ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ವಾಜಪೇಯಿ ಸರ್ಕಾರಕ್ಕೆ ಡಿಎಂಕೆ, ಚೌತಾಲ ಬೆಂಬಲ‌

Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಚೆನ್ನೈ, ಏ. 13 (ಪಿಟಿಐ)– ಅವಿಶ್ವಾಸ ಗೊತ್ತುವಳಿ ಮಂಡನೆಯಾದರೆ ತಾನು ವಾಜಪೇಯಿ ಸರ್ಕಾರವನ್ನು ಬೆಂಬಲಿಸುವ ಇಂಗಿತವನ್ನು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಇಂದು ನೀಡುವುದರೊಡನೆ ದೆಹಲಿಯ ರಾಜಕೀಯ ಬಿಕ್ಕಟ್ಟು ಹೊಸ ಮಜಲನ್ನು ಪ್ರವೇಶಿಸಿತು.

ವಾಜಪೇಯಿ ಸರ್ಕಾರಕ್ಕೆ ಬೆಂಬಲ ನೀಡುವುದಿಲ್ಲ ಎಂದು ಕಠಿಣ ನಿಲುವು ವಹಿಸಿದ್ದ ಚೌತಾಲಾ ಅವರ ಪಕ್ಷವೂ ಇಂದು ನಿಲುವು ಸಡಿಲಿಸಿ ಕೆಲವು ಷರತ್ತುಗಳೊಡನೆ ಬೆಂಬಲ ನೀಡಲು ಸಿದ್ಧ ಎಂದು ತಿಳಿಸಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮುಂದುವರಿಯುವುದರಿಂದ ಉಂಟಾಗುವುದಕ್ಕಿಂತಲೂ ಹೆಚ್ಚಿನ ಅಪಾಯವು ಭ್ರಷ್ಟ ಎಐಎಡಿಎಂಕೆ ನಾಯಕಿ ಜಯಲಲಿತಾ ಅವರಿಂದ ದೇಶಕ್ಕಿದೆ ಎಂದು ಡಿಎಂಕೆ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT