ಮಂಗಳವಾರ, ಏಪ್ರಿಲ್ 20, 2021
24 °C

ಶುಕ್ರವಾರ, 15–7–1994

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮ ಮಂದಿರ ನಿರ್ಮಿಸಲು ವಿಎಚ್‌ಪಿಗೆ ಆಸ್ಪದ ಇಲ್ಲ: ಕಾಂಗೈ ರ್‍ಯಾಲಿಯಲ್ಲಿ ಪ್ರಧಾನಿ ಘೋಷಣೆ

ನವದೆಹಲಿ, ಜುಲೈ 14 (ಯುಎನ್‌ಐ)– ಅಯೋಧ್ಯೆಯಲ್ಲಿ ರಾಮ ದೇವಾಲಯವನ್ನು ಕಟ್ಟಲು ನಿಷೇಧಿತ ವಿಶ್ವ ಹಿಂದೂ ಪರಿಷತ್ತಿನ (ವಿಎಚ್‌ಪಿ) ನಿಯಂತ್ರಣದಲ್ಲಿರುವ ಟ್ರಸ್ಟ್‌ಗೆ ತಾವು ಎಂದೆಂದಿಗೂ ಅವಕಾಶ ನೀಡುವುದಿಲ್ಲವೆಂದು ಪ್ರಧಾನಿ ಪಿ.ವಿ. ನರಸಿಂಹರಾವ್ ಇಂದು ಇಲ್ಲಿ ಸ್ಪಷ್ಟವಾಗಿ ತಿಳಿಸಿದರು. ಆದರೆ ಅಲ್ಲಿ ದೇವಾಲಯ ನಿರ್ಮಾಣ ಖಂಡಿತವಾಗಿ ಆಗಬೇಕು, ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಪರ್ಕವಿಲ್ಲದ ಧಾರ್ಮಿಕ ನಾಯಕರು ಇದನ್ನು ಮಾಡಬೇಕು ಎಂದು ಸೂಚಿಸಿದರು.

ಅಂತಿಮ ಘಟ್ಟಕ್ಕೆ ಬ್ರೆಜಿಲ್– ಇಟಲಿ

ಲಾಸ್‌ ಏಂಜಲೀಸ್, ಜುಲೈ 14– ಬ್ರೆಜಿಲ್ ಹಾಗೂ ಇಟಲಿ ತಂಡದವರು ವಿಶ್ವ ಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್ ಫೈನಲ್ ತಲುಪಿದ್ದಾರೆ. 1970ರ ಫೈನಲ್‌ನ ಪುನಾರಾವರ್ತನೆಯಾಗಲಿರುವ ಭಾನುವಾರದ ಫೈನಲ್‌ನಲ್ಲಿ ಯಾರು ಗೆದ್ದರೂ ವಿಶ್ವ ಕಪ್ ಇತಿಹಾಸದಲ್ಲಿ ದಾಖಲೆಯ ನಾಲ್ಕನೆ ಬಾರಿಗೆ ಪ್ರಶಸ್ತಿ ಪಡೆದಂತಾಗುವುದು.

ಮಳೆಗೆ 32 ಜನ ಬಲಿ

ಬೆಂಗಳೂರು, ಜುಲೈ 14– ರಾಜ್ಯದಲ್ಲಿ ಬೀಳುತ್ತಿರುವ ಭಾರೀ ಮಳೆಗೆ 32 ಜನರು ಬಲಿಯಾಗಿದ್ದು, ಸುಮಾರು 26 ಕೋಟಿ ರೂಪಾಯಿ ಬೆಲೆಯ ಆಸ್ತಿಪಾಸ್ತಿ ನಷ್ಟವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.