ಮಂಗಳವಾರ, ಸೆಪ್ಟೆಂಬರ್ 27, 2022
27 °C

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಗುರುವಾರ, 21–07–1972

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು, ಜುಲೈ 20– ನಗರದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಸ್ಥಳದ 46 ಮಂದಿ ಬಡ ಶ್ರೀವೈಷ್ಣವ ವಿದ್ಯಾರ್ಥಿಗಳಿಗೆ ಇಲ್ಲಿನ ಶ್ರೀ ಪರ ಕಾಲಮಠದಲ್ಲಿ ನಿತ್ಯಪಡಿ (ಅನ್ನದ ಉಂಡೆ) ಕೊಡಲಾಗುತ್ತಿದ್ದು, ಮಠದ ಅಧಿಕಾರಿಗಳು ಕಳೆದ ಮೂರು ದಿನಗಳಿಂದ ಕಲೆವು ನಿಯಮಗಳನ್ನು ವಿಧಿಸಿದ್ದು, ವಿದ್ಯಾರ್ಥಿಗಳು ಬಂಡಾಯವೆದ್ದಿದ್ದಾರೆ. ಇದರ ಫಲವಾಗಿ ಬುಧವಾರ ಬೆಳಿಗ್ಗೆಯಿಂದ ನಿತ್ಯಪಡಿಯನ್ನು ನಿಲ್ಲಿಸಲಾಗಿದೆ.

ನಿಯಮಗಳಲ್ಲಿ ಕಡ್ಡಾಯವಾಗಿ ಜುಟ್ಟು ಬಿಡಬೇಕೆಂಬುದೂ ಒಂದು. 46 ಮಂದಿ ಪೈಕಿ ಮೂವರು ಮಾತ್ರ ಜುಟ್ಟು ಬಿಟ್ಟಿದ್ದಾರೆ. ಈ ನಿಯಮಪಾಲನೆಗೆ ಸೋಮವಾರದವರೆಗೆ ಕಾಲಾವಕಾಶ ನೀಡಲಾಗಿತ್ತು.

ಬದಲಾದ ಕಾಲಕ್ಕೆ ಜುಟ್ಟು ಬಿಡುವುದು ಸರಿಯಲ್ಲ ಎಂಬ ತೀರ್ಮಾನಕ್ಕೆ ಬಂದ ವಿದ್ಯಾರ್ಥಿಗಳು ಸೋಮವಾರ ತಮ್ಮ ಮಾಮೂಲು ಕ್ರಾಪ್‌ ತಲೆಯಲ್ಲೇ ಪಡಿ ಪಡೆಯಲು ಮಠಕ್ಕೆ ಹಾಜರಾದರು. ಪಡಿ ಸಿಗಲಿಲ್ಲ.

l ಕೇಂದ್ರ ಸಂಪುಟಕ್ಕೆ ಕೆಂಗಲ್‌ ಹನುಮಂತಯ್ಯ ರಾಜೀನಾಮೆ

ನವದೆಹಲಿ, ಜುಲೈ 20– ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರನ್ನು ಇಂದು ಸಂಜೆ ಇಲ್ಲಿ ಭೇಟಿ ಮಾಡಿದ ನಂತರ ರೈಲ್ವೆ ಸಚಿವ ಶ್ರೀ ಕೆ. ಹನುಮಂತಯ್ಯ ಅವರು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರೆಂದು ತಿಳಿದುಬಂದಿದೆ.

ಸಂಪುಟದ ಪುನರ್ರಚನೆಗೆ ನೆರವಾಗಲು ರಾಜೀನಾಮೆ ನೀಡಬೇಕೆಂದು ಪ್ರಧಾನ ಮಂತ್ರಿಗಳು ಕೇಳಿದ್ದಾಗಿ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು