ಶುಕ್ರವಾರ, ಸೆಪ್ಟೆಂಬರ್ 24, 2021
21 °C
ಶುಕ್ರವಾರ 09.08.1996

25 ವರ್ಷಗಳ ಹಿಂದೆ: ನಾರಾಯಣಪುರ ಅಣೆ: ತನಿಖೆಗೆ ರೆಡ್ಡಿ ಸಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾರಾಯಣಪುರ ಅಣೆ: ತನಿಖೆಗೆ ರೆಡ್ಡಿ ಸಮಿತಿ

ಬೆಂಗಳೂರು, ಆ. 8– ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪುರ ಅಣೆಕಟ್ಟೆ ದುರ್ಬಲಗೊಂಡಿದೆ ಎಂಬ ಮತ್ತು ಇದೇ ಅಣೆಯ ಎಡದಂಡೆ ಕಾಲುವೆ ದುರಸ್ತಿ ನೆಪದಲ್ಲಿ ನೂರಾರು ಕೋಟಿ ಮೊತ್ತದ ಹಣ ದುರುಪಯೋಗ ಆಗಿದೆ ಎಂಬ ಆರೋಪಗಳ ತನಿಖೆಯನ್ನು ಕೆ.ಸಿ. ರೆಡ್ಡಿ ನೇತೃತ್ವದ ಉನ್ನತಾಧಿಕಾರ ತಾಂತ್ರಿಕ ಸಮಿತಿಗೆ ವಹಿಸುವುದಾಗಿ ಸರ್ಕಾರ ವಿಧಾನಸಭೆಯಲ್ಲಿ ಇಂದು ಪ್ರಕಟಿಸಿತು.

ಈ ಅಣೆಕಟ್ಟೆ ಮತ್ತು ಕಾಲುವೆಯ ಸ್ಥಿತಿ ಕುರಿತು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಭಾರಿ ನೀರಾವರಿ ಸಚಿವ ಕೆ.ಎನ್. ನಾಗೇಗೌಡರು ಈ ತನಿಖೆಯನ್ನು ಪ್ರಕಟಿಸಿದರಲ್ಲದೆ, ಸಮಿತಿ ಈ ವಿಚಾರದಲ್ಲಿ ಕೇಳಿಬಂದಿರುವ ಎಲ್ಲಾ ಆರೋಪಗಳನ್ನು ಸಾದ್ಯಂತವಾಗಿ ಪರಿಶೀಲಿಸಲಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು