ಬಾಬಾಗೌಡ ಪಾಟೀಲರಿಗೆ ಗ್ರಾಮೀಣಾಭಿವೃದ್ಧಿ ಖಾತೆ
ನವದೆಹಲಿ, ಮಾ. 20– ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರಾಜ್ಯ ಸಚಿವರುಗಳಿಗೆ ಇಂದು ಖಾತೆಗಳನ್ನು ಹಂಚಿಕೆ ಮಾಡಿದ್ದು, ಕರ್ನಾಟಕದ ಬಾಬಾಗೌಡ ಪಾಟೀಲ ಅವರಿಗೆ ಗ್ರಾಮೀಣ ಅಭಿವೃದ್ಧಿ ಖಾತೆಯನ್ನು ನೀಡಿ ಸ್ವತಂತ್ರ ಹೊಣೆಗಾರಿಕೆ
ಯನ್ನು ವಹಿಸಿದ್ದಾರೆ.
ಮನೇಕಾ ಗಾಂಧಿ ಅವರಿಗೆ ಕಲ್ಯಾಣ ಖಾತೆ, ಎಐಎಡಿಎಂಕೆಯ ಆರ್.ಕೆ. ಅವರಿಗೆ ಹಣಕಾಸು ಸಚಿವ ಖಾತೆಯಲ್ಲಿನ ರೆವೆನ್ಯೂ, ಬ್ಯಾಂಕಿಂಗ್, ವಿಮೆ ಹಾಗೂ ಹೆಚ್ಚುವರಿ ಯಾಗಿ ಸಂಸದೀಯ ವ್ಯವಹಾರಗಳನ್ನು ನೀಡಲಾಗಿದೆ.
ತಮಿಳುನಾಡಿನ ಪಟ್ಟಾಳಿ ಮಕ್ಕಳ್ ಕಚ್ಚಿಯ ದಲಿತ್ ಏಳುಮಲೈ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಖಾತೆಯ ಸ್ವತಂತ್ರ ನಿರ್ವಹಣೆಯನ್ನು ವಹಿಸಲಾಗಿದೆ.
ರಾಜ್ಯಸಭೆಗೆ ಬೊಮ್ಮಾಯಿ, ಆಸ್ಕರ್, ನಾಯ್ಡು
ಬೆಂಗಳೂರು, ಮಾ. 20– ಕೇಂದ್ರದ ಮಾಜಿ ಸಚಿವ ಎಸ್.ಆರ್. ಬೊಮ್ಮಾಯಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫರ್ನಾಂಡಿಸ್ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ವೆಂಕಯ್ಯ ನಾಯ್ಡು, ಜನತಾದಳದ ಎಚ್.ಕೆ. ಜವರೇಗೌಡ ಅವರು ರಾಜ್ಯಸಭಾ ಸದಸ್ಯರಾಗಿ ಇಂದು ಇಲ್ಲಿ ಅವಿರೋಧವಾಗಿ ಆಯ್ಕೆಗೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.