ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಮ್ಲಾ: ಬಸ್ ಅಪಘಾತದಲ್ಲಿ 7 ಸಾವು, 26 ಮಂದಿಗೆ ಗಾಯ

Last Updated 1 ಜೂನ್ 2018, 6:57 IST
ಅಕ್ಷರ ಗಾತ್ರ

ಶಿಮ್ಲಾ: ಟಿಕ್ಕಾರ್ ಎಂಬಲ್ಲಿಂದ ಶಿಮ್ಲಾಗೆ ಬರುತ್ತಿದ್ದ ಬಸ್ ಚೈಲಾ ಬಳಿ ಕಣಿವೆಗೆ ಉರುಳಿ 7 ಮಂದಿ ಸಾವಿಗೀಡಾಗಿದ್ದು, 26 ಮಂದಿಗೆ ಗಾಯಗಳಾಗಿವೆ.
ಬಸ್‍ನಲ್ಲಿ 33 ಪ್ರಯಾಣಿಕರಿದ್ದರು. ಅಪಘಾತದ ವೇಳೆ ಇಬ್ಬರು ಮಹಿಳೆಯರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಶುಕ್ರವಾರ ಬೆಳಗ್ಗೆ ಅಪಘಾತ ಸಂಭವಿಸಿದ್ದು ಇದನ್ನು ನೋಡಿದ ಕಾರು ಚಾಲಕರೊಬ್ಬರು ತೋಘ್ ಪೊಲೀಸ್ ಠಾಣೆಗೆ ವಿಷಯ ತಲುಪಿಸಿದ್ದಾರೆ. ಶಿಮ್ಲಾದಿಂದ 42 ಕಿಮೀ ದೂರದಲ್ಲಿರುವ ತೋಘ್-ಹಟ್ಕೊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.

ಗಾಯಾಳುಗಳನ್ನು ತೋಘ್ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದು, ಗಂಭೀರ ಗಾಯಗೊಂಡವರನ್ನು ಇಂದಿರಾ ಗಾಂಧಿ ಮೆಡಿಕಲ್ ಕಾಲೇಜ್ ಆ್ಯಂಡ್ ಹಾಸ್ಪಿಟಲ್‍ಗೆ ದಾಖಲಿಸಲಾಗಿದೆ. ಸಾವಿಗೀಡಾದವರ ಗುರುತು ಪತ್ತೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT