ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ: ಭಾನುವಾರ, 8-10-1995

Last Updated 7 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ

ಪಟೇಲ್‌ಗೆ ವಿಶ್ವಾಸಮತ ರಾಜಿ ಸೂತ್ರ ಫಲಕಾರಿ

ಗಾಂಧಿನಗರ, ಅ. 7 (ಪಿಟಿಐ)– ಗುಜರಾತ್ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ನೇತೃತ್ವದ ಬಿಜೆಪಿ ಸರ್ಕಾರ ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಗಳಿಸುವಲ್ಲಿ ಯಶಸ್ವಿಯಾಯಿತು. ಭಿನ್ನ ಬಣದ ಎಲ್ಲ 47 ಶಾಸಕರೂ ಸರ್ಕಾರದ ಪರವಾಗಿ ಮತ ಚಲಾಯಿಸಿದ್ದರಿಂದ, ಕಳೆದ 11 ದಿನಗಳಿಂದ ರಾಜ್ಯದಲ್ಲಿ ತಲೆದೋರಿದ್ದ ರಾಜಕೀಯ ಬಿಕ್ಕಟ್ಟು ತಾತ್ಕಾಲಿಕವಾಗಿ ಬಗೆಹರಿದಿದೆ.

ಈ ಮಧ್ಯೆ ರಾಜ್ಯಕ್ಕೆ ಶೀಘ್ರ ಹೊಸ ಮುಖ್ಯಮಂತ್ರಿ ನೇಮಕಗೊಳ್ಳಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಎಲ್.ಕೆ.ಅಡ್ವಾಣಿ ಇಂಗಿತ ವ್ಯಕ್ತಪಡಿಸಿದ್ದಾರೆ.

ರಾಜೀವ್ ಹತ್ಯೆಯಲ್ಲಿ ಕೈವಾಡ: ಚಂದ್ರಾಸ್ವಾಮಿ ನಿರಾಕರಣೆ

ನವದೆಹಲಿ, ಅ. 7 (ಪಿಟಿಐ,ಯುಎನ್‌ಐ) – ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಯಲ್ಲಿ ತಮ್ಮ ಪಾತ್ರ ಎಳ್ಳಷ್ಟೂ ಇಲ್ಲ ಎಂದು ವಿವಾದಾತ್ಮಕ ಸಾಧು ಚಂದ್ರಾಸ್ವಾಮಿ ಇಂದು ಜೈನ್ ಆಯೋಗದ ಎದುರು ಸ್ಪಷ್ಟಪಡಿಸಿದರು.

ತಾವು ಯಾವಾಗಲೂ ರಾಜಕೀಯದಲ್ಲಿ ಕೈಹಾಕಿಲ್ಲ ಎಂದು ಹೇಳಿದ 46 ವರ್ಷದ, ಸದಾ ಜೆಟ್ ವಿಮಾನದಲ್ಲಿ ಸಂಚರಿಸುವ
ಈ ಸ್ವಾಮಿ, ರಾಜೀವ್ ಅವರನ್ನು ದೈಹಿಕವಾಗಿ ಅಥವಾ ರಾಜಕೀಯ ರಂಗದಿಂದ ಮುಗಿಸುವ ಆಲೋಚನೆ ತಮಗೆ ಕನಸು ಮನಸಿನಲ್ಲೂ ಬಂದಿರಲಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT