ಭಾನುವಾರ, ಆಗಸ್ಟ್ 14, 2022
20 °C

25 ವರ್ಷಗಳ ಹಿಂದೆ, ಮಂಗಳವಾರ, 1–7–1997

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಂಕಾಂಗ್‌ ಐತಿಹಾಸಿಕ ಹಸ್ತಾಂತರ

ಹಾಂಕಾಂಗ್‌, ಜೂನ್‌ 30 (ಪಿಟಿಐ)– ಬ್ರಿಟಿಷ್‌ ಆಧಿಪತ್ಯವನ್ನು ಮಧ್ಯರಾತ್ರಿ ಕಳಚಿಕೊಂಡ ಹಾಂಕಾಂಗ್‌, ಚೀನಾದಲ್ಲಿ ಐಕ್ಯಗೊಂಡಿತು. 

156 ವರ್ಷಗಳ ಕಾಲ ಹಾಂಕಾಂಗ್‌ನ ಚುಕ್ಕಾಣಿ ಹಿಡಿದಿದ್ದ ಬ್ರಿಟನ್‌ನ ಜಾಕ್‌ ಮೆಲ್ಲ ಮೆಲ್ಲನೆ ಕೆಳಗಿಳಿಯುತ್ತಿದ್ದಂತೆಯೇ ಚೀನಾದ ಧ್ವಜ ಮೇಲೇರಿ ಹಾರಾಡತೊಡಗಿತು. ಲಕ್ಷಾಂತರ ಜನ ಹರ್ಷೋದ್ಗಾರಗಳೊಡನೆ ನಲಿದರು. ಈ ಐತಿಹಾಸಿಕ ಹಸ್ತಾಂತರವನ್ನು ಇಡೀ ವಿಶ್ವವೇ ಸ್ವಾಗತಿಸಿತು.

ಉದ್ವೇಗದ ಭಾಷಣದೊಂದಿಗೆ ಅಧಿಕಾರವನ್ನು ಹಾಂಕಾಂಗ್‌ ಡೆಮೊಕ್ರೆಟಿಕ್‌ ಪಕ್ಷದ ಮುಖ್ಯಸ್ಥ ಮಾರ್ಟಿನ್‌ ಲೀ ಬಿಟ್ಟುಕೊಟ್ಟರು. ನಂತರ ನಡೆದ 90 ನಿಮಿಷಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಚೀನಾ ಬೆಂಬಲಿತ, ಪ್ರಾಂತೀಯ ಶಾಸಕ ಮಂಡಳಿಯ 60 ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.

ಸಿಬಿಐ ನಿರ್ದೇಶಕ ಜೋಗಿಂದರ್‌ ಹಠಾತ್‌ ವರ್ಗಾವಣೆ

ನವದೆಹಲಿ, ಜೂನ್‌ 30 (ಪಿಟಿಐ)– ಮಹತ್ವದ ಬೆಳವಣಿಗೆಯೊಂದರಲ್ಲಿ ಮೇವು ಹಾಗೂ ಹವಾಲ ಸೇರಿದಂತೆ ಹಲವು ಪ್ರಮುಖ ಹಗರಣಗಳ ತನಿಖೆ ನಡೆಸುತ್ತಿದ್ದ ಕೇಂದ್ರ ತನಿಖಾ ದಳದ (ಸಿಬಿಐ) ನಿರ್ದೇಶಕ ಜೋಗಿಂದರ್‌ ಸಿಂಗ್‌ ಅವರನ್ನು ಹಠಾತ್‌ ಆಗಿ ವರ್ಗಾವಣೆ ಮಾಡಲಾಗಿದೆ. 

ಸಿಬಿಐನ ವಿಶೇಷ ನಿರ್ದೇಶಕ ಆರ್‌.ಸಿ.ಶರ್ಮಾ ಅವರನ್ನು ನಿರ್ದೇಶಕರ ಹುದ್ದೆಗೆ ನೇಮಕ ಮಾಡಲಾಗಿದೆ. ನಿವೃತ್ತಿಯ ಅಂಚಿನಲ್ಲಿರುವ ಸಿಂಗ್‌ ಅವರಿಗೆ ಬಡ್ತಿ ನೀಡಿ ಕೇಂದ್ರ ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಅಕ್ಟೋಬರ್‌ ಕೊನೆಯಲ್ಲಿ ಜೋಗಿಂದರ್‌ ಸಿಂಗ್‌ ನಿವೃತ್ತಿ ಹೊಂದಲಿದ್ದಾರೆ. ಸಿಂಗ್‌ ಹನ್ನೊಂದು ತಿಂಗಳ ಹಿಂದೆ ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿದ್ದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.