ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ | ಭಾನುವಾರ, ಜೂನ್‌ 25 1995

Last Updated 24 ಜೂನ್ 2020, 16:10 IST
ಅಕ್ಷರ ಗಾತ್ರ

ಉದ್ಯಮಿಗಳ 33 ಸಾವಿರ ಕೋಟಿ ಸಾಲ ಮನ್ನಾ

ಬೆಂಗಳೂರು, ಜೂನ್‌ 24– ನೂರಾರು ಸಂಖ್ಯೆಯ ಭಾರಿ ಕೈಗಾರಿಕೋದ್ಯಮಗಳು ಬ್ಯಾಂಕ್‌ಗಳಿಂದ ಪಡೆದು ಮರಳಿ ತೀರಿಸದೇ ಬಾಕಿ ಉಳಿದ ರೂ. 33 ಸಾವಿರ ಕೋಟಿ ಸಾಲದ ಮೊತ್ತವನ್ನು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮನ್ನಾ ಮಾಡಲಾಗಿದೆ ಎಂದು ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟ ಬಹಿರಂಗಪಡಿಸಿದೆ.

‘ದೇಶದ ಒಟ್ಟಾರೆ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಬಹುದಾದ ಈ ವೈಪರೀತ್ಯಕ್ಕೆ ಇಚ್ಛಾಶಕ್ತಿ ಇಲ್ಲದ ರಾಜಕೀಯವು ಮುಖ್ಯ ಕಾರಣವಾಗಿದ್ದು, ಇಷ್ಟೊಂದು ಅಗಾಧ ಮೊತ್ತವನ್ನು ಈ ನಾಡಿನ ಶ್ರೀಸಾಮಾನ್ಯನ ಹಿತವನ್ನು ಬಲಿಗೊಟ್ಟು ಮನ್ನಾ ಮಾಡಲಾಗಿದೆ’ ಎಂದುಒಕ್ಕೂಟದ ಅಧ್ಯಕ್ಷ ಶಾಂತಿರಂಜನ್‌ ಸೇನ್‌ ಗುಪ್ತ ಮತ್ತು ಪ್ರಧಾನ ಕಾರ್ಯದರ್ಶಿ ಆರ್‌.ಎನ್‌.ಗೋಡ್‌ಬೋಲೆ ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಕರಾಚಿ: ವ್ಯಾಪಕ ಹಿಂಸೆ 32 ಸಾವು– ರೈಲಿಗೆ ಬೆಂಕಿ‌

ಕರಾಚಿ, ಜೂನ್‌ 24 (ಎಎಫ್‌ಪಿ)– ಪಾಕಿಸ್ತಾನದ ವಾಣಿಜ್ಯ ರಾಜಧಾನಿ ಕರಾಚಿಯ ಇತಿಹಾಸದಲ್ಲಿಯೇ ಅತ್ಯಂತ ಭೀಕರ ಎನ್ನಲಾದ ಹಿಂಸಾಚಾರ ಎರಡನೇ ದಿನವಾದ ಇಂದೂ ಅವ್ಯಾಹತವಾಗಿ ಮುಂದುವರಿದಿದ್ದು, ದುಷ್ಕರ್ಮಿಗಳ ಗುಂಡಿಗೆ ಕಳೆದ 24 ಗಂಟೆಗಳ ಅವಧಿಯಲ್ಲಿ 32 ಜನ ಬಲಿಯಾಗಿದ್ದಾರೆ. ಪ್ರಯಾಣಿಕ ರೈಲೊಂದಕ್ಕೆ ಬೆಂಕಿ ಹಚ್ಚಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT