ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

50 ವರ್ಷಗಳ ಹಿಂದೆ: ಮಂಗಳವಾರ 25.4.1972

Last Updated 24 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ವಿವಾಹಿತ ಮಹಿಳೆಗೆ ಸೇವಾ ನಿಯಮದಲ್ಲಿ ಇನ್ನು ಪಕ್ಷಪಾತವಿಲ್ಲ

ನವದೆಹಲಿ, ಏ. 24– ಮದುವೆಯಾದ ಮಹಿಳೆಯರ ನೇಮಕದ ವಿರುದ್ಧ ಸೇವಾ
ನಿಯಮಗಳಲ್ಲಿರುವ ಕೆಲವು ಪಕ್ಷಪಾತಗಳನ್ನು ನಿವಾರಿಸುವ ಸರ್ಕಾರದ ನಿರ್ಧಾರವನ್ನು ಪ್ರಧಾನಿ ಇಂದಿರಾ ಗಾಂಧಿ ಅವರು ಇಂದು ಲೋಕಸಭೆಯಲ್ಲಿ ಪ್ರಕಟಿಸಿದರು.

ಕಾಂಗ್ರೆಸ್ ಸದಸ್ಯರು ಈ ಪ್ರಕಟಣೆಯನ್ನು ಹರ್ಷೋದ್ಗಾರಗಳಿಂದ ಸ್ವಾಗತಿಸಿದರು.

ಸರ್ಕಾರಿ ಸೇವಾ ನಿಯಮಗಳಲ್ಲಿ ಮಹಿಳೆ ಯರ ವಿರುದ್ಧ ಪಕ್ಷಪಾತವಿದೆಯೆಂದು ಕಾಂಗ್ರೆಸ್ಸಿನ ಶ್ರೀಮತಿ ಟಿ. ಲಕ್ಷ್ಮೀಕಾಂತಮ್ಮ ಅವರು ದೂರುತ್ತಿದ್ದರೆಂದು ಶ್ರೀಮತಿ ಗಾಂಧಿ ಹೇಳಿದರು. ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರು ಮದುವೆಯಾದರೆ ಅವರನ್ನು ಕೆಲಸದಿಂದ ತೆಗೆದುಹಾಕಬಹುದು. ಇನ್ನು ಕೆಲವು ಪ್ರಕರಣಗಳಲ್ಲಿ ವಿವಾಹಿತ ಮಹಿಳೆ ಯರು ಉದ್ಯೋಗಕ್ಕೆ ಅರ್ಹರಾಗುವುದಿಲ್ಲ.

ನಗುವಿನ ಅಲೆಗಳ ನಡುವೆ ಸ್ವತಂತ್ರ ಪಕ್ಷದ ಶ್ರೀ ಪಿಲೂ ಮೋದಿ ಅವರು ಅಚ್ಚರಿ ಸೂಚಿಸುತ್ತಾ ನುಡಿದರು: ‘ಪುರುಷರ ವಿರುದ್ಧ ತೋರಲಾಗುತ್ತಿರುವ ಪಕ್ಷಪಾತವನ್ನೂ ದಯವಿಟ್ಟು ಪರಿಶೀಲಿಸಿರಿ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT