ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ವಿವಾದ ಎಬ್ಬಿಸಿದ ಕಾವೇರಿ 4ನೇ ಹಂತದ ಗುತ್ತಿಗೆ

Published 21 ಡಿಸೆಂಬರ್ 2023, 23:30 IST
Last Updated 21 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ವಿವಾದ ಎಬ್ಬಿಸಿದ ಕಾವೇರಿ 4ನೇ ಹಂತದ ಗುತ್ತಿಗೆ

ಬೆಂಗಳೂರು, ಡಿ. 21– ನಗರಕ್ಕೆ ಕುಡಿಯುವ ನೀರು ಪೂರೈಸಲು ರೂಪಿಸಿರುವ ಸುಮಾರು 1,600 ಕೋಟಿ ರೂಪಾಯಿ ಅಂದಾಜು ವೆಚ್ಚದ ಕಾವೇರಿ ನಾಲ್ಕನೇ ಹಂತದ (ಎರಡನೇ ಘಟ್ಟ) ಯೋಜನೆಯ ಕಾಮಗಾರಿಗಳ ಗುತ್ತಿಗೆಯನ್ನು ಮಲೇಷ್ಯಾದ ಸಂಸ್ಥೆಯೊಂದಕ್ಕೆ ನೀಡಲು ಸರ್ಕಾರದ ಉನ್ನತ ಸ್ಥಾನಗಳಲ್ಲಿರುವ ಕೆಲವರು ತೋರಿಸುತ್ತಿದ್ದಾರೆ ಎನ್ನಲಾದ ‘ವಿಶೇಷ ಆಸಕ್ತಿ’ ನಾನಾ ರೀತಿಯ ಗುಮಾನಿಗಳಿಗೆ ಎಡೆ
ಮಾಡಿಕೊಟ್ಟಿದೆ.

ಯೋಜನೆಯ ಕಾಮಗಾರಿಗಳ ಗುತ್ತಿಗೆ ಪಡೆಯಲು ಟೆಂಡರ್‌ನಲ್ಲಿ ಭಾಗವಹಿಸಿದ್ದ ಸಂಸ್ಥೆಗಳ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ನೇಮಿಸಲಾಗಿದ್ದ ಪರಿಣತ ತಾಂತ್ರಿಕ ಸಂಸ್ಥೆ, ಯೋಜನೆಯನ್ನು ಅನುಷ್ಠಾನಗೊಳಿ ಸಲು ಮಲೇಷ್ಯಾ ಸಂಸ್ಥೆಗೆ ಇರುವ ಆರ್ಥಿಕ ಮತ್ತು ತಾಂತ್ರಿಕ ಸಾಮರ್ಥ್ಯವು ಟೆಂಡರ್‌ನಲ್ಲಿ ಭಾಗವಹಿಸಿರುವ ಇತರ ಸಂಸ್ಥೆಗಳಿಗಿಂತ ಕಡಿಮೆಯಿದೆ ಎಂದು ಸ್ಪಷ್ಟ ವರದಿ ನೀಡಿದೆ. ಆದರೂ ಉನ್ನತ ಅಧಿಕಾರ ಸ್ಥಾನಗಳಲ್ಲಿ ಇರುವ ಕೆಲವರು ಈ ಸಂಸ್ಥೆಗೇ ಕಾಮಗಾರಿಗಳ ಗುತ್ತಿಗೆ ನೀಡಲು ತೆರೆಮರೆಯಲ್ಲಿ ಸನ್ನಾಹ ನಡೆಸಿದ್ದಾರೆಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT