ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ 50 ವರ್ಷದ ಹಿಂದೆ| ಶನಿವಾರ 24 ಮಾರ್ಚ್‌ 1973

Last Updated 23 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಪಕ್ಷದ ವಿಷಯ ಕುರಿತು ಸಂಸತ್‌ ಸದಸ್ಯರ ಪತ್ರಿಕಾ ಹೇಳಿಕೆಗಳಿಗೆ ಅಸಮ್ಮತಿ

ಬೆಂಗಳೂರು, ಮಾರ್ಚ್‌ 23– ಪಕ್ಷದ ವಿಷಯ ಕುರಿತು ರಾಜ್ಯದ ಕೆಲವು ಸಂಸತ್‌ ಸದಸ್ಯರು ಪತ್ರಿಕೆಗಳಿಗೆ ಹೇಳಿದ ಬಗ್ಗೆ ಇಂದು ನಡೆದ ಪ್ರದೇಶ ಕಾರ್ಯಕಾರಿ ಸಮಿತಿಯಲ್ಲಿ ಅಸಮ್ಮತಿಯನ್ನು ವ್ಯಕ್ತಪಡಿಸಲಾಯಿತು.

ಸಂಸತ್ ಸದಸ್ಯರ ದೆಹಲಿ ಸಭೆ ಹಾಗೂ ಅಲ್ಲಿಂದೀಚೆಗಿನ ಬೆಳವಣಿಗೆಯನ್ನು ಕುರಿತು ಚರ್ಚಿಸಿದ ಸಭೆ, ಕೆಲ ಸಂಸತ್ ಸದಸ್ಯರ ಈ ವರ್ತನೆ ಬಗ್ಗೆ ನಿರ್ಣಯ ರೂಪದಲ್ಲಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರೂ ಅಸಮ್ಮತಿಯು ಸಮಿತಿಯಲ್ಲಿ ವ್ಯಕ್ತವಾದ ಒಟ್ಟಿನ ಅಭಿಪ್ರಾಯವಾಗಿತ್ತು.

ರಾಜೇಶ್‌ ಖನ್ನಾಗೆ ಮದುವೆ

ಮುಂಬೈ, ಮಾರ್ಚ್‌ 23– ಹಿಂದಿ ಚಿತ್ರರಂಗದ ಶ್ರೇಷ್ಠ ನಟ 32 ವರ್ಷದ ರಾಜೇಶ್‌ ಖನ್ನಾ ಗುರುವಾರ ಮಧ್ಯರಾತ್ರಿ ಕಳೆದ ನಂತರ ಎರಡು ಗಂಟೆಗೆ ಸರಿಯಾಗಿ ಉದಯೋನ್ಮುಖ ಚಿತ್ರತಾರೆ ಡಿಂಪಲ್‌ ಕಪಾಡಿಯಾ ಅವರೊಂದಿಗೆ ವಿವಾಹದ ನಿಶ್ಚಿತಾರ್ಥ ಮಾಡಿಕೊಂಡರು.

ಮುಂಬೈ ಕೈಗಾರಿಕೋದ್ಯಮಿ ಕೆ.ಎಚ್‌.ಕಪಾಡಿಯಾ ಅವರ ಪುತ್ರಿ 24 ವರ್ಷದ ಕುಮಾರಿ ಕಪಾಡಿಯಾ ಈಗ ರಾಜ್‌ಕಪೂರ್‌ ಅವರೊಡನೆ ಮಾಡಿಕೊಂಡಿರುವ ಒಪ್ಪಂದದಂತೆ ‘ಬಾಬಿ’ಯಲ್ಲಿ ಅಭಿನಯಿಸುತ್ತಿದ್ದಾಳೆ.

ಗುರುವಾರ ಇಡೀ ದಿನ ಬಿಡುವಿಲ್ಲದೆ ಶೂಟಿಂಗ್‌ನಲ್ಲಿ ನಿರತರಾಗಿದ್ದ ರಾಜೇಶ್, ಕೆಲಸ ಮುಗಿಸಿಕೊಂಡು ಬೆಳಗಿನ ಜಾವ ಮಿಸ್‌ ಕಪಾಡಿಯಾ ಅವರ ಜುಹು ನಿವಾಸಕ್ಕೆ ಧಾವಿಸಿ ನಿಶ್ಚಿತಾರ್ಥದ ಉಂಗುರಗಳ ವಿನಿಮಯ ಮಾಡಿಕೊಂಡರು.

ಮಾರ್ಚ್‌ 26ರಂದು ಮುಂಬೈನಲ್ಲಿ ಮದುವೆ ನಡೆಯುವುದೆಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT