ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌.ಎಸ್.ದೊರೆಸ್ವಾಮಿಗೆ ನುಡಿ-ನಮನ: ಯಾರನ್ನೂ ಮೆಚ್ಚಿಸುವ ಕೆಲಸ ಮಾಡುತ್ತಿರಲಿಲ್ಲ

ಸ್ವಾತಂತ್ರ್ಯ ಹೋರಾಟಗಾರ
Last Updated 26 ಮೇ 2021, 22:34 IST
ಅಕ್ಷರ ಗಾತ್ರ

ಐದು ದಿನಗಳ ಹಿಂದೆ, ಆಸ್ಪತ್ರೆಯಲ್ಲಿದ್ದ ಎಚ್.ಎಸ್.ದೊರೆಸ್ವಾಮಿ ಅವರನ್ನು ಭೇಟಿಯಾಗಲು ಹೋಗಿದ್ದರವಿಕೃಷ್ಣಾ ರೆಡ್ಡಿ ಅವರ ಮೊಬೈಲ್‌ನಿಂದ ಕರೆ ಮಾಡಿ ನನ್ನ ಜತೆ ಮಾತನಾಡಿದ್ದರು. ‘ಆನಂದದಿಂದ ಹೋಗುತ್ತಿದ್ದೇನೆ ರಾಮಸ್ವಾಮಿಯವರೇ. ಅಲ್ಲೂ ನಿಮ್ಮ ಸ್ಮರಣೆ ಮಾಡುತ್ತೇನೆ’ ಅಂದ್ರು. ಆ ಮಾತು ಮನಸ್ಸಿಗೆ ತುಂಬಾ ನೋವು ಉಂಟು ಮಾಡಿತು. ಪುರಭವನದ ಮುಂದೆ ಭೂ ಕಬಳಿಕೆ ವಿರುದ್ಧ ನಡೆದ ಹೋರಾಟದಲ್ಲಿ 39 ದಿನವೂ ಪಾಲ್ಗೊಂಡಿದ್ದರು. ‘ಇಳಿ ವಯಸ್ಸಿನಲ್ಲೂ ಆರೋಗ್ಯದಿಂದ ಇರುವುದರ ಗುಟ್ಟೇನು?’ ಅಂತ ಕೇಳಿದಾಗ, ನಕ್ಕು ಸುಮ್ಮನಾಗಿದ್ದರು. ಮತ್ತೆಕೇಳಿದಾಗ, ‘ಬಡತನ’ ಎಂದಿದ್ದರು.

ನೇರ–ನಿಷ್ಠುರವಾದಿಯಾಗಿದ್ದ ಅವರು ಯಾರನ್ನೂ ಮೆಚ್ಚಿಸುವ ಕೆಲಸ ಮಾಡುತ್ತಿರಲಿಲ್ಲ. ಯಾವಾಗಲೂ ಸಮಾಜಮುಖಿ ಕೆಲಸ. ಇಂದು ಗಾಂಧಿವಾದ, ಅಹಿಂಸಾವಾದ ಕೆಲಸ ಮಾಡುವುದಿಲ್ಲ ಎಂಬ ಭಾವನೆ ಹಲವರಲ್ಲಿದೆ. ಆದರೆ. ಈ ಎರಡಕ್ಕೂ ಜಯವಿದೆ ಎಂಬುದನ್ನುತೋರಿಸಿಕೊಟ್ಟರು. ನೊಂದವರು, ಅಸಹಾಯಕರಿಗೆ ಯಾವಾಗಲೂ ಸ್ಪಂದಿಸುತ್ತಿದ್ದರು. ಸುಖ ಜೀವನಕ್ಕೆ ಎಂದೂ ಮಾರು ಹೋದವರಲ್ಲ. ತ್ಯಾಗ ಜೀವನವೇ ಶ್ರೇಷ್ಠ ಎಂಬ ಅಚಲ ನಂಬಿಕೆ ಇತ್ತು. ಸತ್ಯ, ಅಹಿಂಸೆ ಅವರ ಜೀವನದ ಸತ್ವಗಳಾಗಿದ್ದವು.

ಬೆಂಗಳೂರಿನಲ್ಲಿ ಕಸದ ವಿಲೇವಾರಿ ಸಮಸ್ಯೆ ಕುರಿತು ಅವರೊಂದಿಗೆ ಚರ್ಚಿಸುವಾಗ,‘ಕಸ ಒಂದು ಸಮಸ್ಯೆಯಲ್ಲ. ಕಸ ತಿನ್ನುವವರಿಂದ ಕಸದ ಸಮಸ್ಯೆ ಸೃಷ್ಟಿಯಾಗಿದೆ’ ಎಂದು ಅವರು ಹೇಳಿದ ಮಾತು ಈಗಲೂ ನೆನಪಿದೆ. ಅವರುಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲ, ಸಾಮಾಜಿಕ ಸ್ವಾಸ್ಥ್ಯದ ಬಗ್ಗೆಯೂ ಕಾಳಜಿ ಇತ್ತು.
–ಎ.ಟಿ.ರಾಮಸ್ವಾಮಿ, ಅರಕಲಗೂಡು ಕ್ಷೇತ್ರದ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT