ಮಂಗಳವಾರ, ನವೆಂಬರ್ 12, 2019
28 °C

ಸೋಮವಾರ, 7–11–1994

Published:
Updated:

ಬಹುತೇಕ ಕ್ಷೇತ್ರಗಳಲ್ಲಿ ಬಹುಮುಖ ಸ್ಪರ್ಧೆ
ಬೆಂಗಳೂರು, ನ. 6–
ರಾಜ್ಯದ ಇತಿಹಾಸ ದಲ್ಲೇ ಪ್ರಥಮ ಬಾರಿಗೆ ಎಂಟಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಚುನಾವಣಾ ಅಖಾಡಕ್ಕೆ ಧುಮುಕಿರುವುದರಿಂದ ಈ ಸಲ ಎಲ್ಲೆಡೆ ಬಹುಮುಖ ಸ್ಪರ್ಧೆ ಏರ್ಪಟ್ಟಿದೆ. ಯಾವ ಕ್ಷೇತ್ರದಲ್ಲೂ ನೇರ ಸ್ಪರ್ಧೆ ನಡೆಯುವ ಸಾಧ್ಯತೆ ಇಲ್ಲ. ಇದರಿಂದ ನಮಗೇ ಅನುಕೂಲ ಎಂಬ ಭಾವನೆ ಎಲ್ಲ ಪಕ್ಷಗಳದ್ದು.

ನ. 26 ಮತ್ತು ಡಿ. 1ರಂದು ಚುನಾವಣೆ ನಡೆಯಲಿದ್ದು, ಅಭ್ಯರ್ಥಿಗಳು ಪೂರ್ಣ ಪ್ರಮಾಣದ ಪ್ರಚಾರವನ್ನು ಬುಧ ವಾರದಿಂದ ಆರಂಭಿಸುವ ನಿರೀಕ್ಷೆಯಿದೆ.

ಕಾಶ್ಮೀರ ಬಿಟ್ಟುಕೊಡೆವು
ಬೀದರ್, ನ. 6–
ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದ್ದು ಅದನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಭಾರತೀಯ ಜನತಾ ಪಕ್ಷದ ನಾಯಕ ಅಟಲ್ ಬಿಹಾರಿ ವಾಜಪೇಯಿ ಇಂದು ಇಲ್ಲಿ ಘೋಷಿಸಿದರು.

ವಿಧಾನಸಭೆಗೆ ನಡೆಯಲಿರುವ ಚುನಾ ವಣೆಯ ಮೊದಲ ಪ್ರಚಾರ ಭಾಷಣ ಮಾಡಿ, ಪಾಕಿಸ್ತಾನವು ಕಾಶ್ಮೀರದಲ್ಲಿ ನಡೆಸುತ್ತಿರುವ ಕೃತ್ಯವನ್ನು ಭಾರತೀಯರು ಪಾಕಿಸ್ತಾನದ ಸಿಂಧ್ ಪ್ರಾಂತದಲ್ಲಿ ನಡೆಸಿದರೆ ಅದು ಪಾಕಿಸ್ತಾನದಿಂದ ಬೇರೆಯಾದೀತು
ಎಂದು ಎಚ್ಚರಿಕೆ ನೀಡಿದರು.

ಪ್ರತಿಕ್ರಿಯಿಸಿ (+)