ಇ.ಎಂ.ಎಸ್. ಸಂಪುಟದ ವಜಾಕ್ಕೆ ಒತ್ತಾಯ

7
ವಾರ

ಇ.ಎಂ.ಎಸ್. ಸಂಪುಟದ ವಜಾಕ್ಕೆ ಒತ್ತಾಯ

Published:
Updated:
Deccan Herald

ಇ.ಎಂ.ಎಸ್. ಸಂಪುಟದ ವಜಾಕ್ಕೆ ಒತ್ತಾಯ: ಕೇಂದ್ರ ಗೃಹ ಮಂತ್ರಿಗೆ ಕೇರಳ ಕಾಂಗ್ರೆಸ್ ನಾಯಕರ ಮನವಿ

ನವದೆಹಲಿ, ಅ. 9– ಕೇರಳದ ನಂಬೂದಿರಿಪಾಡ್ ಸಂಪುಟವು ಕೇಂದ್ರ ಸರ್ಕಾರದ ಆದೇಶಗಳನ್ನು ಉಲ್ಲಂಘಿಸುತ್ತಿರುವುದರಿಂದ ಕೇರಳದ ಆಡಳಿತವನ್ನು ರಾಜ್ಯಾಂಗದ 356ನೇ ವಿಧಿಯ ಪ್ರಕಾರ ಕೇಂದ್ರ ವಹಿಸಿಕೊಳ್ಳಬೇಕೆಂದು ಕೇರಳ ಪ್ರದೇಶ ಕಾಂಗ್ರೆಸ್ಸಿನ ಹಿರಿಯ ನಾಯಕರು ಕೇಂದ್ರವನ್ನು ಒತ್ತಾಯಪಡಿಸುತ್ತಿದ್ದಾರೆ.

ಕೇರಳದ ವಾಮಪಕ್ಷೀಯ ಸಮ್ಮಿಶ್ರ ಸರ್ಕಾರವನ್ನು ವಜಾ ಮಾಡಲು ಈಗ ಅನುಕೂಲಕರ ಪರಿಸ್ಥಿತಿ ಇದೆ ಎಂದು ಕೇರಳ ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ.

‘ಚುಂಬನ’

ಮುಂಬೈ, ಆ. 9– ‘ಚುಂಬನ್‌’, ಭಾರತ ಚಲಚ್ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಐ.ಎಸ್. ಜೋಹರ್ ನಿರ್ಮಿಸುತ್ತಿರುವ ಸಾಕ್ಷ್ಯ ಚಿತ್ರ. ಕಾಮಸೂತ್ರದಿಂದ ಉದ್ಧೃತ ವಾಕ್ಯಗಳು ಮತ್ತು ಚಿತ್ರಗಳಿಂದ ಹಿಡಿದು ಚುಂಬನದ ಮೂಲ, ಪ್ರಪಂಚದ ವಿವಿಧ ಜನಾಂಗಗಳಲ್ಲಿ
ರುವ ಚುಂಬನ ಪದ್ಧತಿ ಮತ್ತು ಸಾಮಾಜಿಕವಾಗಿ ಅದರ ಸಾಧಕ ಬಾಧಕಗಳನ್ನು ಚಿತ್ರದಲ್ಲಿ ತೋರಲಾಗುವುದು ಎಂದವರು ಹೇಳಿದ್ದಾರೆ.

ಮಧುಗಿರಿ ಕ್ಷೇತ್ರ: ಲೋಕಸಭೆಗೆ ಶ್ರೀಮತಿ ಸುಧಾರೆಡ್ಡಿ ಕಾಂಗ್ರೆಸ್ ಸ್ಪರ್ಧಿ

ಬೆಂಗಳೂರು, ಅ. 9– ಮಧುಗಿರಿ ಲೋಕಸಭಾ ಕ್ಷೇತ್ರದಲ್ಲಿ ನವೆಂಬರ್ ತಿಂಗಳಲ್ಲಿ ನಡೆಯುವ ಮರು ಚುನಾವಣೆಗೆ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಸುಧಾ ವೆಂಕಟಶಿವರೆಡ್ಡಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕೇಂದ್ರ ಪಾರ್ಲಿಮೆಂಟರಿ ಬೋರ್ಡ್ ಆರಿಸಿದೆ.

ಸಾರಿಗೆ ಸಂಸ್ಥೆಗೆ ಹೊಸ ವರಮಾನ ಮೂಲ– ಜಾಹಿರಾತು

ಬೆಂಗಳೂರು, ಅ. 9– ಬಸ್‌ಗಳಲ್ಲಿ ಜಾಹಿರಾತು ಪ್ರದರ್ಶನಗಳಿಗೆ ಅವಕಾಶ ನೀಡಿರುವುದರಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ವಾರ್ಷಿಕ ಒಂದು ಲಕ್ಷ ರೂ. ಹೊಸ ವರಮಾನ ಮೂಲವೊಂದು ದೊರೆತಿದೆ.

ಸಮಾಜ ಕಲ್ಯಾಣ ಕಾರ್ಯದಲ್ಲಿ ಮಕ್ಕಳ ಅಗತ್ಯ ಪೂರೈಕೆಗೆ ಆದ್ಯತೆ ಕೊಡಲು ಕರೆ

ನವದೆಹಲಿ, ಅ. 9– ರಾಜ್ಯದ ಯೋಜನೆಗಳಲ್ಲಿ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಸಾಕಷ್ಟು ನಿಧಿ ಮೀಸಲಿಡಬೇಕೆಂದು ಕೇಂದ್ರ ಸಮಾಜ ಕಲ್ಯಾಣ ಶಾಖೆ ಸಚಿವ ಪಿ. ಗೋವಿಂದ ಮೆನನ್ ಅವರು ಇಂದು ಇಲ್ಲಿ ರಾಜ್ಯ ಸಮಾಜ ಕಲ್ಯಾಣ ಸಚಿವರನ್ನು ಒತ್ತಾಯಪಡಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !