ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆಯಲ್ಲಿ ಕನ್ನಡ ಮೊಳಗಿ 50 ವರ್ಷಗಳಾದವು | ಬುಧವಾರ, 19–11–1969

Last Updated 19 ನವೆಂಬರ್ 2019, 4:57 IST
ಅಕ್ಷರ ಗಾತ್ರ

ಜೆ.ಎಚ್. ಪಟೇಲರ ‘ನನಸಾದ ಕನಸು’:ಲೋಕಸಭೆಯಲ್ಲಿ ಕನ್ನಡ

ನವದೆಹಲಿ, ನ. 18– ಲೋಕಸಭೆಯಲ್ಲಿ ಕನ್ನಡದಲ್ಲಿ ಮಾಡುವ ಭಾಷಣಗಳನ್ನು ಏಕಕಾಲದಲ್ಲಿ ಹಿಂದಿ ಮತ್ತು ಇಂಗ್ಲಿಷಿಗೆ ಅನುವಾದ ಮಾಡುವ ಸೌಲಭ್ಯವನ್ನು ಈಗ ಕಲ್ಪಿಸಲಾಗಿದೆ.

ಪ್ರಸಕ್ತ ಅಧಿವೇಶನ ಆರಂಭವಾದಾಗಿನಿಂದಲೂ ಕನ್ನಡದಲ್ಲಿ ಭಾಷಣ ಮಾಡಲು ಒತ್ತಾಯಿಸುತ್ತಿದ್ದ ಮೈಸೂರಿನ ಎಸ್ಸೆಸ್ಪಿ ಸದಸ್ಯ ಶ್ರೀ ಜೆ.ಎಚ್. ಪಟೇಲ್ ಅವರೇ ಈ ಕ್ರಮ ಜಾರಿಗೆ ಬರಲು ಕಾರಣಕರ್ತರು.

ಇಂಥ ಈ ವ್ಯವಸ್ಥೆ ಜಾರಿಗೆ ತಂದ ಕೂಡಲೇ ದಕ್ಷಿಣ ರಾಜ್ಯಗಳ ಸದಸ್ಯರು ಹರ್ಷೋದ್ಗಾರಗಳಿಂದ ಸ್ವಾಗತಿಸಿದರು.

ಜಗಜೀವನರಾಂಗೆ ದಂಡ ವಿಧಿಸದಿದ್ದಕ್ಕೆ ಛೀಮಾರಿ, ಗೊಂದಲ

ನವದೆಹಲಿ, ನ. 18– ಹತ್ತು ವರ್ಷಗಳಿಂದ ವರಮಾನ ತೆರಿಗೆ ಪಾವತಿ ಮಾಡದಿದ್ದುದಕ್ಕಾಗಿ ಆಹಾರ ಸಚಿವ ಜಗಜೀವನರಾಂ ಅವರ ಮೇಲೆ ವರಮಾನ ತೆರಿಗೆ ಕಮೀಷನರ್‌ ದಂಡ ವಿಧಿಸಿಲ್ಲವೆಂದು ಇಂದು ರಾಜ್ಯಸಭೆಯಲ್ಲಿ ಸಚಿವ ಸೇಠಿ ತಿಳಿಸಿದಾಗ ವಿರೋಧ ಪಕ್ಷದ ಸದಸ್ಯರು ‘ನಾಚಿಕೆಗೇಡು, ನಾಚಿಕೆಗೇಡು’ ಎಂದು ಕೂಗಿದರಲ್ಲದೆ ಭಾರಿ ಗೊಂದಲವುಂಟಾಯಿತು.

ಈ ಬಗೆಯ ಪಕ್ಷಪಾತದ ವಿರುದ್ಧ ವಿವಿಧ ಪಕ್ಷಗಳು ತೀವ್ರವಾಗಿ ಪ್ರತಿಭಟಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT