ಗುರುವಾರ , ಜೂನ್ 17, 2021
22 °C

25 ವರ್ಷಗಳ ಹಿಂದೆ: ಶುಕ್ರವಾರ 26, ಏಪ್ರಿಲ್‌ 1996

ಪಿಟಿಐ Updated:

ಅಕ್ಷರ ಗಾತ್ರ : | |

ಕನಕಪುರ ಚುನಾವಣೆ ಭವಿಷ್ಯ ಆಯೋಗದ ಕೈನಲ್ಲಿ: ಕೃಷ್ಣ
ಬೆಂಗಳೂರು, ಏ. 25–
ಅಪಾರ ಪ್ರಮಾಣದಲ್ಲಿ ಅಕ್ರಮ ನಡೆದಿದೆ ಎಂದು ವರದಿಯಾಗಿರುವ ಕನಕಪುರ ಕ್ಷೇತ್ರದ ಚುನಾವಣೆಯನ್ನು ರದ್ದು ಮಾಡಬೇಕೇ ಬೇಡವೇ ಎನ್ನುವುದು ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ವಿಚಾರ ಎಂದು ಕಾಂಗೈ ಪ್ರಚಾರ ಸಮಿತಿ ಅಧ್ಯಕ್ಷ ಎಸ್.ಎಂ.ಕೃಷ್ಣ ಇಲ್ಲಿ ಇಂದು ಹೇಳಿದರು.

ಆ ಲೋಕಸಭಾ ಕ್ಷೇತ್ರದಲ್ಲಿ ದಳ ಅಭ್ಯರ್ಥಿ ಕುಮಾರಸ್ವಾಮಿ ಪರವಾಗಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಪಕ್ಷ ಹಾಗೂ ಅಭ್ಯರ್ಥಿ ಚಂದ್ರಶೇಖರ ಮೂರ್ತಿ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ ವಿಶೇಷ ವೀಕ್ಷಕರನ್ನು ಅದು ಕಳಿಸಿದೆ ಎಂದು ತಿಳಿಸಿದರು.

150 ಲೋಕಸಭೆ, 535 ಅಸೆಂಬ್ಲಿ ಕ್ಷೇತ್ರಗಳಲ್ಲಿ ಪ್ರಚಾರ ಅಂತ್ಯ
ನವದೆಹಲಿ, ಏ. 25 (ಪಿಟಿಐ)–
ಏಪ್ರಿಲ್ 27ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಗೆ ಲೋಕಸಭೆಯ 150 ಹಾಗೂ ಆರು ರಾಜ್ಯ ವಿಧಾನಸಭೆಗಳ 535 ಕ್ಷೇತ್ರಗಳ ಪ್ರಚಾರ ಇಂದು ಅಂತ್ಯಗೊಂಡಿತು. ಸುಮಾರು 13 ಕೋಟಿ ಮತದಾರರು ಅಂದು ಮತ ಚಲಾಯಿಸಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು