ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಸೋಮವಾರ 29.7.1996

Last Updated 28 ಜುಲೈ 2021, 19:30 IST
ಅಕ್ಷರ ಗಾತ್ರ

ಬಚಾವತ್ ತೀರ್ಪಿಗೆರಾಜ್ಯ ಸರ್ಕಾರ ಬದ್ಧ: ಪಟೇಲ್

ಚಿತ್ರದುರ್ಗ, ಜುಲೈ 28– ಆಲಮಟ್ಟಿ ಅಣೆಕಟ್ಟಿನ ವಿಚಾರದಲ್ಲಿ ಕರ್ನಾಟಕಸರ್ಕಾರ ಬಚಾವತ್‌ ತೀರ್ಪಿಗೆ ಬದ್ಧವಾಗಿದೆ. ಚಾಚೂ ತಪ್ಪದೇ ಸರ್ಕಾರ ಬಚಾವತ್ ಆದೇಶಗಳನ್ನು ಅನುಸರಿಸುತ್ತದೆ ಎಂದು ಮುಖ್ಯಮಂತ್ರಿ ಜೆ.ಎಚ್‌. ಪಟೇಲ್ ಅವರು ಇಂದು ಇಲ್ಲಿ ತಿಳಿಸಿದರು.

ಈ ಬಗ್ಗೆ ಅನವಶ್ಯಕ ವಿವಾದಗಳನ್ನು ಹುಟ್ಟುಹಾಕಲಾಗುತ್ತಿದೆ. ಯಾರೋ ಒಬ್ಬರು ‘ಕುಚೋದ್ಯ’ಕ್ಕಾಗಿ ಇದನ್ನು ಸೃಷ್ಟಿಸುತ್ತಿದ್ದಾರೆ. ಇದಕ್ಕೆ ನಾನು ಆಂಧ್ರದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಅವರನ್ನು ಕಾರಣ ಎಂದು ಹೇಳಲಾರೆ ಎಂದೂ ಅವರು ಪತ್ರಕರ್ತ
ರೊಂದಿಗೆ ಮಾತನಾಡುತ್ತ ಹೇಳಿದರು.

ಅಡುಗೆ ಅನಿಲ: ಮನೆಗೆ ವಿತರಣೆಇಲ್ಲ– ಬೆದರಿಕೆ

ಬೆಂಗಳೂರು, ಜುಲೈ 28– ಹೆಚ್ಚಿರುವ ಅಡುಗೆ ಅನಿಲದ ಬೆಲೆಯಿಂದಾಗಿ ಅನಿಲದ ಸಿಲಿಂಡರ್‌ಗಳನ್ನು (ಎಲ್‌ಪಿಜಿ ಸಿಲಿಂಡರ್‌) ಮನೆಮನೆಗೆ ತಲುಪಿಸುವ ವ್ಯವಸ್ಥೆಗೆ ಧಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ.

ಜುಲೈ 3ರಂದು ಅನಿಲದ ಸಿಲಿಂಡರ್‌ಗಳ ಬೆಲೆಯನ್ನು ಸರ್ಕಾರ ಶೇ 30ರಷ್ಟು ಹೆಚ್ಚು ಮಾಡಿರುವುದರಿಂದಾಗಿ ಇದುವರೆಗೆ ಚಾಲ್ತಿಯಲ್ಲಿದ್ದಂತೆ ಸಿಲಿಂಡರ್‌ಅನ್ನು ಉಚಿತವಾಗಿ ಮನೆಮನೆಗೆ ತಲುಪಿಸುವುದು ಕಷ್ಟವಾಗುತ್ತದೆ ಎಂಬ ಅಭಿಪ್ರಾಯ ಶನಿವಾರ ಬೆಂಗಳೂರಿನಲ್ಲಿ ನಡೆದ ದಕ್ಷಿಣ ವಲಯ ಅಡುಗೆ ಅನಿಲ ವಿತರಕರ ಸಂಘದ ಸಮಾವೇಶದಲ್ಲಿ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT