ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಗುರುವಾರ, 22–1–1970

Last Updated 21 ಜನವರಿ 2020, 20:00 IST
ಅಕ್ಷರ ಗಾತ್ರ

ಬಂಗಾಳ ವಿಧಾನಸಭೆ ಕಟ್ಟಡದಲ್ಲಿ ಅಜಯ್‌ಗೆ ಘೇರಾವೊ, ಹಲ್ಲೆ ಯತ್ನ
ಕಲ್ಕತ್ತ, ಜ. 21– ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಬೆಂಬಲಿಗರೆಂದು ಹೇಳಲಾದ ಕೆಲವು ಮಂದಿ ಮಹಿಳೆಯರೂ ಸೇರಿದ್ದ ವಿದ್ಯಾರ್ಥಿಗಳ ಗುಂಪೊಂದು ಇಂದು ಪಶ್ಚಿಮ ಬಂಗಾಳ ವಿಧಾನಸಭೆಯ ಕಟ್ಟಡದಲ್ಲಿ ಮುಖ್ಯಮಂತ್ರಿ ಶ್ರೀ ಅಜಯ್ ಮುಖರ್ಜಿ ಅವರ ಮೇಲೆ ಹಲ್ಲೆ ನಡೆಸಿ ತೀವ್ರ ಸ್ಫೋಟಕ ಪರಿಸ್ಥಿತಿ ಉಂಟು ಮಾಡಿತು.

ವಿಧಾನಸಭೆಯ ಬಜೆಟ್ ಅಧಿವೇಶನದ ಪ್ರಾರಂಭದ ದಿನವಾದ ಇಂದು ರಾಜ್ಯಪಾಲ ಶ್ರೀ ಧಾವನ್ ಅವರು ಉದ್ಘಾಟನಾ ಭಾಷಣ ಮಾಡಿ ತೆರಳಿದ ಕೂಡಲೇ ಈ ಪ್ರಕರಣ ನಡೆಯಿತು.

ವಂದನಾ ನಿರ್ಣಯದ ಮೇಲಿನ ಚರ್ಚೆಗಾಗಿ ಪುನಃ ಸಮಾವೇಶಗೊಳ್ಳುತ್ತಿದ್ದ ಸಭೆಗೆ ಹೋಗಲು ಮುಖ್ಯಮಂತ್ರಿ ಅವರು ತಮ್ಮ ಕೊಠಡಿಯಿಂದ ಹೊರಕ್ಕೆ ಬರುತ್ತಿದ್ದರು.

ತಾರಕೇಶ್ವರಿ ಸಭೆಯಲ್ಲಿ ಕೂಗಾಟ, ಕಲ್ಲೆಸೆತ
ಮೈಸೂರು, ಜ. 21– ಸಂಸ್ಥಾ ಕಾಂಗ್ರೆಸ್ ನಾಯಕಿ ಶ್ರೀಮತಿ ತಾರಕೇಶ್ವರಿ ಸಿನ್ಹ ಅವರ ಭಾಷಣವನ್ನು ನಿಲ್ಲಿಸಲು ಭಾರಿ ಗುಂಪೊಂದು ಸುಮಾರು ಅರ್ಧ ಗಂಟೆ ಕಾಲ ನಡೆಸಿದ ಕಲ್ಲುಗಳ ತೂರಾಟ ಹಾಗೂ ಗಲಾಟೆ ಇಂದು ಇಲ್ಲಿ ವಿಫಲಗೊಂಡಿತು.

ರಂಗಾಚಾರ್ಲು ಪುರಭವನದ ಮೈದಾನದಲ್ಲಿ ಶ್ರೀಮತಿ ಸಿನ್ಹ ಅವರ ಭಾವಪೂರಿತ ಭಾಷಣವನ್ನು ಸುಮಾರು ಹತ್ತು ಹದಿನೈದು ನಿಮಿಷಗಳ ಕಾಲ ಸಭೆ ನಿಶ್ಶಬ್ದವಾಗಿ ಆಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT