‘ಸಹಿಸಲಾರೆ, ಈ ಅವಮಾನವನ್ನ ಯಾವುದೇ ಕಾರಣಕ್ಕೂ ಸಹಿಸಲಾರೆ’ ಎಂದು ವೈಟ್ ಆ್ಯಂಡ್ ವೈಟ್ ಡ್ರೆಸ್ ಹಾಕ್ಕೊಂಡು, ಹೆಗಲ ಮೇಲೊಂದು ಕಾಸ್ಟ್ಲಿ ಶಾಲು ಏರಿಸಿಕೊಂಡು ಬಂದರು ಪೊಲಿಟಿಷಿಯನ್ ಮುದ್ದಣ್ಣ ಸಾಹೇಬ್ರು.

‘ಏನ್ ಸರ್? ಏನು ಸಹಿಸಲ್ಲ ಅಂದಿದ್ದು’ ಕೇಳಿದ ಪಿ.ಎ. ವಿಜಿ.

‘ಫಂಕ್ಷನ್ಗೆ ಹೋಗಿ, ಆ ಕಪ್ಗೊಂದು ಮುತ್ತಿಟ್ಟಿದ್ದಕ್ಕೆ ಇಷ್ಟೆಲ್ಲ ರಾದ್ಧಾಂತ ಆಯ್ತು. ರಾಜಕಾರಣಿಗಳಿಗೂ ಕ್ರಿಕೆಟ್ಗೂ ಏನ್ ಸಂಬಂಧ ಅಂತ ಎಲ್ಲರೂ ಕೇಳ್ತಿದ್ದಾರೆ’ ಸಿಟ್ಟಲ್ಲೇ ಹೇಳಿದರು ಮುದ್ದಣ್ಣ.

‘ಆಗಿರೋದು ಸಣ್ಣ ಅವಘಡವೇನೂ ಅಲ್ವಲ್ಲ ಸರ್, ವಿರೋಧ ಬರೋದು ಸ್ವಾಭಾವಿಕ’ ಹೆದರುತ್ತಲೇ ಹೇಳಿದ ವಿಜಿ.

‘ಇನ್ಮುಂದೆ ಅದು ಹೇಗೆ ಇಂತಹ ಪ್ರಶ್ನೆ ಕೇಳುತ್ತಾರೋ ನೋಡ್ತೇನೆ’.

‘ಅಂದ್ರೆ ಸರ್?’

‘ಆ ಫ್ರಾಂಚೈಸಿಯನ್ನೇ ನಾನು ಖರೀದಿಸ್ತೀನಿ, ಆಗ ಓನರ್ ಆಗಿ ಕಪ್ಗೆ ಮುತ್ತಿಡ್ತೀನಿ’.

‘ಆದರೂ, ಪ್ರೈವೆಟ್ ಫ್ರಾಂಚೈಸಿಗೆ ವಿಧಾನ
ಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಮಾಡಿದ್ದು ಎಷ್ಟು ಸರಿ ಅಂತ ಎಲ್ಲರೂ ಕೇಳ್ತಿದ್ದಾರೆ ಸರ್?’

‘ನನ್ನ ಕಿವಿಗೂ ಬಿದ್ದಿದೆ. ಆ ಮೆಟ್ಟಿಲುಗಳ ಸಮೇತ ವಿಧಾನಸೌಧವನ್ನೇ ಖರೀದಿ ಮಾಡಬೇಕು ಅಂತಿದ್ದೀನಿ’, ದೃಢವಾಗಿ ಹೇಳಿದರು ಸಾಹೇಬ್ರು.

‘ಮತ್ತೆ ಚಿನ್ನಸ್ವಾಮಿ ಸ್ಟೇಡಿಯಂ ಸರ್…?’

‘ಅದೂ ಕೊಡ್ತಾರಂತ ಕೇಳಿ ನೋಡಿ’.

‘ಸರ್, ಇಷ್ಟೆಲ್ಲ ಖರೀದಿ ಮಾಡಿದ ಮೇಲೆ
ಇ.ಡಿ.ಯವರು ದಾಳಿ ಮಾಡಲ್ವ?’

‘ಇಂತಹ ಎಷ್ಟ್ ದಾಳಿ ನೋಡಿಲ್ಲ ನಾನು, ಅವರನ್ನೂ ಖರೀದಿ ಮಾಡಿದರಾಯ್ತು ಬಿಡ್ರೀ’ ಗಹಗಹಿಸಿ ನಕ್ಕರು ಸಾಹೇಬ್ರು.

ಅಷ್ಟರಲ್ಲಿ ಫೋನ್ ರಿಂಗ್ ಆಯ್ತು.

‘ಯಾರದು ರೀ ಫೋನ್’.

‘ಸರ್, ಹೈಕಮಾಂಡ್ದು?’, ‘ಏನಂತೆ?’

‘ನಿಮ್ ಪೋಸ್ಟ್ ಅನ್ನೇ ಯಾರೋ ಖರೀದಿ ಮಾಡಿದ್ರಂತೆ’ ಎಂದು ವಿಜಿ ಹೇಳುತ್ತಿದ್ದಂತೆ, ಸಾಹೇಬ್ರಿಗೆ ಸಿಟ್ಟು ನೆತ್ತಿಗೇರಿತು. ‘ಆ ಹೈಕಮಾಂಡ್ ಅನ್ನೇ ಪರ್ಚೇಸ್ ಮಾಡೇ ಬಿಡೋಣ’ ಎಂದು ಎದ್ದು ನಿಂತರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.