ಜನಗಣತಿಯೊಂದಿಗೆ ಜಾತಿ ಜನಗಣತಿಯನ್ನೂ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದಾಗ, ‘ತೆಲಂಗಾಣದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಮಾಡಿರುವಂತಹ ಜಾತಿ ಜನಗಣತಿಯ ಮಾದರಿಯನ್ನು ಕೇಂದ್ರವೂ ಅನುಸರಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಗ್ರಹಿಸಿದ್ದರು. ಅವರು ಕರ್ನಾಟಕದ ಜಾತಿ ಜನಗಣತಿ ಮಾದರಿಯನ್ನೇಕೆ ಉಲ್ಲೇಖಿಸಲಿಲ್ಲ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಕರ್ನಾಟಕದ ಜಾತಿ ಜನಗಣತಿಯನ್ನು ಕಾಂಗ್ರೆಸ್ ಹೈಕಮಾಂಡ್ ತಿರಸ್ಕರಿಸಿದೆ. ಜಾತಿ ಜನಗಣತಿಯನ್ನು ಹೊಸದಾಗಿ ಮಾಡಲು ರಾಜ್ಯ ನಾಯಕತ್ವಕ್ಕೆ ನಿರ್ದೇಶಿಸಿದೆ. ಜಾತಿ ಜನಗಣತಿ ನಡೆದು ಹತ್ತು ವರ್ಷ ಆಗಿರುವುದರಿಂದ, ಹಿಂದುಳಿದ ವರ್ಗಗಳ ಆಯೋಗದ 1995ರ ಕಾಯ್ದೆಯ ಸೆಕ್ಷನ್ 11(2)ರ ಅನ್ವಯ ಇನ್ನೊಮ್ಮೆ ಗಣತಿ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ.

2013ರಲ್ಲಿ ಮೊದಲ ಸಲ ಮುಖ್ಯಮಂತ್ರಿಯಾದಾಗಲೇ ಜಾತಿ ಜನಗಣತಿ ನಡೆಸುವುದಾಗಿ ಹೇಳಿದ್ದರು. 2014ರ ಜನವರಿ 23ರಂದು ಜಾತಿ ಜನಗಣತಿಗೆ ಸರ್ಕಾರ ಆದೇಶಿಸಿ, ಬಜೆಟ್ನಲ್ಲಿ ಹಣ ತೆಗೆದಿರಿಸಿತು. ಆದರೆ, ವಾಸ್ತವದಲ್ಲಿ ಜಾತಿ ಜನಗಣತಿಯ ಸಮೀಕ್ಷೆ ನಡೆದದ್ದು 2015ರ ಏಪ್ರಿಲ್ 11ರಿಂದ ಮೇ 30ರವರೆಗೆ. ಸಮೀಕ್ಷೆ ಆರಂಭಿಸುವು ದಕ್ಕೇ ಕಾಂತರಾಜ ಆಯೋಗಕ್ಕೆ 15 ತಿಂಗಳು ಹಿಡಿಯಿತು. ಸಮೀಕ್ಷೆಯ ವರದಿ ಸಿದ್ಧಪಡಿಸಲು ಮೂರು ವರ್ಷಗಳಾದರೂ ಸಾಧ್ಯವಾಗಲಿಲ್ಲ. ಏಕೆ ಈ ವಿಳಂಬ?

ಎಲ್.ಜಿ. ಹಾವನೂರು ವರದಿ ಸಿದ್ಧಗೊಂಡಿದ್ದು ತಂತ್ರಜ್ಞಾನದ ನೆರವಿಲ್ಲದ ಕಾಲದಲ್ಲಿ. 1972ರ ಆಗಸ್ಟ್ 8ರಂದು ರಚನೆಗೊಂಡ ಹಾವನೂರು ಆಯೋಗವು 1975ರ ನವೆಂಬರ್ 19ರಂದು ವರದಿ ಸಲ್ಲಿಸಿತು. ಅದರಲ್ಲಿ, ಆಗ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರ ಮುತುವರ್ಜಿ, ಕಾರ್ಯಕ್ಷಮತೆ ಸ್ಪಷ್ಟವಾಗಿದೆ. 1980ರ ದಶಕದಲ್ಲಿ ಬಂದ ವೆಂಕಟಸ್ವಾಮಿ ಮತ್ತು ಚಿನ್ನಪ್ಪ ರೆಡ್ಡಿ ಆಯೋಗಗಳೂ ಮೂರು ವರ್ಷದೊಳಗೆ ವರದಿ ಸಲ್ಲಿಸಿವೆ.

ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಸದಾಶಿವ ಆಯೋಗದ ವರದಿಯನ್ನೂ ಮುಟ್ಟಲಿಲ್ಲ. ಜಾತಿ ಜನಗಣತಿಯನ್ನೂ ಪೂರೈಸಲಿಲ್ಲ. ಇದರಲ್ಲಿ ಸಾಮಾಜಿಕ ಬದ್ಧತೆಯ ಕೊರತೆ ಕಾಣುವುದಿಲ್ಲವೇ? 2023ರಲ್ಲಿ ಮತ್ತೆ ಅಧಿಕಾರಕ್ಕೆ ಬಂದಾಗಲಾದರೂ ಅವರು ಕಾಂತರಾಜ ಆಯೋಗದ ವರದಿಯನ್ನು ಸ್ವೀಕರಿಸಬಹುದಿತ್ತು. ಆದರೆ, ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ಮೊರೆ ಹೋಗಿ, ಅವರಿಗೆ ಒಂದು ವರ್ಷ ಅವಧಿ ವಿಸ್ತರಣೆ ಕೊಡಿಸಿದರು. ಕಾಂತರಾಜ ಆಯೋಗದ ವರದಿಯ ದತ್ತಾಂಶಗಳ ಅಧ್ಯಯನ ನಡೆಸಿ ಜಯಪ್ರಕಾಶ್ ಹೆಗ್ಡೆ 2024ರ ಫೆಬ್ರುವರಿಯಲ್ಲಿ ವರದಿ ಕೊಟ್ಟರು. ಸಿದ್ದರಾಮಯ್ಯನವರೇ ಹೇಳುವಂತೆ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದ ಪುಟ್ಟರಂಗ ಶೆಟ್ಟಿ ನೇತೃತ್ವದಲ್ಲಿ ಕಾಂತರಾಜ ಆಯೋಗವು 2018ರಲ್ಲೇ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ವರದಿ ಸಲ್ಲಿಸಲು ಪ್ರಯತ್ನಿಸಿದೆ. ಜಯಪ್ರಕಾಶ್ ಹೆಗ್ಡೆ ಅವರಿಗೆ ರಿಪೇರಿ ಕೆಲಸ ಕೊಟ್ಟಾಗ ಪೂರ್ತಿ ಕೆಲಸ ಮುಗಿಸಿದ್ದ ಕಾಂತರಾಜ ಅವರು ಸಣ್ಣ ತಕರಾರೂ ತೆಗೆಯಲಿಲ್ಲ, ಏಕೆ? ಜಯಪ್ರಕಾಶ್ ಹೆಗ್ಡೆ ಕೊಟ್ಟ ವರದಿ, 14 ತಿಂಗಳ ತರುವಾಯ ಸಚಿವ ಸಂಪುಟದ ಎದುರು ಬಂದರೂ ಏನೂ ಆಗಲಿಲ್ಲ. ವರದಿಯ ದತ್ತಾಂಶಗಳು ಸಂಪುಟದ ಮುಂದೆ ಬರುವಾಗಲೇ ತಾಂತ್ರಿಕವಾಗಿ ಹತ್ತು ವರ್ಷ ಮುಗಿದು ಹೋಗಿತ್ತು. ಆಡಳಿತಾತ್ಮಕವಾದ ಹೊಣೆಗೇಡಿತನಕ್ಕೆ ₹165.51 ಕೋಟಿ ಅಪವ್ಯಯವಾಗಿದೆ.

ಪ್ರಬಲ ಜಾತಿಗಳ ಅಪಸ್ವರ ಪಕ್ಕಕ್ಕಿಟ್ಟು ನೋಡಿದರೂ ಜಯಪ್ರಕಾಶ್ ಹೆಗ್ಡೆ ವರದಿಯಲ್ಲಿರುವ ಅಹಿಂದ ಸಮುದಾಯಗಳ ದತ್ತಾಂಶಗಳೂ ವಿಶ್ವಾಸಾರ್ಹತೆ ಹುಟ್ಟಿಸುವಂತಿಲ್ಲ. 2011ರ ಜನಗಣತಿಯಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯೆ 1.04 ಕೋಟಿಯಿತ್ತು. ಅದು, ಜಾತಿ ಜನಗಣತಿಯಲ್ಲಿ ಐದು ಲಕ್ಷದಷ್ಟು ಏರಿಕೆಯಾಗಿದೆ. ಅದೇ ಪರಿಶಿಷ್ಟ ಪಂಗಡಗಳಲ್ಲಿ ಏರಿಕೆಯಾಗಿರುವುದು 33 ಸಾವಿರ ಮಾತ್ರ. ಮುಸ್ಲಿಂ ಸಮುದಾಯದಲ್ಲಿ 99 ಜಾತಿಗಳಿವೆ ಎಂದು ಆಯೋಗ ಹೇಳಿದೆ. ಆದರೆ, ‘ಪ್ರವರ್ಗ 1’ ಮತ್ತು ‘2ಎ’ನಲ್ಲಿ ಬರುವ 19 ಮುಸ್ಲಿಂ ಜಾತಿಗಳ ಗಣತಿ ನಡೆದಿದೆ. ರಾಜ್ಯದಲ್ಲಿ ಮುಸ್ಲಿಂ ಸಮುದಾಯವು ಪ್ರವರ್ಗ ‘2ಬಿ’ ಪಟ್ಟಿಯಲ್ಲಿದ್ದು, ಅಲ್ಲಿರುವ 80 ಜಾತಿಗಳನ್ನೂ ಮುಸ್ಲಿಂ ಎಂದೇ ಗುರುತಿಸಲಾಗಿದೆ.

2001ರ ಜನಗಣತಿಯಲ್ಲಿ ರಾಜ್ಯದ ಮುಸ್ಲಿಂ ಸಮುದಾಯದ ಜನಸಂಖ್ಯೆ 64.63 ಲಕ್ಷ ಇದ್ದದ್ದು, 2011ರಲ್ಲಿ 78.93 ಲಕ್ಷಕ್ಕೆ ಏರಿಕೆಯಾಗಿತ್ತು. ಈಗದು 79.48 ಲಕ್ಷ, ಅಂದರೆ 55 ಸಾವಿರ ಮಾತ್ರ ಏರಿಕೆಯಾಗಿದೆ ಎಂದರೆ, ಗಣತಿಯ ವಿಶ್ವಾಸಾರ್ಹತೆ ಉಳಿಯುತ್ತದೆಯೇ? ಮುಸ್ಲಿಂ ಒಳಪಂಗಡ ಪಿಂಜಾರರ ಜನಸಂಖ್ಯೆ ಕನಿಷ್ಠ 20 ಲಕ್ಷ ಎನ್ನುತ್ತಾರೆ ಸಮಾಜದ ಅಧ್ಯಕ್ಷರಾದ ಜಲೀಲ್ ಸಾಬ್. ಆದರೆ, ಜಾತಿ ಜನಗಣತಿ ಪ್ರಕಾರ ಪಿಂಜಾರರ ಸಂಖ್ಯೆ 1.11 ಲಕ್ಷ! ‘ಪ್ರವರ್ಗ 1’ರಲ್ಲಿದ್ದ ಅತಿ ಹಿಂದುಳಿದ ಜಾತಿಗಳಿಗಿದ್ದ ಆರ್ಥಿಕ ಮಾನದಂಡದ ವಿನಾಯಿತಿ ತೆಗೆಯಬೇಕೆಂದು ವರದಿ ಸೂಚಿಸುತ್ತದೆ. ಅದೇ ವರದಿ ‘2ಎ’ನಲ್ಲಿದ್ದ ಪ್ರಮುಖ ಜಾತಿಗಳನ್ನು ಅತ್ಯಂತ ಹಿಂದುಳಿದ ಜಾತಿಗಳಾಗಿ ಪರಿವರ್ತಿಸಿ ಅವರಿಗಾಗಿ ‘ಪ್ರವರ್ಗ 1ಬಿ’ ಹುಟ್ಟುಹಾಕಲು ಶಿಫಾರಸು ಮಾಡುತ್ತದೆ. ಇದರಲ್ಲಿ ರಾಜಕಾರಣದ ಹೊಗೆ ಕಾಣಿಸುತ್ತಿದೆ.

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಆರಂಭಿಸಿರುವ ಗಣತಿ ನಡೆಸಲು ಆಡಳಿತಯಂತ್ರ ಏದುಸಿರು ಬಿಡುತ್ತಿದೆ. ಕೇಂದ್ರ ಸರ್ಕಾರ ಜನಗಣತಿಯೊಂದಿಗೆ ಜಾತಿಗಣತಿಯನ್ನೂ ಮಾಡುತ್ತಿರುವುದರಿಂದ ಕರ್ನಾಟಕ ಸರ್ಕಾರ ಸುಮ್ಮನಿರುವುದೇ ಜಾಣತನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.