ಮೈಕ್ರೊಫೈನಾನ್ಸ್ ಕ್ಷೇತ್ರದಲ್ಲಿ ಪ್ರತಿ ಮೂರ್ನಾಲ್ಕು ವರ್ಷಗಳಿಗೊಮ್ಮೆ ಯಾವುದಾದರೊಂದು ಬಿಕ್ಕಟ್ಟನ್ನು ಕಾಣುವುದು ಸಹಜವಾಗಿಬಿಟ್ಟಿದೆ. ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯಲ್ಲಿದ್ದ ಮೈಕ್ರೊಫೈನಾನ್ಸ್ ಸಂಸ್ಥೆಗಳ ಐವತ್ತು ಕಾರ್ಯಾಲಯಗಳನ್ನು 2006ರಲ್ಲಿ ಅಲ್ಲಿನ ಸರ್ಕಾರ ಕೆಲಕಾಲದವರೆಗೆ ಮುಚ್ಚಿತ್ತು. ಆಗ ಈ ಸಂಸ್ಥೆಗಳ ಮೇಲೆ ಮುಖ್ಯವಾಗಿ ಮೂರು ಆರೋಪಗಳು ಕೇಳಿಬಂದಿದ್ದವು. ಅತಿ ಹೆಚ್ಚು ಬಡ್ಡಿ ದರದ ಮೇಲೆ ಸಾಲ ಕೊಡಲಾಗುತ್ತದೆ, ವಸೂಲಾತಿಯ ವಿಧಾನಗಳು ಸಮರ್ಪಕವಾಗಿಲ್ಲ ಮತ್ತು ಹಲವು ಸಂಸ್ಥೆಗಳು ಅದೇ ಗ್ರಾಹಕರಿಗೆ ಮತ್ತೆ ಮತ್ತೆ ಹೆಚ್ಚಿನ ಸಾಲವನ್ನು ಕೊಡುತ್ತಿವೆ ಎನ್ನುವುದು ಆ ಆಪಾದನೆಗಳು. ಆಗ ಈ ಸಂಸ್ಥೆಗಳು ತಮ್ಮ ಒಕ್ಕೂಟವಾದ ‘ಸಾ-ಧನ್’ ಮೂಲಕ ಸರ್ಕಾರದೊಂದಿಗೆ ಒಂದು ಒಪ್ಪಂದಕ್ಕೆ ಬಂದವು. ಬಡ್ಡಿದರವನ್ನು ಕಡಿಮೆ ಮಾಡುವ, ಹೆಚ್ಚಿನ ಸಾಲದ ಪ್ರಲೋಭನೆಗೆ ಗ್ರಾಹಕರನ್ನು ತಳ್ಳದಿರುವ ಸ್ವನಿಯಂತ್ರಣಾ ಪದ್ಧತಿಯನ್ನು ಪಾಲಿಸುವುದಾಗಿ ಮಾತು ಕೊಟ್ಟಿದ್ದವು.

2010ರ ವೇಳೆಗೆ ಈ ಎಲ್ಲ ಆಶ್ವಾಸನೆಗಳನ್ನೂ ಗಾಳಿಗೆ ತೂರಿ, ತಮ್ಮ ವ್ಯಾಪಾರ ವೃದ್ಧಿಯನ್ನಷ್ಟೇ ಗುರಿಯಾಗಿ ಇಟ್ಟುಕೊಂಡ ಈ ಸಂಸ್ಥೆಗಳು, ಮತ್ತೆ ಅವೇ ಮೂರು ಆಪಾದನೆಗಳನ್ನು ಹೊತ್ತು ಕಟಕಟೆಯಲ್ಲಿ ನಿಂತವು. ಆಗ, ಅವಿಭಜಿತ ಆಂಧ್ರಪ್ರದೇಶ ಸರ್ಕಾರ ಮತ್ತೆ ಈ ಸಂಸ್ಥೆಗಳನ್ನು ನಿಯಂತ್ರಿಸಲು ಒಂದು ಸುಗ್ರೀವಾಜ್ಞೆಯನ್ನು, ನಂತರ ಕಾನೂನನ್ನು ಜಾರಿ ಮಾಡಿತು. ಅದೇ ಮಾದರಿಯಲ್ಲಿ ಇದೇ 12ರಂದು ಕರ್ನಾಟಕ ಸರ್ಕಾರವೂ ಒಂದು ಸುಗ್ರೀವಾಜ್ಞೆಯನ್ನು ಹೊರಡಿಸಿದೆ. ಈ ಸುಗ್ರೀವಾಜ್ಞೆಯಿಂದ ಬಿಕ್ಕಟ್ಟಿನ ಆಯಾಮ ಬದಲಾಗುತ್ತದೆಯೇ ವಿನಾ ಒಂದು ದೀರ್ಘಕಾಲಿಕ ಪರಿಹಾರ ಒದಗಿಸಿದಂತೆ ಆಗುವುದಿಲ್ಲ. ಇದನ್ನು ನಾವು ಸಾವಧಾನದಿಂದ ವಿಶ್ಲೇಷಣೆಗೆ ಒಡ್ಡಬೇಕಾಗಿದೆ.

ಮೈಕ್ರೊಫೈನಾನ್ಸ್ ಸಂಸ್ಥೆಗಳು ಸಾಲ ಕೊಡುವ ವಿಧಾನದಲ್ಲಿ ಗಮನಿಸಲೇಬೇಕಾದ ನಾಲ್ಕಾರು ಅಂಶಗಳಿವೆ. ಈ ಸಂಸ್ಥೆಗಳು ಮಹಿಳೆಯರಿಗೆ ಮಾತ್ರ ಸಾಲ ಕೊಡುತ್ತವೆ. ಮಹಿಳೆಯರ ಗುಂಪುಗಳನ್ನು ರಚಿಸಿ, ಒಬ್ಬರ ಸಾಲಕ್ಕೆ ಇನ್ನೊಬ್ಬರನ್ನು ಬಾಧ್ಯರನ್ನಾಗಿಸುತ್ತವೆ. ಈ ಪ್ರಕ್ರಿಯೆಯಲ್ಲಿ, ಆಣೆ ಪ್ರಮಾಣ ಮಾಡಿ ಅವರಲ್ಲಿ ಒಂದು ರೀತಿಯ ಅಪರಾಧಿ ಭಾವವನ್ನು ಹುಟ್ಟಿಸುವುದೂ ಒಳಗೊಂಡಿದೆ.

ಇಡೀ ವ್ಯವಹಾರವನ್ನು ಸಾರ್ವಜನಿಕರಿಗೆ ಕಾಣುವ ಹಾಗೆ ಬಹಿರಂಗ ಸ್ಥಳದಲ್ಲಿ ನಡೆಸಲಾಗುತ್ತದೆ. ಸಾಲವನ್ನು ಮರುಪಾವತಿಸುವುದು ಅತ್ಯಂತ ಪ್ರಮುಖವಾದ ನಿಯಮ, ಅದನ್ನು ಯಾವುದೇ ಪರಿಸ್ಥಿತಿಯಲ್ಲೂ ಉಲ್ಲಂಘಿಸಬಾರದು ಎನ್ನುವ ಸಂದೇಶವನ್ನು ಮತ್ತೆ ಮತ್ತೆ ಕೊಡಲಾಗುತ್ತದೆ. ಇಂಥದ್ದೊಂದು ಚೌಕಟ್ಟು ರೂಪುಗೊಂಡ ಮೇಲೆ ಸುಲಭವಾಗಿ ಸಾಲವನ್ನು ಕೊಡಲಾಗುತ್ತದೆ. ಈ ವಿಧಾನದಲ್ಲಿ ಸಾಲ ಪಡೆದುಕೊಳ್ಳುವವರಿಗೆ ಕಂತುಗಳನ್ನು ಮರುಪಾವತಿಸುವ ಶಕ್ತಿಯಿದೆಯೇ ಎಂದು ಪರಾಮರ್ಶಿಸುವ ಕೆಲಸವನ್ನು ಈ ಸಂಸ್ಥೆಗಳು ಮಾಡುವುದಿಲ್ಲ. ಮರುಪಾವತಿಯ ಬಗ್ಗೆ ಯಾವುದೇ ಹೊಂದಾಣಿಕೆ ಮತ್ತು ರಾಜಿಯ ಸಾಧ್ಯತೆ ಇರುವುದಿಲ್ಲ. ಅದನ್ನು ಗ್ರಾಹಕರೇ ತಮ್ಮ ಪರಿಸ್ಥಿತಿಗೆ ಅನುಸಾರವಾಗಿ ಪರಾಮರ್ಶಿಸಿಕೊಂಡು ಸಾಲವನ್ನು ತೆಗೆದುಕೊಳ್ಳಬೇಕು. ಹೀಗಾಗಿ, ಸಾಲ ಮರುಪಾವತಿಸುವ ಶಕ್ತಿಯ ಪರಾಮರ್ಶೆ ವಸ್ತುನಿಷ್ಠವಾಗಿ ಆಗುವುದಿಲ್ಲ. ಸಾಲ ಪಡೆಯುವ ಮಹಿಳೆಯರಿಗೆ ತಾವು ಕಂತುಗಳನ್ನು ಕಟ್ಟಬಹುದು ಎಂದು ಅನ್ನಿಸಿದರೆ, ಅವರು ವಾಸ್ತವದಲ್ಲಿ ತಮಗಿರುವ ಮರುಪಾವತಿ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಸಾಲವನ್ನು ಪಡೆಯುವ ಸಾಧ್ಯತೆ ಇರುತ್ತದೆ. ಬಿಕ್ಕಟ್ಟು ಸೃಷ್ಟಿಯಾಗುತ್ತಿರುವುದು ಈ ವಿಷಯದಲ್ಲೇ.

ಈ ಸಂಸ್ಥೆಗಳ ವಾರ್ಷಿಕ ಬಡ್ಡಿದರ ಶೇಕಡ 22ರಿಂದ ಶೇಕಡ 28ರವರೆಗೆ ಇರುತ್ತದೆ. ಈ ಬಡ್ಡಿದರದಲ್ಲಿ ಸಣ್ಣ ಮಟ್ಟದ ಸಾಲ ತೆಗೆದುಕೊಂಡರೆ ಅದನ್ನು ಮರುಪಾವತಿಸಲು ಕಷ್ಟವಾಗುವುದಿಲ್ಲ. ಆದರೆ ಇದೇ ಬಡ್ಡಿದರ ದೊಡ್ಡ ಮಟ್ಟದ ಸಾಲಕ್ಕೆ ಮತ್ತು ದೀರ್ಘಕಾಲದ ಸಾಲಕ್ಕೆ ಹೊರಲಾರದ ಭಾರವಾಗುತ್ತದೆ. ಮೈಕ್ರೊಫೈನಾನ್ಸಿನ ಬಿಕ್ಕಟ್ಟು ಇರುವುದು ಬಡ್ಡಿದರವನ್ನು ಅದೇ ಮಟ್ಟದಲ್ಲಿಟ್ಟು ಗ್ರಾಹಕರಿಗೆ ಹೆಚ್ಚೆಚ್ಚು ಸಾಲ ಕೊಡುವುದರಲ್ಲಿ. ಒಂದು ಸಂಸ್ಥೆ ತಕ್ಕಮಟ್ಟಿನ ಸಾಲ ಕೊಟ್ಟು, ಇದಕ್ಕಿಂತ ಹೆಚ್ಚಿನ ಅಪಾಯಕ್ಕೆ ಒಡ್ಡಿಕೊಳ್ಳಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿದರೆ, ಅದರ ಹಿಂದಿರುವ ಮತ್ತೊಂದು ಮೈಕ್ರೊಫೈನಾನ್ಸ್ ಸಂಸ್ಥೆ ಅದೇ ಗ್ರಾಹಕರನ್ನು ಹೊಸ ಗ್ರಾಹಕರಾಗಿ ಕಂಡು ಅಧಿಕ ಸಾಲ ಕೊಡುವ ಪರಿಪಾಟವಿದೆ. ಈಗಿನ ಬಿಕ್ಕಟ್ಟಿನ ಮೂಲ ಇರುವುದು ಮೈಕ್ರೊಫೈನಾನ್ಸ್ ಸಂಸ್ಥೆಗಳು ಬಹಳ ಸುಲಭವಾಗಿ ಸಾಲ ಕೊಡುವ ವಿಧಾನದಲ್ಲಿ.

2010ರಲ್ಲಿ ರಿಸರ್ವ್ ಬ್ಯಾಂಕು ತನ್ನ ಕೇಂದ್ರೀಯ ಆಡಳಿತ ಮಂಡಳಿಯ ವರಿಷ್ಠ ಸದಸ್ಯರಾಗಿದ್ದ ಮಾಲೇಗಾಮ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತು. ಆ ಸಮಿತಿಯ ವರದಿಯನ್ನು ಅನುಸರಿಸಿ, ಮೈಕ್ರೊಫೈನಾನ್ಸ್ ಸಂಸ್ಥೆಗಳಿಗೆ ಅನ್ವಯಿಸುವ ಕಾರ್ಯವಿಧಾನ ಮತ್ತು ವಿಶೇಷ ನಿಯಮಾವಳಿಯನ್ನು ಜಾರಿ ಮಾಡಿತು. ಈ ವರದಿಯ ಮೂಲ ಚೌಕಟ್ಟಿನಲ್ಲೇ ಸಮಯ, ಸಂದರ್ಭಾನುಸಾರವಾಗಿ ಕೈಗೊಂಡ ಸುಧಾರಣೆ ಹಾಗೂ ಬದಲಾವಣೆಗಳೊಂದಿಗೆ ರಿಸರ್ವ್ ಬ್ಯಾಂಕಿನ ನೀತಿ ನಿಯಮಗಳು ಇಂದಿಗೂ ಜಾರಿಯಲ್ಲಿವೆ.

ಈ ನಿಯಮಾನುಸಾರ ಮೈಕ್ರೊಫೈನಾನ್ಸ್ ಸಂಸ್ಥೆಗಳು ಮೊದಲಿಗೆ ತಮ್ಮನ್ನು ನೋಂದಾಯಿಸಿಕೊಂಡು ನೋಂದಣಿ ಪತ್ರವನ್ನು ಹೊಂದಬೇಕು. ಆನಂತರ ಸಂಸ್ಥೆಗಳು ರಿಸರ್ವ್ ಬ್ಯಾಂಕ್ ಹೇಳುವ ಕಾರ್ಯವಿಧಾನವನ್ನು ಪಾಲಿಸಬೇಕು. ಈ ವಿಧಾನದ ಪ್ರಕಾರ, ಸಂಸ್ಥೆಗಳು ಎಲ್ಲ ಗ್ರಾಹಕರ ಸಾಲದ ವಿವರಗಳನ್ನು, ಇರುವ ನಾಲ್ಕು ಕ್ರೆಡಿಟ್ ಬ್ಯೂರೊಗಳ ಮಾಹಿತಿ ಕೋಶದಲ್ಲಿ ಕಡ್ಡಾಯವಾಗಿ ಸೇರಿಸಬೇಕು. ಇದರಿಂದ ಗ್ರಾಹಕರು ಎಲ್ಲಾ ಮೂಲಗಳಿಂದ ಪಡೆದಿರುವ ಒಟ್ಟಾರೆ ಸಾಲದ ವಿವರಗಳು ಸಿಗುತ್ತವೆ. ಮೈಕ್ರೊಫೈನಾನ್ಸ್ ಸಾಲ ಎಂದು ಪರಿಗಣಿಸಲು ಗ್ರಾಹಕರ ಕೌಟುಂಬಿಕ ವಾರ್ಷಿಕ ಆದಾಯ ₹ 3 ಲಕ್ಷಕ್ಕಿಂತ ಕಡಿಮೆ ಇರಬೇಕು (ತಿಂಗಳಿಗೆ ₹ 25,000) ಹಾಗೂ ಗ್ರಾಹಕರು ಕಟ್ಟಬೇಕಿರುವ ಎಲ್ಲಾ ಸಂಸ್ಥೆಗಳ ಕಂತು (ಅಸಲು + ಬಡ್ಡಿ) ಅವರ ಆದಾಯದ ಅರ್ಧಕ್ಕಿಂತ ಕಡಿಮೆ ಇರಬೇಕು. ನಾಲ್ಕಕ್ಕಿಂತ ಹೆಚ್ಚಿನ ಸಂಸ್ಥೆಗಳು ಗ್ರಾಹಕರಿಗೆ ಸಾಲವನ್ನು ಕೊಡುವಂತಿಲ್ಲ. ಅಷ್ಟೂ ಮೂಲಗಳಿಂದ ಒಟ್ಟಾರೆ ₹ 3 ಲಕ್ಷಕ್ಕಿಂತ ಹೆಚ್ಚಿನ ಸಾಲವನ್ನು ಕೊಡಬಾರದು. ಬಡ್ಡಿದರವನ್ನು ಸಂಸ್ಥೆಯ ಆಡಳಿತ ಮಂಡಳಿ ಸರಿಯಾಗಿ ಪರಾಮರ್ಶಿಸಿ ನಿಗದಿಪಡಿಸಬೇಕು. ನಿಗದಿತ ಮಟ್ಟಕ್ಕಿಂತ ಹೆಚ್ಚಿನ ಗುಪ್ತ ಅಥವಾ ಅನಿಯಮಿತ ಶುಲ್ಕವನ್ನು ಪಡೆಯಬಾರದು. ಸಾಲದ ನಿಯಮಾವಳಿಗಳನ್ನು ಗ್ರಾಹಕರಿಗೆ ಅರ್ಥವಾಗುವಂತೆ ಸರಳವಾಗಿ ಸ್ಥಳೀಯ ಭಾಷೆಯಲ್ಲಿ ತಿಳಿಸಬೇಕು ಮತ್ತು ಎಲ್ಲವೂ ಪಾರದರ್ಶಕವಾಗಿರಬೇಕು. ಈ ಎಲ್ಲದರ ಮೇಲ್ವಿಚಾರಣೆಗೆ ಸಾ-ಧನ್ ಮತ್ತು ಎಂ-ಫಿನ್ ಎನ್ನುವ ಎರಡು ಮೈಕ್ರೊಫೈನಾನ್ಸ್ ಸಂಸ್ಥೆಗಳ ಒಕ್ಕೂಟಗಳನ್ನು ಸ್ವನಿಯಂತ್ರಣಾ ಪ್ರಾಧಿಕಾರಗಳನ್ನಾಗಿ ಗುರುತಿಸಲಾಗಿದೆ.

ಈ ನಿಯಮಗಳನ್ನು ಮೈಕ್ರೊಫೈನಾನ್ಸ್ ಸಂಸ್ಥೆಗಳು ಸಾಲ ಕೊಡುವ ವಿಧಾನವನ್ನು ಗಮನದಲ್ಲಿ ಇಟ್ಟುಕೊಂಡು ಜಾರಿ ಮಾಡಲಾಗಿದ್ದರೂ ಇವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿಲ್ಲ. ಇದಕ್ಕೆ ಕಾರಣಗಳು, ನಿಯಮಗಳನ್ನು ರೂಪಿಸಿರುವ ಬಗೆಯಲ್ಲೂ ಅಪೂರ್ಣ ಮಾಹಿತಿಯಲ್ಲೂ ಇವೆ.

2011ರಲ್ಲಿ ಮೊದಲಿಗೆ ನಿಯಮಾವಳಿಗಳು ಜಾರಿಯಾದಾಗ ಗ್ರಾಮೀಣ ಪ್ರದೇಶಗಳಲ್ಲಿ ಆದಾಯದ ಗರಿಷ್ಠ ಮಿತಿ ಬರೀ ₹ 60,000 ಇತ್ತು. ಈಗ ಅದನ್ನು ₹ 3 ಲಕ್ಷಕ್ಕೆ ಏರಿಸಲಾಗಿದೆ. ಒಟ್ಟಾರೆ ಸಾಲದ ಗರಿಷ್ಠ ಮಿತಿ ₹ 50,000 ಇತ್ತು. ಇದನ್ನೂ ₹ 3 ಲಕ್ಷಕ್ಕೆ ಏರಿಸಲಾಗಿದೆ. ಈ ಎರಡೂ ಗರಿಷ್ಠ ಮಿತಿಗಳನ್ನು ಐದಾರು ಪಟ್ಟು ಹೆಚ್ಚಿಸಿರುವುದು ಮೈಕ್ರೊಫೈನಾನ್ಸ್ ಸಂಸ್ಥೆಗಳು ಬಡ ಗ್ರಾಹಕರಿಗೆ ಅಧಿಕ ಸಾಲ ಕೊಡಲು ಪ್ರೋತ್ಸಾಹಿಸುತ್ತಿರುವಂತೆಯೇ ಕಾಣುತ್ತದೆ. ಇಲ್ಲಿ ಗ್ರಾಹಕರೇ ತಮ್ಮ ಮರುಪಾವತಿಯ ಶಕ್ತಿಯ ನಂಬಿಕೆಯ ಮೇಲೆ ಸಾಲ ಪಡೆಯುತ್ತಾರಾದ್ದರಿಂದ ಈ ಸಾಲದ ಮಿತಿಯ ಮೇಲೆ ಹೆಚ್ಚಿನ ಕಡಿವಾಣ ಇರಬೇಕು. ಸಾಲದ ಗರಿಷ್ಠ ಮಿತಿಯನ್ನು ಆರು ಪಟ್ಟು ಹೆಚ್ಚಿಸುವಾಗ ಗ್ರಾಮೀಣ ಪ್ರದೇಶಗಳಲ್ಲಿ ಈ ಹದಿನಾಲ್ಕು ವರ್ಷಗಳಲ್ಲಿ ಆರ್ಥಿಕ ವೃದ್ಧಿ ಅಷ್ಟರಮಟ್ಟಿಗೆ ಆಗಿದೆಯೇ ಎನ್ನುವ ಪ್ರಶ್ನೆಯನ್ನು ಯಾರೂ ಕೇಳಿದಂತಿಲ್ಲ.

ಇನ್ನು ಮಾಹಿತಿಯ ವಿಷಯಕ್ಕೆ ಬಂದರೆ, ಮಾಹಿತಿಯನ್ನು ಕಡ್ಡಾಯವಾಗಿ ನೀಡಬೇಕೆಂದು ರಿಸರ್ವ್ ಬ್ಯಾಂಕು ತನ್ನ ನಿಯಂತ್ರಣದಲ್ಲಿರುವ ಸಂಸ್ಥೆಗಳಿಗೆ ಮಾತ್ರ ನಿಯಮ ಜಾರಿ ಮಾಡಬಹುದು. ಆದರೆ ರಿಸರ್ವ್ ಬ್ಯಾಂಕಿನ ನಿಯಂತ್ರಣಕ್ಕೆ ಒಳಪಡದ ಅನೇಕರು (ಸಹಕಾರಿ ಸಂಘಗಳು, ಸೊಸೈಟಿಗಳು, ಟ್ರಸ್ಟ್, ಸ್ವಸಹಾಯ ಗುಂಪುಗಳು, ಚಿಟ್ ಕಂಪನಿಗಳು, ಅನಿಯಂತ್ರಿತ ಬಡ್ಡಿ ವ್ಯಾಪಾರಿಗಳು) ಮಾರುಕಟ್ಟೆಯಲ್ಲಿ ಇದ್ದಾರೆ. ಅವರ ಮಾಹಿತಿ ಸಂಗ್ರಹವಾಗುತ್ತಿಲ್ಲ. ಮೈಕ್ರೊಫೈನಾನ್ಸ್ ಗ್ರಾಹಕರು ಬೇರೆ ಮೂಲಗಳಿಂದ ಎಷ್ಟು ಸಾಲವನ್ನು ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಇಲ್ಲವಾಗಿದೆ.

ಸದ್ಯ ಕರ್ನಾಟಕ ಸರ್ಕಾರ ಜಾರಿ ಮಾಡಿರುವ ಸುಗ್ರೀವಾಜ್ಞೆಯ ಉದ್ದೇಶ ಒಳ್ಳೆಯದೇ ಆಗಿದ್ದರೂ ಅದರಿಂದ ಹೆಚ್ಚಿನ ಪ್ರಯೋಜನವಾಗುವಂತೆ ಕಾಣುತ್ತಿಲ್ಲ. ಅದರಲ್ಲಿ ರಿಸರ್ವ್ ಬ್ಯಾಂಕಿನ ಸುಪರ್ದಿಯಲ್ಲಿರುವ ಸಂಸ್ಥೆಗಳನ್ನು ಹೊರಗಿಡಲಾಗಿದೆ. ಮಿಕ್ಕ ಸಂಸ್ಥೆಗಳಿಂದ ಮಾಹಿತಿಯನ್ನು ಸಂಗ್ರಹಿಸುವುದು ಈ ಚೌಕಟ್ಟಿಗೆ ಒಳಪಟ್ಟಿದೆಯಾದರೂ ಅದನ್ನು ಸಮರ್ಪಕವಾಗಿ ಜಾರಿಗೆ ತರುವ ಮತ್ತು ಅದನ್ನು ಆಧಾರವಾಗಿ ಇಟ್ಟುಕೊಂಡು ಒಂದು ನಿಯಂತ್ರಣಾ ಚೌಕಟ್ಟನ್ನು ರೂಪಿಸುವ ದೂರದೃಷ್ಟಿ ಕಾಣುತ್ತಿಲ್ಲ. ಇದರಿಂದ ಪ್ರಾಮಾಣಿಕವಾಗಿ ವ್ಯವಹರಿಸುತ್ತಿರುವ ಸಂಸ್ಥೆಗಳಿಗೆ ತೊಂದರೆಯಾಗುತ್ತದೆ. ಪರವಾನಗಿ ಪಡೆಯದೆ ನೀಡಿದ ಸಾಲ ವಸೂಲಿಗೆ ಅರ್ಹವಲ್ಲ ಎಂದು ಹೇಳಲಾಗಿದ್ದರೂ ಇದಕ್ಕೆ ಒಂದು ಶಾಶ್ವತವಾದ ಏರ್ಪಾಟನ್ನು ಮಾಡಬೇಕಾಗಿದೆ. ಈ ದಿಸೆಯಲ್ಲಿ ಸರ್ಕಾರ ಏನು ಮಾಡಬಹುದು?

ಇದಕ್ಕೆ ಒಂದು ದೀರ್ಘಕಾಲಿಕ ಪರಿಹಾರವನ್ನು ಒದಗಿಸಲು ಸರ್ಕಾರ ಭಿನ್ನ ರೀತಿಯಲ್ಲಿ ಆಲೋಚಿಸಬೇಕು. ಸುಗ್ರೀವಾಜ್ಞೆಯಲ್ಲಿ ಮಂಡಿಸಿರುವ ಉದ್ದೇಶಗಳು ಉದಾತ್ತವಾದವು ಅನ್ನುವುದು ನಿಜ. ಆದರೆ ಅವನ್ನು ಜಾರಿಗೊಳಿಸಲು ಸರ್ಕಾರಿ ಆಡಳಿತ ವ್ಯವಸ್ಥೆ ಸಮರ್ಪಕವಾಗಿಲ್ಲ. ಈ ಕೆಲಸವನ್ನು ವ್ಯವಸ್ಥಿತವಾಗಿ ಮಾಡಬೇಕಾದರೆ, ರಾಜ್ಯ ಮಟ್ಟದ ಹಣಕಾಸು ಕ್ಷೇತ್ರ ನಿಯಂತ್ರಣಾ ಪ್ರಾಧಿಕಾರವನ್ನು ರಚಿಸಬೇಕು. ಕೇರಳ ಸರ್ಕಾರವು ಪತ್ತಿನ ವ್ಯವಸ್ಥೆಯಲ್ಲಿ ಜಿಲ್ಲಾ ಸಹಕಾರಿ ಬ್ಯಾಂಕುಗಳನ್ನು ರಾಜ್ಯದ ಅಪೆಕ್ಸ್ ಬ್ಯಾಂಕಿನೊಂದಿಗೆ ವಿಲೀನಗೊಳಿಸಲು ಸಮಿತಿಯೊಂದನ್ನು ರಚಿಸಿತ್ತು. ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಡಾ. ವೈ.ವಿ.ರೆಡ್ಡಿ ಅವರ ಸಲಹೆಯ ಮೇರೆಗೆ ಈ ಸಮಿತಿಯು ಇಂತಹ ಸೂಚನೆಯನ್ನು ಕೇರಳ ಸರ್ಕಾರಕ್ಕೆ ನೀಡಿತ್ತು. ಅದು ಜಾರಿಯಾಗಲಿಲ್ಲ. ಆದರೆ ಕರ್ನಾಟಕ ಸರ್ಕಾರ ಈ ಸಲಹೆಯನ್ನು ಕಾರ್ಯರೂಪಕ್ಕೆ ತರಬಹುದು. ಇದರಿಂದ ರಿಸರ್ವ್ ಬ್ಯಾಂಕಿನ ವ್ಯಾಪ್ತಿಗೆ ಬರದ ಎಲ್ಲ ಸಂಸ್ಥೆಗಳೂ ಈ ಪ್ರಾಧಿಕಾರದ ಅಡಿಯಲ್ಲಿ ಬರುತ್ತವೆ. ಅವು ನಿಯಮಿತವಾಗಿ ತಮ್ಮ ಮಾಹಿತಿಯನ್ನು ಕ್ರೆಡಿಟ್ ಬ್ಯೂರೊಗಳೊಂದಿಗೆ ಹಂಚಿಕೊಳ್ಳಬೇಕೆಂಬ ನಿಯಮವನ್ನು ಜಾರಿ ಮಾಡಿದರೆ, ಅಪೂರ್ಣ ಮಾಹಿತಿಯಿಂದ ಆಗುತ್ತಿರುವ ತೊಡಕುಗಳ ನಿವಾರಣೆಯತ್ತ ಒಂದು ಹೆಜ್ಜೆ ಇಟ್ಟಂತೆ ಆಗುತ್ತದೆ. ಸಂಸ್ಥೆಗಳ ವಾರ್ಷಿಕ ವಹಿವಾಟಿನ ಮಾಹಿತಿಯನ್ನು ಒಂದೆಡೆ ದಾಖಲಿಸಲು ಮತ್ತು ಸಂಸ್ಥೆಗಳನ್ನು ನಿಯಂತ್ರಿಸಲು ಒಂದು ಚೌಕಟ್ಟು ಸಿಕ್ಕಂತೆ ಆಗುತ್ತದೆ.

ರಾಜ್ಯದ ಕಾನೂನಿನ ಅಡಿಯಲ್ಲಿ ಬರುವ ಸಹಕಾರ ವ್ಯವಸ್ಥೆ, ಸ್ವಸಹಾಯ ಗುಂಪುಗಳು, ಸೊಸೈಟಿಗಳು, ಇತರ ಎಲ್ಲ ಆರ್ಥಿಕ ಕ್ಷೇತ್ರದ ಸಂಸ್ಥೆಗಳು ಈ ಕಾನೂನು ಮತ್ತು ಪ್ರಾಧಿಕಾರದ ಅಡಿಯಲ್ಲಿ ಬರಬೇಕು. ಆಗ ಸದ್ಯದ ಸುಗ್ರೀವಾಜ್ಞೆಯಲ್ಲಿರುವ ಉದ್ದೇಶವನ್ನು ಸಾಧಿಸಲು ಒಂದು ಸುಸ್ಥಿರ ಏರ್ಪಾಟನ್ನು ಸರ್ಕಾರ ಮಾಡಿದೆ ಎಂದು ನಂಬಬಹುದು.

ಈಗಿನ ತೇಪೆಯಿಂದ ಮೈಕ್ರೊಫೈನಾನ್ಸ್ ಕ್ಷೇತ್ರದಲ್ಲಿ ಸುಸ್ತಿ ಹೆಚ್ಚಾಗುತ್ತದೆಯೇ ವಿನಾ ಯಾವ ಮೂಲಭೂತ ಬದಲಾವಣೆಗಳೂ ಆಗುವುದಿಲ್ಲ. ಮೈಕ್ರೊಫೈನಾನ್ಸ್ನ ಮಾದರಿ ಬಿರುಕು ಬಿಟ್ಟು ಛಿದ್ರವಾಗುತ್ತಿದೆ. ಈ ಕ್ಷೇತ್ರವನ್ನು ಹೊಸದಾಗಿ ಮರುರೂಪಿಸದೇ ಅನ್ಯಮಾರ್ಗವಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.