ಜಾಗತಿಕ ವ್ಯಾಪಾರ ಸುಂಕ ಸಮರ ಮತ್ತು ಷೇರುಪೇಟೆಯ ಚಂಚಲತೆಯ ನಡುವೆಯೂ ಭಾರತವು ಎಂತಹ ಸನ್ನಿವೇಶವನ್ನಾದರೂ ನಿಭಾಯಿಸುವ ಸಾಮರ್ಥ್ಯವುಳ್ಳ ಆರ್ಥಿಕತೆಯಾಗಿ ಪ್ರಕಾಶಿಸುತ್ತಿದೆ. ತನ್ನಲ್ಲಿರುವ ಜನಸಂಖ್ಯೆಯ ಅನುಕೂಲ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಬಳಸಿಕೊಂಡು ದೇಶವು ಸವಾಲುಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಬಹುದು. ಆ ಮೂಲಕ, ಜಾಗತಿಕ ಮಟ್ಟದಲ್ಲಿ ತನ್ನನ್ನು ‘ಸೃಜನಶೀಲತೆಯ ಶಕ್ತಿಕೇಂದ್ರ’ ಎಂದು ಗುರುತಿಸಿಕೊಳ್ಳಬಲ್ಲದು.

ಕಥೆ ಹೇಳುವ ಶ್ರೀಮಂತ ಪರಂಪರೆ ಹೊಂದಿರುವ ಭಾರತದ ಮಾಧ್ಯಮ ಮತ್ತು ಮನರಂಜನೆ (ಎಂ ಆ್ಯಂಡ್ ಇ) ವಲಯವು ‘ಭಾರತದಲ್ಲಿ ಸೃಷ್ಟಿಸಿ, ಪ್ರಪಂಚಕ್ಕಾಗಿ ಸೃಷ್ಟಿಸಿ’ ಎಂಬ ದೃಷ್ಟಿಕೋನದ ಮೂಲಕ ಜಗತ್ತಿನಾದ್ಯಂತ ಇರುವ ‘ಸೃಜನಶೀಲ ಪ್ರತಿಭೆಗಳನ್ನು ಸಂಪರ್ಕಿಸುವ’ ಗುರಿಯನ್ನು ಹೊಂದಿದೆ.

ಸಿನಿಮಾ, ಸಂಗೀತ, ಕಲೆ, ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವೇಗವಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಸೃಜನಶೀಲ ಯುವ ಜನಸಮೂಹಕ್ಕೆ ಭಾರತವು ನೆಲೆಯಾಗಿದೆ. ವಿವಿಧ ವಿಭಾಗಗಳಲ್ಲಿ ಆಸ್ಕರ್ ಗೆದ್ದಿದ್ದ ‘ಡ್ಯೂನ್–2’ ಚಲನಚಿತ್ರದಲ್ಲಿ ನಮಿತ್ ಮಲ್ಹೋತ್ರಾ ನೇತೃತ್ವದ ವಿಷ್ಯುವಲ್ ಎಫೆಕ್ಟ್ಸ್ ಮತ್ತು ಆ್ಯನಿಮೇಷನ್ ಸ್ಟುಡಿಯೊ ‘ಡಿಎನ್ಇಜಿ’ಯು ಅತ್ಯದ್ಭುತವಾದ ವಿಎಫ್ಎಕ್ಸ್ ತಂತ್ರಜ್ಞಾನ ಕೌಶಲವನ್ನು ಪ್ರದರ್ಶಿಸಿತ್ತು. ಇದು ಭಾರತದ ಏಳನೇ ಆಸ್ಕರ್ ಗೆಲುವು. ಜಾಗತಿಕ ಮನರಂಜನಾ ಉದ್ಯಮದಲ್ಲಿ ಭಾರತದ ಪ್ರಭಾವ ಹೆಚ್ಚಾಗುತ್ತಿರುವುದನ್ನು ಇದು ತೋರಿಸುತ್ತದೆ. ಸಾಂಪ್ರದಾಯಿಕ ಚಿತ್ರ ನಿರ್ಮಾಣದಿಂದ ಡಿಜಿಟಲ್ ನಿರ್ಮಾಣದವರೆಗೆ ಆಗಿರುವ ವಿಕಸನವು ವಿಶ್ವ ದರ್ಜೆಯ ‘ಕಂಟೆಂಟ್’ ಅನ್ನು ಸೃಷ್ಟಿಸುವ ದೇಶದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.

ಕೇಂದ್ರ ಸರ್ಕಾರದ ‘ಜಾಗತಿಕ ಶ್ರವಣ–ದೃಶ್ಯ ಮನರಂಜನೆ ಶೃಂಗಸಭೆ–2025’ರ (ವೇವ್ಸ್) ಭಾಗವಾಗಿರುವ, ಸಮನ್ವಯ ವ್ಯವಸ್ಥೆಯಾದ ವೇವ್ಸ್ ಎಕ್ಸಲರೇಟರ್– ವೇವ್ಎಕ್ಸ್ ಯುವ ಸೃಜನಶೀಲ ಪ್ರತಿಭೆಗಳನ್ನು ಉದ್ಯಮದ ನಾಯಕರೊಂದಿಗೆ ಸಂಪರ್ಕಿಸುವ ಮತ್ತು ನವೋದ್ಯಮದ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶವನ್ನು ಹೊಂದಿದೆ. ಮುಂಬೈನಲ್ಲಿ ಮೇ ತಿಂಗಳಲ್ಲಿ ನಡೆಯಲಿರುವ ಈ ಶೃಂಗಸಭೆಯು ಭಾರತದ ಮಾಧ್ಯಮ ಮತ್ತು ಮನರಂಜನೆ ನವೋದ್ಯಮ ವ್ಯವಸ್ಥೆಗೆ ಮಾರ್ಗದರ್ಶನ, ಹಣಕಾಸಿನ ನೆರವು ಮತ್ತು ಜಾಗತಿಕ ಅವಕಾಶಗಳನ್ನು ಒದಗಿಸಿ ಈ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಲು ಪ್ರಯತ್ನಿಸಲಿದೆ. ಗೇಮಿಂಗ್, ಕೃತಕ ಬುದ್ಧಿಮತ್ತೆ ಮತ್ತು ಮೆಟಾವರ್ಸ್ನಂತಹ ನವೀನ ಕ್ಷೇತ್ರಗಳನ್ನು ಒಳಗೊಂಡಿರುವ ಈ ವಲಯವು 2023ರಲ್ಲಿ ₹2.42 ಲಕ್ಷ ಕೋಟಿ ಮೌಲ್ಯ ಹೊಂದಿತ್ತು. ಅದು 2027ರ ಹೊತ್ತಿಗೆ ₹3.06 ಲಕ್ಷ ಕೋಟಿಗೆ ಏರಿಕೆಯಾಗುವ ನಿರೀಕ್ಷೆ ಇದೆ.

ಮನ್ನಣೆ ಗಳಿಸುವಿಕೆಯಲ್ಲಿ ಇರುವ ಸವಾಲುಗಳ ನಡುವೆಯೂ ಈ ಶೃಂಗಸಭೆಯು ಬ್ರಹ್ಮನ್ ಗೇಮ್ ಸ್ಟುಡಿಯೋಸ್, ಕೀಬೌಂಡ್ ಮತ್ತು ವಾಯೊನ್ ಕ್ಲೌಡ್ನಂತಹ ನವೋದ್ಯಮಗಳಿಗೆ ಜಾಗತಿಕ ಬಂಡವಾಳ ಹೂಡಿಕೆದಾರರ ಮುಂದೆ ತಮ್ಮ ಕೌಶಲಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಲಿದೆ. ಮಹಿಳೆಯರು ನೇತೃತ್ವ ವಹಿಸಿರುವ ಲ್ಯಾಪ್ವಿಂಗ್ ಸ್ಟುಡಿಯೋಸ್ ಮತ್ತು ವೈಗರ್ ಮೀಡಿಯಾದಂತಹ ನವೋದ್ಯಮಗಳು ಕೂಡ ‘ವೇವ್ಸ್’ನ ಭಾಗವಾಗಲಿವೆ. ಇದು ಎಂ ಆ್ಯಂಡ್ ಇ ವ್ಯವಸ್ಥೆಯಲ್ಲಿ ಒಳಗೊಳ್ಳುವಿಕೆಯನ್ನೂ ಹೆಚ್ಚಿಸಲಿದೆ.

ಹೆಚ್ಚು ಕ್ರಿಯಾಶೀಲ ಮತ್ತು ಸ್ಪರ್ಧಾತ್ಮಕವಾದ ನವೋದ್ಯಮ ವಾತಾವರಣ ಸೃಷ್ಟಿಸಲು ಮತ್ತು ಅಂತರರಾಷ್ಟ್ರೀಯ ಯಶಸ್ಸಿಗೆ ಚಿಮ್ಮುಹಲಗೆಯಾಗಲು ‘ವೇವ್ಸ್’ ಬದ್ಧವಾಗಿದೆ. ಬಂಡವಾಳ, ಮಾರ್ಗದರ್ಶನ ಮತ್ತು ಜಾಗತಿಕ ತೆರೆದುಕೊಳ್ಳುವಿಕೆಗೆ ಇರುವ ಅಡೆತಡೆಗಳನ್ನು ವೇವ್ಎಕ್ಸ್ ನೇರವಾಗಿ ಪರಿಹರಿಸಲಿದೆ. ನವೋದ್ಯಮಗಳಿಗೆ ಹಣಕಾಸಿನ ನೆರವು ನೀಡುವುದು ಮಾತ್ರವಲ್ಲದೆ, ಅವುಗಳ ಬೆಳವಣಿಗೆಗಾಗಿ ರಚನಾತ್ಮಕ ವ್ಯವಸ್ಥೆಯನ್ನೂ ರೂಪಿಸಲಿದೆ.

ಬರೀ ₹10 ಸಾವಿರ ಬಂಡವಾಳ ಮತ್ತು ದೂರದೃಷ್ಟಿಯೊಂದಿಗೆ ಬಯೋಕಾನ್ ಆರಂಭಿಸಿದ್ದ ನಾನು, ಪರಿವರ್ತನೆ ತರಬಹುದಾದ ಇಂತಹ ವೇದಿಕೆಗಳ ಮಹತ್ವವನ್ನು ಅರ್ಥಮಾಡಿಕೊಂಡಿದ್ದೇನೆ. ಬೆಂಗಳೂರಿನ ಮ್ಯೂಸಿಯಂ ಆಫ್ ಆರ್ಟ್ ಆ್ಯಂಡ್ ಫೋಟೊಗ್ರಫಿ (ಮ್ಯಾಪ್) ಮತ್ತು ಸೈನ್ಸ್ ಗ್ಯಾಲರಿಯಂತಹ ಸಂಸ್ಥೆಗಳ ಮೂಲಕ ಕಲೆ ಮತ್ತು ವಿಜ್ಞಾನಕ್ಕೆ ಬೆಂಬಲ ನೀಡುತ್ತಾ ಬಂದಿದ್ದೇನೆ. ದೇಶದ ಸಂಸ್ಕೃತಿಯ ಬೇರುಗಳು ಕಲೆ ಮತ್ತು ವಿಜ್ಞಾನ ಎರಡೂ ಕ್ಷೇತ್ರಗಳಲ್ಲಿ ಹರಡಿವೆ ಎಂದು ನಂಬಿದ್ದೇನೆ. ಕಲೆಗಳು ಮತ್ತು ವಿಜ್ಞಾನ ಎರಡೂ ಸೃಜನಶೀಲತೆಯಲ್ಲಿ ಬೇರೂರಿವೆ. ಕಲಾವಿದರು ಕ್ಯಾನ್ವಾಸ್ ಮೇಲೆ ಪ್ರಯೋಗ ಮಾಡುವಂತೆ ವಿಜ್ಞಾನಿಗಳು ಪ್ರಯೋಗಾಲಯಗಳಲ್ಲಿ ಪ್ರಯೋಗ ಮಾಡುತ್ತಾರೆ.

ತನ್ನ ಜನಸಂಖ್ಯೆಯ ಅನುಕೂಲ, ತಾಂತ್ರಿಕ ಸಾಮರ್ಥ್ಯಗಳು ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಒಗ್ಗೂಡುವಿಕೆಯಿಂದಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತವು ಸೃಜನಶೀಲತೆಯ ತಾಣವಾಗಿ ಹೊರಹೊಮ್ಮುತ್ತಿದೆ. ಇದು ತಾತ್ವಿಕವಾದ ಸಮ್ಮಿಲನ ಮಾತ್ರವಲ್ಲ. ಬದಲಿಗೆ, ಪ್ರಾಯೋಗಿಕವಾದ, ಉದ್ದಿಮೆಗಳನ್ನು ರೂಪಿಸುವಂತಹ, ಮಾಧ್ಯಮ ಮತ್ತು ಮನರಂಜನೆ ವಲಯದೊಳಗೆ ನವೀನ ಕಲ್ಪನೆಗಳನ್ನು ಪ್ರೇರೇಪಿಸುವಂತಹದ್ದಾಗಿದೆ.

ಶತಮಾನಗಳಿಂದಲೂ ಕಥೆ ಹೇಳುವ ಸಂಪ್ರದಾಯ ಹೊಂದಿರುವ ಭಾರತವು ಈಗ ಜಾಗತಿಕವಾಗಿ ಸೃಜನಶೀಲ ಶಕ್ತಿಕೇಂದ್ರವಾಗಿ ಹೊರಹೊಮ್ಮುವಂತಹ ವಿಶಿಷ್ಟ ಸ್ಥಾನದಲ್ಲಿ ನಿಂತಿದೆ. ಶಾಸ್ತ್ರೀಯ ನೃತ್ಯದಿಂದ ಸಿನಿಮಾದವರೆಗೆ, ಕಾಮಿಕ್ಸ್ನಿಂದ ಡಿಜಿಟಲ್ ತಂತ್ರಜ್ಞಾನದವರೆಗೆ... ಸೃಜನಶೀಲತೆಯು ಅತ್ಯಾಧುನಿಕ ತಂತ್ರಜ್ಞಾನದ ಆವಿಷ್ಕಾರ ಮತ್ತು ನವೀನ ಕಲ್ಪನೆಗಳನ್ನು ಸಂಧಿಸುವ ರೋಮಾಂಚಕ ಯುಗವನ್ನು ನಾವೀಗ ಪ್ರವೇಶಿಸುತ್ತಿದ್ದೇವೆ. ‘ಕ್ರಿಯೇಟ್ ಇನ್ ಇಂಡಿಯಾ, ಕ್ರಿಯೇಟ್ ಫಾರ್ ದಿ ವರ್ಲ್ಡ್’ ಎಂಬ ಚಿಂತನೆಯು ಈ ಮಹತ್ವಾಕಾಂಕ್ಷೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.

ಈ ಶೃಂಗಸಭೆಯು ತಂತ್ರಜ್ಞಾನ ಮತ್ತು ಕಥೆ ಹೇಳುವಿಕೆಯ ಸೊಗಸಾದ ಸಂಧಿಸುವಿಕೆಗೆ ಒಂದು ಉದಾಹರಣೆ. ಆ್ಯನಿಮೇಷನ್, ಕೃತಕ ಬುದ್ಧಿಮತ್ತೆ, ಎಆರ್–ವಿಆರ್ (ಆಗ್ಮೆಂಟೆಡ್ ರಿಯಾಲಿಟಿ– ವರ್ಚ್ಯುವಲ್ ರಿಯಾಲಿಟಿ), ಗೇಮಿಂಗ್ ಮತ್ತು ಮೆಟಾವರ್ಸ್ನಂತಹ ನವೀನ ಕ್ಷೇತ್ರಗಳಲ್ಲಿರುವ ನವೋದ್ಯಮಗಳನ್ನು ಬೆಂಬಲಿಸುವ ಮೂಲಕ ತಂತ್ರಜ್ಞಾನ ಮತ್ತು ಕಥೆ ಹೇಳುವಿಕೆಯನ್ನು ಒಂದೇ ಬಿಂದುವಿನಲ್ಲಿ ಸೇರಿಸಲು ‘ವೇವ್ಎಕ್ಸ್’ ಸಜ್ಜಾಗಿದೆ.

‘ವೇವ್ಸ್’ನಲ್ಲಿ ಭಾಗಿಯಾಗಲು 4,500ಕ್ಕೂ ಹೆಚ್ಚು ಮಾರಾಟಗಾರರು ಮತ್ತು 5,900ಕ್ಕೂ ಹೆಚ್ಚು ಖರೀದಿದಾರರು ನೋಂದಣಿ ಮಾಡಿಕೊಂಡಿದ್ದಾರೆ. ಈ ಶೃಂಗಸಭೆಯು ಭಾರತೀಯ ನವೋದ್ಯಮಗಳನ್ನು ಜಾಗತಿಕ ಮಟ್ಟದ ಕಂಪನಿಗಳೊಂದಿಗೆ ಸಂಪರ್ಕಿಸಲಿದ್ದು, ಜಾಗತಿಕ ಮಾಧ್ಯಮ ಮತ್ತು ಮನರಂಜನೆ ಕ್ಷೇತ್ರದಲ್ಲಿ ಭಾರತ ನಾಯಕನ ಸ್ಥಾನಕ್ಕೆ ಏರುವುದಕ್ಕೆ ವೇಗ ನೀಡಲಿದೆ.

ಸಾಂಪ್ರದಾಯಿಕ ಮಾಧ್ಯಮವನ್ನು ಮೀರಿದ ನವೀನ ಕಲ್ಪನೆಗಳನ್ನೂ ‘ವೇವ್ಸ್’ ಪ್ರೋತ್ಸಾಹಿಸುತ್ತದೆ. ಎರುಕಾನವಿಸ್ ಟೆಕ್ನಾಲಜೀಸ್ನಂತಹ ಕಂಪನಿಗಳು ಎಐ-ಆಧಾರಿತ ಜಾಹೀರಾತು ಆ್ಯಪ್ಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ಪರಿಣತಿ ಸಾಧಿಸಿವೆ.

ಆ್ಯನಿಮೇಷನ್ ಮತ್ತು ವಿಆರ್ ತಂತ್ರಜ್ಞಾನದ ಮೂಲಕ ಕಥೆ ಹೇಳುವಿಕೆಯನ್ನು ನವೋದ್ಯಮಗಳಾದ ಅಮೇಜ್ ಸ್ಟುಡಿಯೋಸ್ ಮತ್ತು ಆಫ್ಲೈನ್ ಹ್ಯೂಮನ್ ಸ್ಟುಡಿಯೋಸ್ ಮರುವ್ಯಾಖ್ಯಾನಿಸುತ್ತಿವೆ. ಇನ್ಸ್ಕೇಪ್ಎಕ್ಸ್ ಆರ್ ಮತ್ತು ವಿಷನ್ ಇಂಪ್ಯಾಕ್ಟ್ನಂತಹ ಕಂಪನಿಗಳು ಡಿಜಿಟಲ್ ಮಾಧ್ಯಮದ ಮೂಲಕ ಕಲಿಕೆಯನ್ನು ರೂಪಾಂತರಿಸುತ್ತಿವೆ. ಒಟ್ಟಾಗಿ, ಈ ನವೋದ್ಯಮಗಳು ಭಾರತದ ಸೃಜನಶೀಲ ವ್ಯವಸ್ಥೆಯು ಹೊಂದಿರುವ ಬೃಹತ್ ಸಾಮರ್ಥ್ಯ ಮತ್ತು ಜಾಗತಿಕ ಪ್ರಸ್ತುತತೆಯನ್ನು ಎತ್ತಿ ತೋರಿಸುತ್ತವೆ.

ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಸೃಜನಶೀಲತೆಯ ಸುದೀರ್ಘ ಚರಿತ್ರೆಗೆ ಭಾರತ ಹಿಂದಿನಿಂದಲೂ ಹೆಸರುವಾಸಿ. ಪ್ರತಿಭಾವಂತರಾದ ಮತ್ತು ದೂರದೃಷ್ಟಿಯನ್ನು ಹೊಂದಿರುವ ಇಂದಿನ ಯುವಜನರಲ್ಲಿ ಸೃಜನಶೀಲತೆ ಎನ್ನುವುದು ಹಾಸುಹೊಕ್ಕಾಗಿದೆ. ಚಲನಚಿತ್ರ, ಸಂಗೀತ, ಆ್ಯನಿಮೇಷನ್, ಗೇಮಿಂಗ್ ಮತ್ತು ಡಿಜಿಟಲ್ ಮಾಧ್ಯಮ ಕ್ಷೇತ್ರಗಳಲ್ಲಿ ಭಾರತದ ಸೃಜನಶೀಲ ಯುವ ಪ್ರತಿಭೆಗಳು ಗಡಿಗಳನ್ನೂ ಮೀರಿ ಸಾಧನೆ ಮಾಡುತ್ತಿದ್ದಾರೆ. ಈ ಕ್ಷೇತ್ರಗಳನ್ನು ಮರುವ್ಯಾಖ್ಯಾನಿಸುತ್ತಿದ್ದಾರೆ.

‘ವೇವ್ಸ್’ನಂತಹ ಪ್ರಯತ್ನಕ್ಕೆ ಬೆಂಬಲ ನೀಡಿರುವ ಭಾರತ ಸರ್ಕಾರವು ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ದೇಶ ಹೊಂದಿರುವ ಸಾಮರ್ಥ್ಯಕ್ಕೆ ಪ್ರೋತ್ಸಾಹ ನೀಡುವ ಬದ್ಧತೆ ಪ್ರದರ್ಶಿಸಿದೆ.

ಈ ಶೃಂಗಸಭೆಯ ಮೂಲಕ ನಾವು ನವೋದ್ಯಮಗಳಲ್ಲಿ ಹೂಡಿಕೆಯನ್ನು ಮಾತ್ರ ಮಾಡುತ್ತಿಲ್ಲ; ಬದಲಿಗೆ ಕಥೆ ಹೇಳುವಿಕೆಯಲ್ಲಿ, ಸ್ವಯಂ ಅಭಿವ್ಯಕ್ತಿಯಲ್ಲಿ ಮತ್ತು ನಮ್ಮ ಭವಿಷ್ಯವನ್ನು ವ್ಯಾಖ್ಯಾನಿಸುವ ಸೃಜನಶೀಲ ಆರ್ಥಿಕತೆಯಲ್ಲೂ ಹೂಡಿಕೆ ಮಾಡುತ್ತಿದ್ದೇವೆ. ಅದು ಜೈವಿಕತಂತ್ರಜ್ಞಾನ ಪ್ರಯೋಗಾಲಯ ಆಗಿರಲಿ ಅಥವಾ ಡಿಜಿಟಲ್ ಸ್ಟುಡಿಯೋವೆ ಆಗಿರಲಿ, ಸೃಜನಶೀಲತೆ ಎನ್ನುವುದು ನಾಳೆಯ ಕೈಗಾರಿಕೆಗಳು ಮತ್ತು ಅಸ್ಮಿತೆಯನ್ನು ರೂಪಿಸುವ ಕರೆನ್ಸಿಯಾಗಿದೆ.

‘ವೇವ್ಸ್’ ಭಾರತದ ಮಾಧ್ಯಮ ಮತ್ತು ಮನರಂಜನೆ ಉದ್ಯಮದ ಸಂಭ್ರಮಾಚರಣೆ ಅಷ್ಟೇ ಅಲ್ಲ; ಅದಕ್ಕಿಂತಲೂ ಮಿಗಿಲಾದದ್ದು. ಈ ಜಗತ್ತು ಮನರಂಜನೆ, ಶಿಕ್ಷಣ ಮತ್ತು ಸಂಸ್ಕೃತಿಯನ್ನು ಬಳಸುತ್ತಿರುವ ರೀತಿಯನ್ನು ಪರಿವರ್ತಿಸಲು ಸಜ್ಜಾಗಿರುವ ಮುಂದಿನ ಪೀಳಿಗೆಯ ಸೃಜನಶೀಲ ಪ್ರತಿಭೆಗಳು ಮತ್ತು ಉದ್ಯಮಿಗಳಿಗೆ ಇದು ಚಿಮ್ಮುಹಲಗೆಯೂ ಆಗಿದೆ.

‘ವೇವ್ಸ್’ನ ಸಲಹಾ ಮಂಡಳಿಯ ಸದಸ್ಯಳಾಗಿ, ಈ ಪರಿವರ್ತನೆಯ ಪ್ರಯಾಣದ ಭಾಗವಾಗಲು ನನಗೆ ಹೆಮ್ಮೆ ಇದೆ. ಈ ಶೃಂಗಸಭೆಯ ಪರಿಣಾಮವು ಸ್ಟುಡಿಯೊಗಳು ಮತ್ತು ಬೋರ್ಡ್ರೂಂಗಳನ್ನೂ ಮೀರಿ ಸಾಗಲಿದೆ. ಹೇಳಲಾಗುವ ಪ್ರತಿಯೊಂದು ಕಥೆಯಲ್ಲಿ, ಯಶಸ್ಸು ಸಾಧಿಸಿದ ಪ್ರತಿಯೊಂದು ನವೋದ್ಯಮದಲ್ಲಿ ಮತ್ತು ಸಂಪ್ರದಾಯಕ್ಕೆ ಸವಾಲೊಡ್ಡುವ ಪ್ರತಿಯೊಂದು ನಾವೀನ್ಯದಲ್ಲೂ ಅದು ಪ್ರತಿಧ್ವನಿಸಲಿದೆ.

ಜಾಗತಿಕ ಸೃಜನಶೀಲತೆಯ ಕ್ರಾಂತಿಯನ್ನು ಮುನ್ನಡೆಸುವ ಭಾರತದ ಕ್ಷಣಗಳು ಇಲ್ಲಿವೆ. ನಾವು ‘ಭಾರತದಲ್ಲಿ ಸೃಷ್ಟಿಸೋಣ, ಪ್ರಪಂಚಕ್ಕಾಗಿ ಸೃಷ್ಟಿಸೋಣ’ ಮತ್ತು ನಮ್ಮ ಕಲ್ಪನೆಯ ಅಪರಿಮಿತ ಶಕ್ತಿಯನ್ನು ಜಗತ್ತಿಗೆ ತೋರಿಸೋಣ.

ಲೇಖಕಿ: ಬಯೋಕಾನ್ ಸಮೂಹದ ಅಧ್ಯಕ್ಷೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.