ಸೋಮವಾರ, ಜೂನ್ 1, 2020
27 °C

25 ವರ್ಷಗಳ ಹಿಂದೆ | ಗುರುವಾರ 30–3–1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೆ ಮಹಾರಾಷ್ಟ್ರ ಕೆದಕಿದ ಗಡಿ ತಂಟೆ
ಬೆಳಗಾವಿ ಮಾರ್ಚಿ 29–
ಕರ್ನಾಟಕ– ಮಹಾರಾಷ್ಟ್ರ ಗಡಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕೆಂದು ಒತ್ತಾಯಿಸಲು ಮಹಾರಾಷ್ಟ್ರದ ಮುಖ್ಯಮಂತ್ರಿ ಮನೋಹರ ಜೋಶಿ ಅವರು ಮಹಾರಾಷ್ಟ್ರದಿಂದ ಸರ್ವಪಕ್ಷಗಳ ನಿಯೋಗವೊಂದನ್ನು ಶೀಘ್ರವೇ ದೆಹಲಿಗೆ ಕರೆದುಕೊಂಡು ಹೋಗಲು ಆಲೋಚಿಸಿದ್ದಾರೆ.

ಕರ್ನಾಟಕದಲ್ಲಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂ.ಇ.ಎಸ್‌) ಕೆಲ ನಾಯಕರನ್ನೂ ಈ ನಿಯೋಗ ಒಳಗೊಳ್ಳಲಿದೆ ಎಂದು ಸಮಿತಿಗೆ ಸಮೀಪವಾಗಿರುವ ಮೂಲಗಳಿಂದ ತಿಳಿದುಬಂದಿದೆ.

ಈ ನಿಯೋಗದ ಸದಸ್ಯರ ಅಂತಿಮಪಟ್ಟಿಯು ಮನೋಹರ ಜೋಶಿಯವರು ಮುಂಬೈಯಲ್ಲಿ ನಾಳೆ ಎಂ.ಇ.ಎಸ್‌ ನಾಯಕರನ್ನು ಭೇಟಿ ಮಾಡಿದಾಗ ಸಿದ್ಧಗೊಳ್ಳುವ ಸಂಭವವಿದೆ.

ಠಾಕ್ರೆ ಹೇಳಿಕೆಗೆ ಉಗ್ರ ಪ್ರತಿಭಟನೆ; ವಿವಾದ ಕೇಂದ್ರದ ಪರಿಶೀಲನೆಯಲ್ಲಿ
ನವದೆಹಲಿ, ಮಾರ್ಚಿ 29 (ಪಿಟಿಐ, ಯುಎನ್‌ಐ)–
ತಮಗೆ ಜೀವ ಬೆದರಿಕೆ ಹಾಕಿರುವ ವ್ಯಕ್ತಿಗಳ ನಿರ್ದಿಷ್ಟ ಸಮುದಾಯವನ್ನು ನಿರ್ನಾಮ ಮಾಡುವುದಾಗಿ ಶಿವಸೇನಾ ನಾಯಕ ಬಾಳಾ ಠಾಕ್ರೆ ಅವರು ಬೆದರಿಕೆ ಹಾಕಿ‌ದ್ದಾರೆ ಎಂಬ ವರದಿಯ ಬಗ್ಗೆ ಕೇಂದ್ರ ಗೃಹ ಖಾತೆ ಪರಿಶೀಲಿಸುತ್ತಿದೆ. ಈ ಮಧ್ಯೆ ಠಾಕ್ರೆ ಹೇಳಿಕೆಗೆ ಎಲ್ಲೆಡೆಯಿಂದ ಉಗ್ರ ಪ್ರತಿಭಟನೆ ವ್ಯಕ್ತವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.