ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ವರ್ಷಗಳ ಹಿಂದೆ: ಶನಿವಾರ 17.8.1996

Last Updated 16 ಆಗಸ್ಟ್ 2021, 19:45 IST
ಅಕ್ಷರ ಗಾತ್ರ

ಸಿಬಿಐ ಮುಖ್ಯಸ್ಥ ಸಿಂಗ್‌ಗೆ ಸುಪ್ರೀಂ ಕೋರ್ಟ್ ಛೀಮಾರಿ

ನವದೆಹಲಿ, ಆ. 16 (ಪಿಟಿಐ)– ಹವಾಲ ಹಗರಣದ ಆರೋಪಿಗಳಾದ ಕೆಲವು ಪ್ರಮುಖ ರಾಜಕಾರಣಿಗಳನ್ನು ಭೇಟಿ ಮಾಡಿದ್ದ ಸಿಬಿಐ ನಿರ್ದೇಶಕ ಜೋಗಿಂದರ್ ಸಿಂಗ್‌ ಅವರಿಗೆ ಸುಪ್ರೀಂ ಕೋರ್ಟಿನ ನ್ಯಾಯಪೀಠವು ಇಂದು ತುಂಬಿದ ನ್ಯಾಯಾಲಯದಲ್ಲಿ ಛೀಮಾರಿ ಹಾಕಿತು.

ಸಿಬಿಐ ನೂತನ ಮುಖ್ಯಸ್ಥರ ಕಾರ್ಯ ವೈಖರಿ ಹಾಗೂ ಹವಾಲ ಹಗರಣದತನಿಖೆ ಬಗ್ಗೆ ನ್ಯಾಯಮೂರ್ತಿಗಳಾದ ಜೆ.ಎಸ್.ವರ್ಮಾ, ಎಸ್‌.ಪಿ.ಭರೂಚ ಮತ್ತು ಎಸ್‌.ಸಿ.ಸೆನ್ ಅವರಿದ್ದ ಮೂವರು ನ್ಯಾಯಮೂರ್ತಿಗಳ ಪೀಠವು ತರಾಟೆಗೆ ತೆಗೆದುಕೊಂಡ ತಕ್ಷಣವೇ ಜೋಗಿಂದರ್ ಸಿಂಗ್ ಅವರು ಕ್ಷಮೆ ಯಾಚಿಸಿದರು.

‘ಈ ಕ್ಷಣದಿಂದಲೇ ನಾನು ಎಲ್ಲರ ಒಡನಾಟ ತೊರೆಯುವೆ. ಮುಂದೆ ಎಂದೂ ಇಂಥ ತಪ್ಪುಗಳಿಗೆ ಅವಕಾಶ ನೀಡುವುದಿಲ್ಲ’ ಎಂದು ಅವರು ನ್ಯಾಯಾಲಯಕ್ಕೆ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT