ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪ ಹೇಳಿದ ‘ಸೌಗಂಧಿಕ’

Last Updated 30 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ನಮ್ಮನೆ ಇರುವುದು ಹೆಸರಘಟ್ಟದಲ್ಲಿ.  ಮನೆ ನಿರ್ಮಾಣ ಮುಕ್ತಾಯವಾಗುತ್ತಿದೆ ಎನ್ನುವಾಗ ಯಾವ ಹೆಸರಿಡುವುದು ಎಂಬ ಚರ್ಚೆ ಆರಂಭವಾಯಿತು. ನಮ್ಮನೆ ದೇವರ ಹೆಸರು ‘ಮರಡಿ ರಂಗನಾಥ ಸ್ವಾಮಿ’. ಹಾಗಾಗಿ ಮರಡಿ ಎಂಬ ಹೆಸರಿಡೋಣ ಎಂದುಕೊಂಡೆವು. ಆದರೆ ಕೆಲವರಿಂದ ಬೇಡ ಎನ್ನುವ ಅಭಿಪ್ರಾಯ ಬಂತು. ಹೀಗೆ ಚರ್ಚೆ ನಡೆಯುತ್ತಿರುವಾಗಲೇ ಅಪ್ಪ ಮನೆಗೆ ಬಂದರು. ಅವರ ಜೊತೆಗೆ ನಾವು ಹೊಸದಾಗಿ ಕಟ್ಟುತ್ತಿರುವ ಮನೆ ನೋಡಲು ಹೋದೆ. ಆಗ ಮನೆಯ ಹೆಸರು ಏನೆಂದು ನಿರ್ಧರಿಸಿದ್ದೀರಿ ಎಂದು ಕೇಳಿದರು. ನಾನು ಇನ್ನು ಚರ್ಚೆಯ ಹಂತದಲ್ಲಿಯೇ ಇದೆ ಎಂದು ಹೇಳಿದೆ.

ಅದಕ್ಕೆ ಅವರು ಮನೆಗೆ ‘ಸೌಗಂಧಿಕ’ ಎಂಬ ಹೆಸರಿಡಿ. ಹೂವುಗಳ  ಹಾಗೆಯೇ ಮನೆಯವರ ಹೆಸರೂ ಎಲ್ಲಾ ಕಡೆ ಪಸರಿಸಲಿ ಎಂದರು. ನಮಗೂ ಆ ಹೆಸರು ತುಂಬಾ ಮೆಚ್ಚುಗೆಯಾಯಿತು.

ನಮ್ಮನೆಗೆ ‘ಸೌಗಂಧಿಕ’ ಹೆಸರಿಟ್ಟು, 2004ರ ವಿಜಯದಶಮಿಯಂದು ಮನೆ ಪೂಜೆ ಮಾಡಿದೆವು. ಎಲ್ಲರ ಹಾರೈಕೆಯಿಂದ ನಮ್ಮನೆಯಲ್ಲಿಯೂ ಹೂವಿನ ಘಮದಂತೆ ಸಂತೋಷವೇ ತುಂಬಿದೆ.

-ಲೀಲಾ ಲೀಲಾಧರ್, ಹೆಸರಘಟ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT