ಸೋಮವಾರ, ಜುಲೈ 26, 2021
21 °C

50 ವರ್ಷಗಳ ಹಿಂದೆ | ಮಂಗಳವಾರ, 2–6–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೆರುವಿನಲ್ಲಿ ಭೀಕರ ಭೂಕಂಪ ಐದು ಸಾವಿರಕ್ಕೂ ಹೆಚ್ಚು ಸಾವು
ಲಿಮ (ಪೆರು), ಜೂನ್‌ 1–
ಉತ್ತರ ಪೆರುವಿನಲ್ಲಿ ಭಾನುವಾರ ಸಂಭವಿಸಿದ ಉಗ್ರ ಭೂಕಂಪದಲ್ಲಿ ಹುರಜ್‌ ನಗರ ಒಂದರಲ್ಲೇ ಐದು ಸಾವಿರ ಜನರು ಸತ್ತಿದ್ದಾರೆಂದು ವರದಿಯಾಗಿದೆ. ಹುರಜ್‌ ನಗರ ಇಲ್ಲಿಂದ 250 ಮೈಲಿ ದೂರದಲ್ಲಿದೆ.

ಈ ಪ್ರದೇಶಕ್ಕೆ ಸರ್ಕಾರವು ಆಹಾರ, ವಸ್ತ್ರ, ವೈದ್ಯಕೀಯ ನೆರವನ್ನು ಒದಗಿಸುತ್ತಿದೆಯಾದರೂ ಅನೇಕ ನಗರಗಳು, ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ.

ನಗರ ಆಸ್ತಿ 5 ಲಕ್ಷ ರೂ. ಮಿತಿಗೆ ಕರಡು ಶಾಸನ
ನವದೆಹಲಿ, ಜೂನ್‌ 1–
ನಗರ ಆಸ್ತಿಪಾಸ್ತಿ ಕುರಿತು ಕರಡು ಶಾಸನಕ್ಕೆ ಆಧಾರವಾಗುವ ತತ್ವಗಳಿಗೆ ಕೇಂದ್ರ ಸಚಿವ ಸಂಪುಟ ಇಂದು ಒಪ್ಪಿಗೆ ನೀಡಿತು.

ಈ ಕರಡು ಶಾಸನವನ್ನು ರಾಜ್ಯಗಳ ಒಪ್ಪಿಗೆಗಾಗಿ ಕಳುಹಿಸಿಕೊಡಲಾಗುವುದು. ಐದು ಲಕ್ಷಕ್ಕೆ ಮೀರಿದ ಆಸ್ತಿಪಾಸ್ತಿಗಳನ್ನು ಕಡ್ಡಾಯವಾಗಿ ರಾಜ್ಯ ಸರ್ಕಾರಗಳು ವಹಿಸಿಕೊಳ್ಳುವುವು ಇಲ್ಲವೇ ಭಾರಿ ತೆರಿಗೆಗೆ ತುತ್ತಾಗುವುವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.