ಗುರುವಾರ 15–8–1968

7

ಗುರುವಾರ 15–8–1968

Published:
Updated:
Deccan Herald

ವಿಚ್ಛಿದ್ರಕಾರಕ ಪ್ರವೃತ್ತಿ ದಮನಕ್ಕೆ ರಾಷ್ಟ್ರಪತಿ ಕರೆ

ನವದೆಹಲಿ, ಆ. 14– ಎಲ್ಲ ಪ್ರತ್ಯೇಕತಾ ಮನೋಭಾವವನ್ನೂ ಹತ್ತಿಕ್ಕಿ, ಅನನ್ಯತೆ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳಲು ರಾಷ್ಟ್ರಕ್ಕೆ ನೆರವಾಗಬೇಕೆಂದು ರಾಷ್ಟ್ರಪತಿ ಡಾ. ಜಾಕಿರ್‌ ಹುಸೇನ್‌ ಇಂದು ಜನತೆಗೆ ಕರೆಯಿತ್ತರು.

‌‘ತಾರೀಕ್‌’

ಬೆಂಗಳೂರು, ಆ. 14 – ತಾರೀಕುಗಳಿರುವ ಕೈಗಡಿಯಾರ ‘ತಾರೀಕ್‌’ ಅನ್ನು ಮೊದಲಬಾರಿಗೆ, ಸ್ವಾತಂತ್ರ್ಯದಿನದಂದು ಎಚ್‌.ಎಂ.ಟಿ. ಛೇರ್‌ಮನ್‌ ಹಾಗೂ ಮ್ಯಾನೇಜಿಂಗ್‌ ಡೈರೆಕ್ಟರ್‌ ಡಾ. ಎಸ್‌.ಎಂ. ಪಾಟೀಲ್‌ ಅವರು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

ಗಡಿಯಲ್ಲಿ ಬೆದರಿಕೆ: ರಕ್ಷಣಾ ಸಿದ್ಧತೆ ನಿಲ್ಲದು– ಸ್ವರ್ಣಸಿಂಗ್‌

ನವದೆಹಲಿ, ಆ. 14– ಚೀನ ಮತ್ತು ಪಾಕಿಸ್ತಾನಗಳಿಂದ ಭಾರತಕ್ಕೆ ಬೆದರಿಕೆಗಳು ನಿಂತಿಲ್ಲ. ಭಾರತ ತನ್ನ ರಕ್ಷಣಾ ಸಿದ್ಧತೆಗಳನ್ನು ನಿಲ್ಲಿಸದು ಎಂದು ರಕ್ಷಣಾ ಸಚಿವ ಸ್ವರ್ಣಸಿಂಗ್‌ ಇಂದು ಇಲ್ಲಿ ಹೇಳಿದರು.

ರಾಜ್ಯದ ನಾಲ್ಕನೆ ಯೋಜನೆ ಗಾತ್ರ 440 ಕೋಟಿ ರೂ.

ಬೆಂಗಳೂರು, ಆ. 14– ರಾಜ್ಯದ ನಾಲ್ಕನೆ ಕರಡು ಪಂಚವಾರ್ಷಿಕ ಯೋಜನೆಯ ಗಾತ್ರ ಸದ್ಯಕ್ಕೆ 440 ಕೋಟಿ ರೂಪಾಯಿಗಳು.

ಕೇಂದ್ರದಿಂದ 222 ಕೋಟಿ ರೂಪಾಯಿಗಳ ನೆರವನ್ನು ನಿರೀಕ್ಷಿಸಿ ಸಿದ್ಧಮಾಡಿರುವ ಈ ಯೋಜನೆಯಲ್ಲಿ ಕ್ರಮವಾಗಿ ನೀರಾವರಿ, ವ್ಯವಸಾಯ ಉತ್ಪಾದನೆ, ಕೈಗಾರಿಕಾ ಅಭಿವೃದ್ಧಿ ಮತ್ತು ವಿದ್ಯುಚ್ಛಕ್ತಿಗೆ ಆದ್ಯತೆ ದೊರೆಯುವುದು.

ಕೋಮು ಬರಹ ನಿಷೇಧಕ್ಕೆ ಕೇಂದ್ರದ ಪತ್ರಿಕಾ ಮಸೂದೆ

ನವದೆಹಲಿ, ಆ 14– ವೃತ್ತಪತ್ರಿಕೆಗಳಲ್ಲಿ ಕೋಮುವಾದಿ ಬರಹಗಳ ಸಂಬಂಧದಲ್ಲಿ ಪೂರ್ವಭಾವಿ ಸೆನ್ಸಾರ್‌ಷಿಪ್‌ಗೆ ಅವಕಾಶವಿರುವ ಪತ್ರಿಕಾ ಮಸೂದೆಯೊಂದನ್ನು ತರಲು ಕೇಂದ್ರ ಸರ್ಕಾರ ಯೋಚಿಸುತ್ತಿದೆ ಎಂದು ವಾರ್ತಾ ಸಚಿವ
ಕೆ.ಕೆ. ಷಹಾ ಇಂದು ಲೋಕಸಭೆಯಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !