಅಯ್ಯಾ, ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತೀ. ಇದು ಯಾವ ಸ್ಥಳ~. ಆ ಹಿರಿಯ ಮಾತನಾಡುತ್ತಲೇ ಮೆಟ್ಟಿಲುಗಳನ್ನು ಏರತೊಡಗಿದ.

`ಇದು ಒಂದು ರೀತಿಯ ಬೆಳಕಿನ ಮನೆ. ಜನರಿಗೆ ದಾರಿ ತೋರಿಸುವ, ದಾರಿ ತಪ್ಪಿದವರಿಗೆ ಮಾರ್ಗದರ್ಶನ ಮಾಡುವ ಮನೆ. ನಾನು ಹೀಗೆಯೇ ಸುತ್ತಿ, ಸುತ್ತಿ ಮೇಲೆ ಮೇಲೇರಿ ಹೋಗುತ್ತೇನೆ. ತುಂಬ ಎತ್ತರದಲ್ಲಿ ನಿನ್ನನ್ನು ಕೂಡ್ರಿಸುತ್ತೇನೆ. ಆಗ ನೀನು ಈ ಮಾರ್ಗವಾಗಿ ಬರುವ ಹಡಗುಗಳಿಗೆಲ್ಲ ಕಾಣಿಸುತ್ತೀಯಾ. ಹಡಗಿನ ಚಾಲಕರು ನಿನ್ನನ್ನು ನೋಡಿ ದಾರಿ ತಿಳಿದುಕೊಳ್ಳುತ್ತಾರೆ.

ದಾರಿ ತಪ್ಪಿದ ಹಡಗುಗಳು ನಿನ್ನಿಂದಾಗಿ ಬಂದು ತೀರಕ್ಕೆ ಅಪ್ಪಳಿಸುವುದಿಲ್ಲ~. ಮೇಣದ ಬತ್ತಿ ಹೇಳಿತು, `ನಾನು ಇದನ್ನೆಲ್ಲ ಮಾಡಬಲ್ಲೆನೇ. ನನ್ನ ಬೆಳಕು ಕೋಣೆಯ ಇನ್ನೊಂದು ತುದಿಯನ್ನು ತಲುಪಲಾರದು. ಅಷ್ಟೇ ಏಕೆ ನನ್ನ ಪಕ್ಕದಲ್ಲೇ ಕುಳಿತವರಿಗೂ ಪುಸ್ತಕದ ಅಕ್ಷರಗಳು ಕಾಣಲಾರವು.

ಹಾಗಿರುವಾಗ ಅಷ್ಟು ದೂರದಲ್ಲಿರುವ ಹಡಗುಗಳಿಗೆ ನಾನು ಹೇಗೆ ಕಂಡೇನು~. ಹಿರಿಯರಿಗೆ ಮೇಣಬತ್ತಿಯ ಆತಂಕ ಅರ್ಥವಾಯಿತು. ಆತ ಹೇಳಿದ, `ನಿನಗೇಕೆ ಅದರ ಚಿಂತೆ. ಆ ವಿಚಾರ ನನಗೆ ಬಿಡು. ನಿನ್ನ ಪಾಡಿಗೆ ನಿಶ್ಚಿಂತವಾಗಿ ಸದಾ ಉರಿಯುತ್ತಿರು. ಅಷ್ಟು ಮಾಡಿದರೆ ಸಾಕು. ನನ್ನ ಮೇಲೆ ನಂಬಿಕೆ ಇರಲಿ~.

ಮೇಣದ ಬತ್ತಿಗೆ ಅವನ ಮೇಲೆ ನಂಬಿಕೆ ಇದ್ದರೂ, ತನ್ನ ಶಕ್ತಿಯ ಮೇಲೆ ನಂಬಿಕೆ ಇರಲಿಲ್ಲ. ಸುಮ್ಮನೇ ತನ್ನ ಪಾಡಿಗೆ ಉರಿಯತೊಡಗಿತು. ಹಿರಿಯ ಅಂತೂ ಕೊನೆಯ ಮಹಡಿಗೆ ಬಂದ. ಮೇಣದಬತ್ತಿಯನ್ನು ಒಂದು ಬದಿಗೆ ಇಟ್ಟು ಕೊಠಡಿಯ ಮಧ್ಯದಲ್ಲಿದ್ದ ಎಲ್ಲ ಕನ್ನಡಿಗಳನ್ನು ಚೆನ್ನಾಗಿ ಒರೆಸಿ ಶುದ್ಧಮಾಡಿದ.

ನಂತರ ಮೇಣದ ಬತ್ತಿಯನ್ನು ಮಧ್ಯದಲ್ಲಿ ಇಟ್ಟು ಸುತ್ತಲೂ ಕನ್ನಡಿಗಳನ್ನು ಎರಡು ಮೂರು ಸುತ್ತು ವಲಯಗಳನ್ನಾಗಿ ಇಟ್ಟ. ಪುಟ್ಟ ಮೇಣದ ಬತ್ತಿಯ ಬೆಳಕು ಹಿರಿದಾಗಿ ಕನ್ನಡಿಯ ಮೂಲಕ ಪ್ರತಿಫಲಿಸಿತು. ಪ್ರತಿಫಲನ ಎದುರಿಗಿದ್ದ ಮತ್ತೊಂದು ಕನ್ನಡಿಯಲ್ಲಿ ಮತ್ತಷ್ಟು ಪ್ರಖರವಾಗಿ ಮಿಂಚಿತು. ಆ ಮಿಂಚು ಇನ್ನೊಂದು ಕನ್ನಡಿಯಲ್ಲಿ ಇನ್ನೂ ಜೋರಾಗಿ ಹೊಳೆಯಿತು.

ಹೀಗೆ ಎಲ್ಲ ಬದಿಗಳಲ್ಲಿ ಇಟ್ಟಿದ್ದ ಕನ್ನಡಿಗಳಿಂದಾಗಿ ಬಲಗೊಂಡ ಪ್ರತಿಫಲನ ಕಣ್ಣು ಕೋರೈಸುವಷ್ಟು ತೀಕ್ಷ್ಣವಾಯಿತು, ದೂರಕ್ಕೆ ಕಾಣುವಂತಾಯಿತು. ಇದು ಮೇಣದ ಬತ್ತಿಗೆ ತೃಪ್ತಿ ತಂದಿತು.

ನಾವೂ ಒಂದು ಮೇಣದ ಬತ್ತಿಯೇ. ನಮ್ಮ ಶಕ್ತಿಯೂ ಅಲ್ಪವೇ. ಆದರೆ ಅದರ ಮಿತಿಯನ್ನು ಮಾತ್ರ ಗಮನಿಸಿ ಕೊರಗುವುದಕ್ಕಿಂತ, ನಮಗೆ ಶಕ್ತಿ ನೀಡಿದ ಭಗವಂತನಲ್ಲಿ ನಂಬಿಕೆಯನ್ನಿಟ್ಟು ನಮ್ಮ ಪ್ರಯತ್ನಗಳನ್ನು ಶ್ರದ್ಧೆಯಿಂದ ನಡೆಸಿದ್ದೇ ಆದರೆ ಆತ ನಮ್ಮ ಸುತ್ತ ತನ್ನ ಕೃಪೆಯ ಕನ್ನಡಿಗಳನ್ನಿಟ್ಟು ನಮ್ಮ ಶಕ್ತಿ ಸಾವಿರಪಟ್ಟು ಹೆಚ್ಚಾಗುವಂತೆ ಮಾಡುತ್ತಾನೆ, ಎತ್ತರಕ್ಕೆ ಕರೆದೊಯ್ಯುತ್ತಾನೆ, ಜೀವನ ಪ್ರಯೋಜನಕಾರಿಯಾಗುವಂತೆ ಮಾಡುತ್ತಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.