ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಮಂಡ್ಯ ಶಾಖೆಯಲ್ಲಿ ಜವಾನ ಕೆಲಸದಲ್ಲಿರುವ ಟಿ. ತಿಮ್ಮಯ್ಯ ಉರುಫ್ ಕುಳ್ಳಯ್ಯ ಎಂಬುವವರ ಮನೆಗೆ ಹಠಾತ್ತನೆ ಕೇಂದ್ರ ರೆವಿನ್ಯೂ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಲೆಕ್ಕಕ್ಕೆ ತೆಗೆದುಕೊಳ್ಳದ ಹಾಗೂ ಹೊಸ ನೋಟುಗಳ ರೂಪದಲ್ಲಿದ್ದ ಒಂದು ಲಕ್ಷ ಹದಿನಾರು ಸಾವಿರದ ಆರುನೂರ ಏಳು ರೂಪಾಯಿಗಳನ್ನು ವಶಪಡಿಸಿಕೊಂಡು ಚಿನ್ನ ಮತ್ತು ಇತರೆ ಆಭರಣಗಳಿಗಾಗಿ ಶೋಧನೆ ನಡೆಸುತ್ತಿದ್ದಾರೆಂದು ಗೊತ್ತಾಗಿದೆ.