ನಾವು ಇತ್ತೀಚೆಗೆ ಸರ್ಕಾರಕ್ಕೆ ಸಲ್ಲಿಸಿದ ‘ಕರ್ನಾಟಕ ಮೂಢನಂಬಿಕೆ ಆಚರಣೆಗಳ ಪ್ರತಿಬಂಧಕ ಮಸೂದೆ, ೨೦೧೩’ , ಕಾನೂನು ಆಗುವ ಮುಂಚೆ ಇನ್ನೂ ಹೆಚ್ಚಿನ ಚರ್ಚೆಯಾಗಲಿ ಎಂದೇ ಸಲ್ಲಿಸಲಾಗಿರುವ ಒಂದು ಕರಡು ಮಾತ್ರ. ಅದು ರಾಜ್ಯದಲ್ಲಿ ಒಂದು ದೊಡ್ಡ ಚರ್ಚೆಯನ್ನು ಹುಟ್ಟು ಹಾಕಿದೆ. ಅದು ಸ್ವಾಗತಾರ್ಹ. ಆದರೆ ಈ ಚರ್ಚೆ ಫಲಕಾರಿಯಾಗಬೇಕಾದರೆ, ಅದು ಕರಡಿನಲ್ಲಿರುವ ವಾಸ್ತವಾಂಶಗಳನ್ನು ಆಧರಿಸಿ, ವಸ್ತುನಿಷ್ಠತೆಯಿಂದ ಕೂಡಿರಬೇಕಾಗುತ್ತದೆ.

ಬದಲಿಗೆ ಈಗ ಕರಡಿನಲ್ಲಿ ಇಲ್ಲದ ಅಂಶಗಳನ್ನೇ ಮುಂದೆ ಮಾಡಿ, ಅಲ್ಲಿ ಪ್ರಸ್ತಾಪಿಸದೇ ಇರುವ ಅನೇಕ ಧಾರ್ಮಿಕ ನಂಬಿಕೆ- ಆಚರಣೆಗಳನ್ನು ನಿಷೇಧ ಮಾಡಲಾಗಿದೆ ಎಂಬಂತೆ ಚಿತ್ರಿಸಲಾಗುತ್ತಿದೆ. ಜನರು ತಮಗೆ ಬೇಕಾದ ಧಾರ್ಮಿಕ ನಂಬುಗೆಗಳನ್ನು ಇಟ್ಟುಕೊಳ್ಳುವುದು ಭಾರತ ಸಂವಿಧಾನದಲ್ಲಿ ಒಂದು ಮೂಲಭೂತ ಹಕ್ಕು ಎಂಬುದು ಪ್ರಾಥಮಿಕ ತಿಳಿವಳಿಕೆಯಾದ್ದರಿಂದ, ಈ ಕರಡನ್ನು ರೂಪಿಸಿರುವವರು ಅದನ್ನು ಗಮನಿಸದೆ ಇರುವುದು ಅಸಾಧ್ಯ. ಇಂಥ ತಪ್ಪು ವಾದಗಳಿಂದಾಗಿ ಸಾಮಾನ್ಯ ಜನ ಮತ್ತು ಪಂಡಿತರಿಬ್ಬರಲ್ಲೂ ಕರಡಿನ ಬಗ್ಗೆ ಅನೇಕ ಗೊಂದಲ ತಪ್ಪು ಅಭಿಪ್ರಾಯಗಳು ಮೂಡಿವೆ.

ಇದನ್ನು ಹೋಗಲಾಡಿಸಲು, ಮತ್ತು ಜನರ ಮುಂದೆ ಕೆಲವು ವಾಸ್ತವಾಂಶಗಳನ್ನು ಮಂಡಿಸಲು ಇಲ್ಲಿ ಕೆಲವು ವಿವರಣೆಗಳನ್ನು ನೀಡುತ್ತಿದ್ದೇವೆ. ಇದರಿಂದ, ಕರಡನ್ನು ಕುರಿತು ಹೆಚ್ಚು ಅರ್ಥಪೂರ್ಣ ಫಲದಾಯಕವಾದ ಚರ್ಚೆಯಾಗಲಿ, ಮತ್ತು ಇದರಿಂದ ಕರ್ನಾಟಕ ಒಂದು ಮೂಢನಂಬಿಕೆ ಮುಕ್ತ ರಾಜ್ಯವಾಗಲಿ ಎನ್ನುವುದು ನಮ್ಮ ಉದ್ದೇಶ.

ಸರ್ಕಾರ ಮೂಢನಂಬಿಕೆಗಳನ್ನು ನಿಷೇಧಿಸುವ ಕಾಯ್ದೆ ಕುರಿತಂತೆ ಸಲಹೆ ಮತ್ತು ಮಾಹಿತಿಯನ್ನು ನೀಡಬೇಕೆಂದು, ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರವನ್ನು ಪತ್ರ ಮುಖೇನ ಕೇಳಿದ್ದರಿಂದ, ನಾವು ಈ ಕೆಲಸವನ್ನು ಕೈಗೆತ್ತಿಕೊಂಡೆವೇ ವಿನಾ, ಇದು ಸ್ವಪ್ರೇರಣೆಯಿಂದ ಕೆಲವೇ ಮಂದಿ ಸೇರಿ ತಯಾರಿಸಿದ ಕಾನೂನಲ್ಲ.

ಈ ಉಪಕ್ರಮದ ಮೊದಲ ಹೆಜ್ಜೆಯಾಗಿ ಕಾನೂನು ಮತ್ತು ಶಿಕ್ಷಣ ತಜ್ಞರಿಂದ ಹಿಡಿದು ಜನಪರ ವಿದ್ವಾಂಸರು ಮತ್ತು ಮಾನವಶಾಸ್ತ್ರಜ್ಞರು ಇರುವ ಸಮಿತಿಯ ಸಲಹೆ ಪಡೆದು ಒಂದು ಪರಿಕಲ್ಪನಾತ್ಮಕ ಟಿಪ್ಪಣಿಯನ್ನು ತಯಾರಿಸಲಾಗಿತ್ತು.

ಇದೊಂದು ಅನೌಪಚಾರಿಕ ಸಮಿತಿಯಾಗಿದ್ದು, ಕರಡು ಮಸೂದೆಯನ್ನು ತಯಾರಿಸಲು ಬೇಕಾದ ಹಿನ್ನೆಲೆಯನ್ನು ಒದಗಿಸುವುದು ಇದರ ಉದ್ದೇಶ. ಇದರಲ್ಲಿ ಭಿನ್ನ ಅಭಿಪ್ರಾಯ ಮತ್ತು ಒಳನೋಟಗಳನ್ನು ಹೊಂದಿರುವವರು ಇದ್ದರು. ಆದ್ದರಿಂದ ಇವರೆಲ್ಲರೂ ಒಂದೇ ಸಿದ್ಧಾಂತಕ್ಕೆ ಬದ್ಧರಾಗಿರುವವರು ಎಂಬ ಆರೋಪಕ್ಕೆ ಯಾವುದೇ ಹುರುಳಿಲ್ಲ.

ಪರಿಕಲ್ಪನಾತ್ಮಕ ಟಿಪ್ಪಣಿ ಮತ್ತು ಕರಡು ಕಾನೂನು ವಿಭಿನ್ನ ಉದ್ದೇಶಗಳಿಗಾಗಿ ಬೇರೆಬೇರೆಯವರು ರಚಿಸಿದ ಎರಡು ಪ್ರತ್ಯೇಕ ದಾಖಲೆಗಳಾಗಿವೆ. ಕರಡು ಮಸೂದೆಯನ್ನು ರಚಿಸಿದ ಸಮಿತಿ ಟಿಪ್ಪಣಿಯಲ್ಲಿರುವ ವಿಚಾರಗಳನ್ನು ಆಧರಿಸಿದರೂ ಕಾನೂನಾತ್ಮಕವಾಗಿ ಅನುಷ್ಠಾನಕ್ಕೆ ತರಬಹುದಾದ ಸಂಗತಿಗಳನ್ನು ಮಾತ್ರ ಬಳಸಿಕೊಂಡಿದೆ ಮತ್ತು ಇದಕ್ಕೆ ಪರಿಕಲ್ಪನಾತ್ಮಕ ಟಿಪ್ಪಣಿಯನ್ನು ರಚಿಸಿದವರ ಒಪ್ಪಿಗೆ ಕೂಡ ಇದೆ.

ಕರಡು ಮಸೂದೆಯನ್ನು ರಚಿಸುವುದಕ್ಕೆ ಮುಂಚೆ ಆಗಬೇಕಿದ್ದ ಸಾರ್ವಜನಿಕ ಚರ್ಚೆಯ ಉದ್ದೇಶವನ್ನು ಮಾತ್ರ ಈ ಟಿಪ್ಪಣಿ ಹೊಂದಿತ್ತು. ಹೀಗಾಗಿ ಚರ್ಚೆಯ ಕೇಂದ್ರವಸ್ತು ಕರಡು ಮಸೂದೆಯಾಗಬೇಕೆ ವಿನಾ ಕೇವಲ ಹಿನ್ನೆಲೆಯ ವಿಚಾರಗಳು ಮತ್ತು ಅಭಿಪ್ರಾಯಗಳನ್ನು ಮಾತ್ರ ಒಳಗೊಂಡಿದ್ದ ಪರಿಕಲ್ಪನಾತ್ಮಕ ಟಿಪ್ಪಣಿ ಅಲ್ಲ.

* ಹರಕೆ ಹೊರುವುದು, ರುದ್ರಾಕ್ಷಿ ಮಾಲೆ ಹಾಕಿಕೊಳ್ಳುವುದು ಇತ್ಯಾದಿ ಸಂಗತಿಗಳು ಪರಿಕಲ್ಪನಾತ್ಮಕ ಟಿಪ್ಪಣಿಯಲ್ಲಿ ಕೂಡ ಎಲ್ಲೂ ಪ್ರಸ್ತಾಪವಾಗಿರುವುದಿಲ್ಲ. ಕರಡು ಮಸೂದೆ, ಮೇಲೆ ತಿಳಿಸಿರುವ ಹಾಗೆ, ಕೇವಲ ಹಾನಿಕಾರಕವಾದ ಆಚರಣೆಗಳನ್ನಷ್ಟೆ ಪಟ್ಟಿಮಾಡಿದೆ. ಪರಿಕಲ್ಪನಾತ್ಮಕ ಟಿಪ್ಪಣಿ ವಿವರಣಾತ್ಮಕವಾಗಿದ್ದಲ್ಲಿ ಕರಡು ಮಸೂದೆ ನಿಯಮಗಳನ್ನು ವಿಧಿಸುವ ಮತ್ತು ನಿಖರವಾಗಿರುವ ದಾಖಲೆ.

ದುರದೃಷ್ಟವಶಾತ್ ಈ ಮಸೂದೆಯನ್ನು ಟೀಕೆ ಮಾಡುತ್ತಿರುವವರು ಇವೆರಡು ದಾಖಲೆಗಳಲ್ಲಿರುವ ವ್ಯತ್ಯಾಸವನ್ನು ಗ್ರಹಿಸುವುದರಲ್ಲಿ ಎಡವಿದ್ದಾರೆ. ಟಿಪ್ಪಣಿಯಲ್ಲಿರುವ ಅನೇಕ ಸಂಗತಿಗಳನ್ನು ಕರಡು ಮಸೂದೆಯಲ್ಲಿ ಇದೆ ಎನ್ನುವ ಹಾಗೆ ತಪ್ಪಾಗಿ ಅರ್ಥೈಸಿಕೊಂಡು ಜನತೆಯಲ್ಲಿ ಗೊಂದಲವನ್ನು ಮೂಡಿಸುತ್ತಿದ್ದಾರೆ.

ವಿಷಾದವೆಂದರೆ, ಟಿಪ್ಪಣಿಯಲ್ಲೂ ಇಲ್ಲದ ದೇವರ ಪೂಜೆ ಅಥವಾ ಕೆಲವು ನೇಮಗಳನ್ನು ಕರಡಲ್ಲಿ ಬಹಿಷ್ಕರಿಸಲಾಗಿದೆ ಎಂಬ ತಮ್ಮದೇ ವಿಚಾರಗಳನ್ನು ಕರಡಿನಲ್ಲಿದೆ ಎಂದು ಆರೋಪಿಸಿ ಅದರ ಅರ್ಥವನ್ನು ಸಂಪೂರ್ಣ ತಿರುಚಿದ್ದಾರೆ. ಈ ಕರಡು ಮಸೂದೆ ಜನಗಳ ಧಾರ್ಮಿಕ ನಂಬಿಕೆಗಳಿಗೆ ಅದರಲ್ಲೂ, ಹಿಂದೂ ನಂಬಿಕೆಗಳಿಗೆ ವಿರೋಧವಾದುದು ಎಂದು ಆರೋಪಿಸುತ್ತಿರುವವರು ಒಂದೋ ಕರಡನ್ನು ಸರಿಯಾಗಿ ಗ್ರಹಿಸಿಲ್ಲ, ಇಲ್ಲವೇ ಅದರ ಶಿಫಾರಸುಗಳನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದ್ದಾರೆ.

* ಭಾರತದ ಸಂವಿಧಾನ ಧಾರ್ಮಿಕ ನಂಬಿಕೆ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತದೆಯಾದ್ದರಿಂದ, ಇವುಗಳನ್ನು ನಿಷೇಧಿಸುವ ಪ್ರಶ್ನೆಯೇ ಇರುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಸದರಿ ಮಸೂದೆ ಕೆಲವು ನಿರ್ದಿಷ್ಟ ಹಾನಿಕಾರಕ ಆಚರಣೆಗಳನ್ನು ಮಾತ್ರ, ಅದೂ ಕೆಲವು ಮಿತಿಗಳ ಒಳಗೆ, ತನ್ನ ಪರಿಧಿಯೊಳಗೆ ತರಲು ಸಾಧ್ಯ. ಕರಡು ಮಸೂದೆ ಮಾಡಲು ಹೊರಟಿರುವುದು ಅಷ್ಟನ್ನು ಮಾತ್ರ.

ಅಧ್ಯಾಯ ೧, (ಜೆ) ಅಡಿಯಲ್ಲಿ ಸ್ವಷ್ಟವಾಗಿ ಸೂಚಿಸಿರುವ ಹಾಗೆ ಮೂಢನಂಬಿಕೆ ಎಂದರೆ ‘ತೀವ್ರತರವಾದ ದೈಹಿಕ ಅಥವಾ ಮಾನಸಿಕ ಹಾನಿಯುಂಟುಮಾಡುವ, ಅಥವಾ ಹಣಕಾಸಿನ ಅಥವ ಯಾವುದೇ ಲೈಂಗಿಕ ಶೋಷಣೆಯನ್ನುಂಟು ಮಾಡುವ ಅಥವಾ ಮನುಷ್ಯನ ಘನತೆಗೆ ಘಾಸಿಯುಂಟುಮಾಡುವ ಯಾವುದೇ ಕೃತ್ಯ; ಅಥವಾ ಅನುಸೂಚಿಯಲ್ಲಿ ನಿರ್ದಿಷ್ಟ ಪಡಿಸಿದ ಯಾವುದೇ ಕೃತ್ಯ, ಅಥವಾ ವ್ಯಕ್ತಿಗಳ ಕಾಯಿಲೆಯನ್ನು ಅಥವಾ ಸಂಕಟವನ್ನು ಪರಿಹರಿಸುವ ಭರವಸೆ ನೀಡಿ ಅಥವಾ ಅವರಿಗೆ ಲಾಭ ಉಂಟಾಗುತ್ತದೆಂದು ಹೆದರಿಸಿ ಅತಿಮಾನುಷ ಶಕ್ತಿಯನ್ನು ಆಹ್ವಾನಿಸುವ ಮೂಲಕ’ ಹಾನಿಯನ್ನು ಉಂಟುಮಾಡುವ ಆಚರಣೆಗಳು ಎಂದು ನಮೂದಿಸಲಾಗಿದೆ. ಇದು ಎಲ್ಲ ಧರ್ಮದವರಿಗೂ ಅನ್ವಯವಾಗುತ್ತದೆ ಎನ್ನುವುದು ಇದರಲ್ಲಿ ಸ್ಪಷ್ಟವಾಗಿದೆ. ಆದ್ದರಿಂದ ಈ ಕರಡು ಮಸೂದೆ ಯಾವುದೇ ನಂಬಿಕೆಯನ್ನು ಹೊಂದಿರುವುದನ್ನೇ - ಅದು ಮೂಢನಂಬಿಕೆಯಾಗಿದ್ದರೂ ಸಹ - ಅಪರಾಧೀಕರಿಸುವುದಿಲ್ಲ.

* ಮಹಾರಾಷ್ಟ್ರದ ಮಸೂದೆ ಕೆಲವು ನಿರ್ದಿಷ್ಟ ಆಚರಣೆಗಳನ್ನು ಪಟ್ಟಿ ಮಾಡಿ ಅವುಗಳನ್ನು ಮಾತ್ರ ನಿಷೇಧಿಸಬೇಕೆಂದು ಸೂಚಿಸುತ್ತದೆ. ಇದರಲ್ಲಿ ಇಲ್ಲದ ಇತರೆ ಆಚರಣೆಗಳು, ಅವು ಎಷ್ಟೇ ಹಾನಿಕಾರಕವಾಗಿದ್ದರೂ, ಮಸೂದೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಬದಲಿಗೆ, ನಮ್ಮ ಮಸೂದೆ ಹಾನಿಕಾರಕ ಆಚರಣೆಗಳ ಹಿಂದಿರುವ ಕೆಲವು ಸಾಮಾನ್ಯ ಸಂಗತಿಗಳ ವಿವರಣೆಯನ್ನು ಹೊಂದಿದೆ. ಇದರಲ್ಲಿ ಕೊಟ್ಟಿರುವ ಕೆಲವು ಉದಾಹರಣೆಗಳು ಈ ವಿವರಣೆಯನ್ನು ಸ್ಪಷ್ಟಗೊಳಿಸುವುಕ್ಕೆ ನೀಡಲಾಗಿದೆಯಾದರೂ, ಮಸೂದೆಯ ವ್ಯಾಪ್ತಿ ಈ ಕೆಲವೇ ಉದಾಹರಣೆಗೆಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ.

ಹೀಗಾಗಿ ಈ ವಿವರಣೆಗೆ ಒಳಪಡುವ ಯಾವುದೇ ಧರ್ಮದ ಆಚರಣೆಗಳನ್ನೂ ಈ ಮಸೂದೆಯ ವ್ಯಾಪ್ತಿಯೊಳಗೆ ತರಲು ಸಾಧ್ಯವಿದೆ. ಈ ಮಸೂದೆ ಕೇವಲ ಒಂದೇ ಧರ್ಮದ ಆಚರಣೆಗಳನ್ನು ಮಾತ್ರ ಗುರಿಯಾಗಿಸಿಕೊಂಡಿದೆ ಎಂಬುದರಲ್ಲಿ ಹುರುಳಿಲ್ಲ. ಈ ರೀತಿಯ ಭಾವನೆಗಳನ್ನು ಹರಡುತ್ತಿರುವುದರಿಂದ ಸಮಾಜದಲ್ಲಿ ಅನಗತ್ಯ ಗೊಂದಲ ಹಾಗೂ ಭಯಗಳು ಹಬ್ಬುತ್ತವೆ. ಇದು ಅನುಚಿತ.

* ಇಷ್ಟಾಗ್ಯೂ ಈ ಮಸೂದೆ ಒಂದು ಕರಡೇ ಹೊರತು ಅಂತಿಮವಲ್ಲ. ಇದರಲ್ಲಿ ಅಡಕವಾಗಿರುವ ಎಲ್ಲ ವಿಷಯಗಳ ಬಗ್ಗೆ ವಿವರವಾದ, ಆದರೆ ಆರೋಗ್ಯಕರವಾದ ಚರ್ಚೆಯಾಗುವುದು ಒಳ್ಳೆಯದೇ. ಇದರಿಂದ ಅಧಿಕೃತವಾಗಿ ಮುಂದೆ ಜಾರಿಯಾಗಬಹುದಾದ ಮಸೂದೆ ಇನ್ನಷ್ಟು ಸಮಗ್ರವೂ, ಸಮರ್ಪಕವೂ ಆಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಸಾರ್ವಜನಿಕರು, ಅದರಲ್ಲೂ ವಿವಿಧ ಸಾಮಾಜಿಕ ಗುಂಪುಗಳು, ಸಮುದಾಯಗಳು, ರಾಜಕೀಯ ಪಕ್ಷಗಳು, ಈಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿರುವ ಅಪಪ್ರಚಾರದ ಬಗ್ಗೆ ಎಚ್ಚರ ವಹಿಸಿ, ಕರಡು ಮಸೂದೆಯನ್ನು ಅದರ ಎಲ್ಲ ಆಶಯಗಳೊಂದಿಗೆ ಗ್ರಹಿಸಿ, ಅದನ್ನು ಬಲಪಡಿಸಲು ಬೇಕಾದ ಸಲಹೆ, ಸೂಚನೆಗಳನ್ನು ಸರ್ಕಾರಕ್ಕೆ ನೀಡಬೇಕಾಗಿ ಮನವಿ ಮಾಡುತ್ತೇವೆ.

ಕರಡು ಮಸೂದೆಯ ಸಂಪೂರ್ಣ ಪಠ್ಯ www.nls.ac.in ವೆಬ್ಸೈಟ್ನಲ್ಲಿ ಲಭ್ಯವಿದೆ.

ಡಾ ವಿ. ಎಸ್. ಶ್ರೀಧರ
(ಲೇಖಕರು ಸಹ ಪ್ರಾಧ್ಯಾಪಕರು ಹಾಗೂ ರಾಷ್ಟ್ರೀಯ ಕಾನೂನು ಶಾಲೆಯ ಸಾಮಾಜಿಕ ಪ್ರತ್ಯೇಕತೆ ಹಾಗೂ ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರದ ಉಪ ನಿರ್ದೇಶಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.