ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

50 ವರ್ಷಗಳ ಹಿಂದೆ ಈ ದಿನ: ಭ್ರೂಣದ ಘಟ್ಟದಲ್ಲೇ ಶಸ್ತ್ರಚಿಕಿತ್ಸೆ

Published 23 ಜೂನ್ 2024, 18:49 IST
Last Updated 23 ಜೂನ್ 2024, 18:49 IST
ಅಕ್ಷರ ಗಾತ್ರ

ವ್ಯಾಧಿಗೆ ಭ್ರೂಣದ ಘಟ್ಟದಲ್ಲೇ ಶಸ್ತ್ರಚಿಕಿತ್ಸೆ

ನ್ಯೂಪೋರ್ಟ್‌ಬೀಚ್, ಕ್ಯಾಲಿಫೋರ್ನಿಯಾ, ಜೂನ್ 23– ತಾಯಿಯ ಗರ್ಭದಲ್ಲಿರುವ
ಭ್ರೂಣದ ಐದನೇ ತಿಂಗಳ ಬೆಳವಣಿಗೆಯನ್ನು ವೈದ್ಯರು ಪರೀಕ್ಷಿಸಿ, ಭ್ರೂಣದಲ್ಲಿರುವ ರೋಗ, ದೋಷಗಳನ್ನು ಪತ್ತೆ ಹಚ್ಚಿ, ಮಗು ಹುಟ್ಟುವುದಕ್ಕೆ ಮೊದಲೇ ಶಸ್ತ್ರಚಿಕಿತ್ಸೆ ಮೂಲಕ ಈ ರೋಗಗಳನ್ನು ವಾಸಿ ಮಾಡುವರು!

ಇದು ಹಾಲಿವುಡ್‌ನ ಕಾಲ್ಪನಿಕ ವಿಜ್ಞಾನ ಕಾದಂಬರಿಕಾರನ ಊಹಾಪೋಹದಂತೆ ಕಾಣಿಸಬಹುದು. ಆದರೆ ಟಾರನ್ಸ್‌ನಲ್ಲಿರುವ ಹಾರ್ಬರ್ ಜನರಲ್ ಆಸ್ಪತ್ರೆಯಲ್ಲಿನ ವೈದ್ಯಕೀಯ ಚಲನಶಾಸ್ತ್ರ ವಿಭಾಗದ ಅಸೋಸಿಯೇಟ್ ಚೀಫ್ ಆಗಿರುವ ಡಾ. ಮೈಕೇಲ್‌ಕಾಬ್ಯಾಕ್ ಅವರ ಪ್ರಕಾರ, ಇದು ಸಾಧ್ಯವಾಗುವಂತೆ ಮಾಡುವ ಸಂಶೋಧನಾ ಕಾರ್ಯ ಈಗ ನಡೆಯುತ್ತಿದೆ.

ರಾಜ್ಯ ಮೆಡಿಕಲ್ ಕಾಲೇಜುಗಳ ಖುದ್ದು ಪರಿಶೀಲನೆಗೆ ತಜ್ಞರ ತಂಡ

ಬೆಂಗಳೂರು, ಜೂನ್ 23– ಕರ್ನಾಟಕ ಮತ್ತು ಆಂಧ್ರದಲ್ಲಿ ಹಲವು ಮೆಡಿಕಲ್ ಕಾಲೇಜುಗಳ ಮಾನ್ಯತೆ ರದ್ದುಪಡಿಸಬೇಕೆಂದು ಇಂಡಿಯನ್ ಮೆಡಿಕಲ್ ಕೌನ್ಸಿಲ್ ಮಾಡಿದ್ದ ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿಲ್ಲ.

ಸಂಬಂಧಿಸಿದ ಕಾಲೇಜುಗಳಲ್ಲಿ ಇರುವ ಸೌಲಭ್ಯಗಳನ್ನು ಪರಿಶೀಲನೆ ಮಾಡಲು ಎರಡು ರಾಜ್ಯಗಳಿಗೂ ಪ್ರತ್ಯೇಕ ತಜ್ಞರ ತಂಡ ರಚಿಸಲಾಗಿದೆ. ತಂಡಗಳು ಒಂದು ವಾರದಲ್ಲಿ ಕರ್ನಾಟಕ ಮತ್ತು ಆಂಧ್ರದ ಕಾಲೇಜುಗಳಿಗೆ ಭೇಟಿ ನೀಡಿ ಬೇಗನೆ ವರದಿ ಸಲ್ಲಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT