ಅಥ್ಲೀಟ್‌ ಯುನೈಸ್‌ ಕಿರ್ವಾ ಅಮಾನತು

ಗುರುವಾರ , ಜೂಲೈ 18, 2019
29 °C

ಅಥ್ಲೀಟ್‌ ಯುನೈಸ್‌ ಕಿರ್ವಾ ಅಮಾನತು

Published:
Updated:
Prajavani

ಪ್ಯಾರಿಸ್‌: ನಿಷೇಧಿತ ಮದ್ದು ಸೇವನೆಯ ಹಿನ್ನೆಯಲ್ಲಿ ಕೀನ್ಯಾ ಮೂಲದ ಬಹ್ರೇನ್‌ ಪರ ಅಥ್ಲೀಟ್‌ ಯುನೈಸ್‌ ಕಿರ್ವಾ ನಾಲ್ಕು ವರ್ಷ ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಅವರು ಬೆಳ್ಳಿ ಪದಕ ಗೆದ್ದಿದ್ದರು. ಅಥ್ಲೆಟಿಕ್ಸ್ ಏಕತಾ ಘಟಕ (ಎಐಯು) ಸೋಮವಾರ ಈ ಕುರಿತು ಮಾಹಿತಿ ನೀಡಿದೆ.

ಅವರ ರಕ್ತದ ಮಾದರಿಯನ್ನು ಪರೀಕ್ಷಿಸಿದಾಗ ನಿಷೇಧಿತ ಇಪಿಒ ಅಂಶ ಕಂಡುಬಂದಿತ್ತು. ಮೇ 7, 2019ರಿಂದ ತಾತ್ಕಾಲಿಕವಾಗಿ ಅಮಾನತುಗೊಂಡಿದ್ದ ಅವರ ಶಿಕ್ಷೆಯನ್ನು ನಾಲ್ಕು ವರ್ಷಕ್ಕೆ ವಿಸ್ತರಿಸಲಾಗಿದೆ. ಮೇ 7ರಿಂದಲೇ ಈ ಶಿಕ್ಷೆ ಪೂರ್ವಾನ್ವಯವಾಗಲಿದೆ.

35 ವರ್ಷದ ಆಟಗಾರ್ತಿ ಯುನೈಸ್‌ ಅವರು ರಿಯೊ ಒಲಿಂಪಿಕ್ಸ್‌ ಮ್ಯಾರಥಾನ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದರು. ಪ್ರಥಮ ಸ್ಥಾನ ಪಡೆದಿದ್ದ ಕೀನ್ಯಾದ ಜೆಮಿಮಾ ಸಮ್‌ಗಾಂಗ್‌ ಕೂಡ ಇದೇ ರೀತಿಯ ದ್ರವ್ಯ ಸೇವನೆಯ ಆರೋಪಕ್ಕೆ ಒಳಗಾಗಿದ್ದರು. ಅವರ ವಿರುದ್ಧದ ತನಿಖೆಗೆ ಅಡ್ಡಿಪಡಿಸಲು ಯತ್ನಿಸಿದಕ್ಕಾಗಿ ಎಂಟು ವರ್ಷಗಳ ಅಮಾನತು ಶಿಕ್ಷೆಗೆ ಜೆಮಿಮಾ ಒಳಗಾಗಿದ್ದಾರೆ. 

ಕಿರ್ವಾ 2015ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !