ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ನೀರು ಮತ್ತು ನಾರಿ...

Published 8 ಮಾರ್ಚ್ 2024, 0:07 IST
Last Updated 8 ಮಾರ್ಚ್ 2024, 0:07 IST
ಅಕ್ಷರ ಗಾತ್ರ

‘ಹಲೋ... ಹ್ಯಾಪಿ ವುಮೆನ್ಸ್ ಡೇ ಕಣೆ ಪಮ್ಮಿ, ಏನ್ಮಾಡ್ತಿದೀಯ?’

‘ಥ್ಯಾಂಕ್ಸ್ ಕಣೆ ಸುಮಿ, ಸೇಮ್ ಟು ಯೂ... ಆಮೇಲೆ ನಿಮ್ಮನೆ ಕಡೆ ನೀರು ಬಿಟ್ಟಿದ್ರಾ?’

‘ಅಯ್ಯೋ ಇಲ್ಲ ಕಣೆ, ವಾರ ಆತು ತೆಲಿಸ್ನಾನ ಮಾಡಿ, ಬೋರ್ವೆಲ್ ನೀರು ಸರಿಹೋಗಲ್ಲ. ಪೇಪರ್ ನೋಡಿದ್ಯಾ? ಸೀಎಂ ಮನೀಗೇ ನೀರಿಲ್ಲಂತೆ, ಟ್ಯಾಂಕರ್ ಹಾಕುಸ್ತದಾರಂತೆ...’

‘ಹೌದಂತೆ, ಈಗ್ಲೇ ಹಿಂಗಾದ್ರೆ ಮೇನಲ್ಲಿ ಇನ್ನೆಂಗೆ ಅಂತ...’

‘ಎಲೆಕ್ಷನ್ ಟೈಮಲ್ವಾ, ಏನಾದ್ರು ಮಾಡ್ತಾರೆ ಬಿಡು, ಆಮೇಲೆ ಮೊನ್ನೆ ರಾತ್ರಿ ಎಷ್ಟು ಒದ್ದಾಡಿಬಿಟ್ಟೆ ಗೊತ್ತಾ?’

‘ಯಾಕೆ ಏನಾತು? ಹೊಟ್ಟೇಲೇನಾದ್ರು ಗಡ್‌ಬಡ್?’

‘ಅಯ್ಯೋ, ಅದಲ್ಲ ಮಾರಾಯ್ತಿ, ಎಷ್ಟ್ ಸಲ ಟ್ರೈ ಮಾಡಿದೆ ಗೊತ್ತಾ? ಸರಿಹೋಗ್ಲೇ ಇಲ್ಲ...’

‘ಏನು ಕುಕ್ಕರಾ? ಅಥ್ವ ನಿನ್ ಸ್ಕೂಟರಾ?’

‘ಅಲ್ವೆ, ನನ್ ಫೇಸ್ ಬುಕ್ಕು. ಒಂದು ರೀಲ್ಸ್ ಮಾಡಿ ಹಾಕಿದ್ದೆ. ಎಷ್ಟು ಲೈಕ್ ಬಂದಿದಾವೆ ನೋಡಾಣ ಅಂದ್ರೆ ಅದು ಆನ್ ಆಗ್ಲೇ ಇಲ್ಲ...’

‘ನಿನ್ತೆಲಿ, ಅವತ್ತು ಎಲ್ಲರ ಮೊಬೈಲ್‌ನಲ್ಲೂ ಹಂಗೇ ಆಗಿತ್ತು. ಆಮೇಲೆ ಸರಿಹೋಯ್ತಲ್ಲ...’

‘ಹುಂ... ಸರಿಹೋತು, ಅದಿರ್ಲಿ, ಐನೂರು ಕೋಟೀದು ನೆಕ್ಲೇಸ್ ನೋಡಿದ್ಯಾ?’

‘ಏನು? ಐನೂರು ಕೋಟಿ ನೆಕ್ಲೇಸಾ? ಯಪ್ಪಾ... ಎಲ್ಲಿ?’

‘ನಿನ್ತೆಲಿ, ನೀತು ಅಂಬಾನಿ ಮೇಡಮ್ಮು ಅವರ ಮಗನ ಮದುವೇಲಿ ಹಾಕಿದ್ದ ನೆಕ್ಲೇಸು ಐನೂರು ಕೋಟಿದಂತೆ. ಪೇಪರ್‌ನಲ್ಲಿ ಬಂದಿತ್ತು’.

‘ಹೌದಾ? ನೆಕ್ಲೇಸ್ ಫೋಟೊ ಹಾಕಿದ್ರಾ? ನೋಡಾದ್ರು ಖುಷಿಪಡಬೋದಿತ್ತು...’

‘ಹಾಕಿದ್ರು ಕಣೆ, ಸಖತ್ತಾಗಿದೆ, ಫುಲ್ ಡೈಮಂಡ್‌ದು ಅನ್ಸುತ್ತೆ...’

‘ನಿನ್ ಗಂಡಂಗೂ ಅಂಥದೊಂದು ಕೊಡ್ಸಿ ಅಂತ ಕೇಳ್ಬೇಕಿತ್ತು?’

‘ಹುಂ ಕೊಡಿಸ್ತಾರೆ, ಐನೂರು ಕೋಟಿಗೆ ಎಷ್ಟು ಸೊನ್ನೆ ಗೊತ್ತಾ ಅಂತ ಕೇಳಿದ್ರು...’

‘ಸರಿ ಬಿಡು, ಇಷ್ಟೇ ನಮ್ ಹಣೆಬರ. ಆಮೇಲೆ ನೀರು ಬಿಟ್ರೆ ಹೇಳು, ಹ್ಯಾಪಿ ವುಮೆನ್ಸ್ ಡೇ ಒನ್ಸ್ ಅಗೇನ್... ಬೈ...’ ‘ಬೈ ಬೈ ಕಣೆ...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT