ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಆನೇಕಲ್‌ನಲ್ಲಿ ಉದ್ರಿಕ್ತ ಜನರ ಮೇಲೆ ಗೋಲಿಬಾರ್‌

ಬುಧವಾರ, 3/10/1973
Published 2 ಅಕ್ಟೋಬರ್ 2023, 23:33 IST
Last Updated 2 ಅಕ್ಟೋಬರ್ 2023, 23:33 IST
ಅಕ್ಷರ ಗಾತ್ರ

ಆನೇಕಲ್‌ನಲ್ಲಿ ಉದ್ರಿಕ್ತ ಜನರ ಮೇಲೆ ಗೋಲಿಬಾರ್‌: ಬಾಲಕನೊಬ್ಬನಿಗೆ ಗುಂಡೇಟು 

ಆನೇಕಲ್‌, ಅ. 3– ನಿನ್ನೆ ರಾತ್ರಿ ಇಲ್ಲಿ ಕಲ್ಲು ತೂರಾಟದಲ್ಲಿ ತೊಡಗಿದ್ದ ಉದ್ರಿಕ್ತ ಜನರ ಗುಂಪನ್ನು ಚದುರಿಸಲು ಪೊಲೀಸರು ಎರಡು ಸುತ್ತು ಗುಂಡು ಹಾರಿಸಿದರು.

ಬಾಲಕನೊಬ್ಬನಿಗೆ ಗುಂಡು ತಗಲಿ ಗಾಯವಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. 

ನಿನ್ನೆ ಬೆಳಿಗ್ಗೆ ಆನೇಕಲ್‌ ಕಡೆಯಿಂದ ಧಾನ್ಯ ತುಂಬಿದ್ದ ಎರಡು ಲಾರಿಗಳು ಬೆಂಗಳೂರಿಗೆ ಹೋಗುತ್ತಿದ್ದುದನ್ನು ಜನರು ತಡೆದು, ಲಾರಿಗಳನ್ನು ಪೊಲೀಸ್ ಠಾಣೆಗೆ ತಂದು ಧಾನ್ಯವನ್ನು ಇಲ್ಲಿಯೇ ಜನರಿಗೆ ಹಂಚಲು ಒತ್ತಾಯಪಡಿಸಿದರು. ಆದರೆ, ಅದಕ್ಕೆ ಪೊಲೀಸರು ಒಪ್ಪಲಿಲ್ಲ. ಹೆಡ್‌ಕಾನ್ಸ್‌ಟೆಬಲ್‌ ಒಬ್ಬರು ಲಾರಿಯೊಂದನ್ನು ಬಿಟ್ಟುಬಿಟ್ಟರು. ಇದರಿಂದ ಜನರು ಉದ್ರಿಕ್ತಗೊಂಡರು. ನಿನ್ನೆ ಬೆಳಿಗ್ಗೆ 6 ಗಂಟೆಯಿಂದ ಜನರ ಜನರ ಗುಂಪು ಕಚೇರಿ ಆವರಣದಲ್ಲಿ ಸೇರಿ ಪ್ರತಿಭಟನೆ ಸೂಚಿಸುತ್ತಿತ್ತು. ಈ ಮಧ್ಯೆ ಜನಸಂಘದವರು ನಡೆಸಿದ ಶಾಂತಿ ಪ್ರಯತ್ನ ವಿಫಲವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT