ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿರುವ 17 ಪಾಠಗಳನ್ನು ನೆನಪಿಸಿಕೊಳ್ಳಿ, ಈ ವರ್ಷವೂ ಇನ್ನೊಂದಿಷ್ಟು ಕಲಿತುಕೊಳ್ಳಿ

Last Updated 1 ಜನವರಿ 2019, 10:18 IST
ಅಕ್ಷರ ಗಾತ್ರ

1. ನವಿಲುಗಳು ಸಂಭೋಗ ಮಾಡುವುದಿಲ್ಲ. ಗಂಡು ತನ್ನ ಕಣ್ಣೀರನ್ನು ಹೆಣ್ಣಿಗೆ ಕೊಟ್ಟು ಸಂತಾನೋತ್ಪತ್ತಿ ಮಾಡುತ್ತವೆ.

2. ಈ ವರ್ಷದ ನನ್ನ ಸೂಚ್ಯಂಕ ಹೆಚ್ಚು ಎಂದು ನೋಡಿಕೊಳ್ಳಲು ಕಳೆದ ವರ್ಷದ ಸೂಚ್ಯಂಕವನ್ನು ಕಡಿಮೆ ಮಾಡಿಕೊಳ್ಳಬೇಕು.

3. ಸಿವಿಲ್ ಇಂಜಿನಿಯರ್ರುಗಳು ಮಾತ್ರ ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನು ಬರೆಯಬೇಕು. ಅವರಿಗಷ್ಟೇ ಸಿವಿಲ್ ಜ್ಞಾನ ಇರುತ್ತದೆ.

4. ಮಹಾಭಾರತ ಕಾಲದಲ್ಲೇ ನಮ್ಮ ದೇಶದಲ್ಲಿ ಇಂಟರ್ನೆಟ್, ಸ್ಯಾಟಲೈಟ್ ಇದ್ದವು. ಪರರ ದಾಳಿಯಿಂದ ಅವು ಸತ್ತು, ಈಗ ನಮ್ಮ ದೇಶದಲ್ಲಿನ ಪೂರಕ ವಾತಾವರಣದಿಂದಾಗಿ ಮರುಜನ್ಮ ಪಡೆದಿವೆ.

5. ದೇಶಪ್ರೇಮವೆಂಬುದು ಧರ್ಮ ಮತ್ತು ಪ್ರಭುತ್ವ ಪ್ರೇಮವೇ ಹೊರತು ಬೇರೇನಲ್ಲ.

6. ಹನುಮಂತನು ಉತ್ತಮನಲ್ಲ. ಅವನು ದಲಿತನೋ, ಮುಸ್ಲಿಮನೋ, ಸಿಖ್ಖನೋ ಆಗಿದ್ದನು.

7. ಒಬ್ಬ ಗೂಢಚಾರಿಯನ್ನು ಮಟ್ಟಹಾಕಲು ಮತ್ತೊಬ್ಬ ಗೂಢಚಾರಿಯನ್ನು ಛೂ ಬಿಡಬೇಕು.

8. ನ್ಯಾಯಾಂಗವು ಜನಾದೇಶದ ಅನುಸಾರ ತೀರ್ಪುಗಳನ್ನು ನೀಡಬೇಕು.

9. ನಟನಟಿಯರು, ನಿರ್ದೇಶಕರು ಸಾಮಾಜಿಕ, ರಾಜಕೀಯ ಹೇಳಿಕೆಗಳನ್ನು ನೀಡಲು ಅರ್ಹರಲ್ಲ. ಅವರವರ ಕೆಲಸವನ್ನು ಅವರವರು ಮುಚ್ಚಿಕೊಂಡು ಮಾಡಬೇಕು. ಹಾಗೆಯೇ ಅಪ್ಪಿತಪ್ಪಿಯೂ ಮೀಟೂ ಎನ್ನಬಾರದು.

10. ನನ್ನ ಮನೆಯ ಹಳೆಯ ನೋಟುಗಳನ್ನು ಸುಟ್ಟುಹಾಕಿದ್ದರಿಂದ ನನಗೆ ಅನುಕೂಲವೇ ಆಗಿದೆ.

11. ಕೇಂದ್ರ ಬ್ಯಾಂಕು ಸರ್ಕಾರಕ್ಕೆಇನ್ನೂ ದುಡ್ಡು ಕೊಟ್ಟಿಲ್ಲವಾದ್ದರಿಂದ ನನ್ನ ಖಾತೆಗೆ ಬೀಳಬೇಕಾದ ಹಣ ವಿಳಂಬವಾಗುತ್ತಿದೆ.

12. ನೌಟಂಕಿಗಳು, ಉದ್ಯಮಿಗಳಂತೆ ರೈತರೂ ಕಾರಿನಲ್ಲಿ, ವಿಮಾನದಲ್ಲಿ ಬಂದರೆ ಮಾತ್ರ ರಾಜನನ್ನು ಭೇಟಿಯಾಗಲು ಸಾಧ್ಯ.

13. ಹತ್ತಿಪ್ಪತ್ತು ಸಾವಿರ ಸಾಲ ಮಾಡಬಾರದು. ಸಾಲ ಕಡೇಪಕ್ಷ ಸಾವಿರ ಕೋಟಿಗೂ ಅಧಿಕವಾಗಿರಬೇಕು.

14. ಆಧಾರ್ ಬೇಡವೆಂದು ಕೋರ್ಟು ಹೇಳಿದರೂ ನಾನು ನಿಯತ್ತಾಗಿ ನನ್ನ ಬ್ಯಾಂಕ್ ಅಕೌಂಟಿಗೆ, ಇತರೆಡೆ ಅದನ್ನು ಲಗತ್ತಿಸಬೇಕು. ಆದ್ದರಿಂದ ಕೋರ್ಟಿನ ತೀರ್ಮಾನವೇ ಅಂತಿಮವಲ್ಲ.

15. ನನ್ನ ಮನೆಯ ಬೇಳೆಬೇಯದಿರಲು ನೆಹರುಕಾರಣ.

16. ನಾನು ಬಿಜೆಪಿಯನ್ನು ಒಪ್ಪದಿದ್ದರೆ, ನಾನು ಕಾಂಗಿ ಎಂದೇ ಲೋಕಾರ್ಥ. ಬೇರೇ ಆಗಲು ಸಾಧ್ಯವೇ ಇಲ್ಲ.

17. ಫೇಸ್‌ಬುಕ್‌ನಲ್ಲಿಐದು ವಾಕ್ಯಗಳಿಗಿಂತ ಹೆಚ್ಚುಬರೆಯಬಾರದು. ಹಾಗೆ ಬರೆದರೆ ಯಾರೂ ಓದದೆಲೈಕ್ ಒತ್ತುತ್ತಾರೆ, ಕಾಮೆಂಟೂ ಮಾಡುತ್ತಾರೆ.

ಇದಿಷ್ಟೇ ಅಲ್ಲ,ಇನ್ನೂ ಹಲವು ಪಾಠಗಳನ್ನು ಕಲಿತಿದ್ದೇನೆ. ಸದ್ಯನೆನಪಿರುವಷ್ಟನ್ನು ಮಾತ್ರ ಇಲ್ಲಿ ಹೇಳಲು ಸಾಧ್ಯವಾಗಿದೆ. ಕಳೆದ ವರ್ಷ ಕಲಿತವನ್ನು ಇಲ್ಲಿ ಹಾಕಿದರೆ ಪಟ್ಟಿ ಇನ್ನೂ ಉದ್ದವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT