ಸೋಮವಾರ, ಜುಲೈ 4, 2022
24 °C

50 ವರ್ಷಗಳ ಹಿಂದೆ: 18.5.1972, ಗುರುವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

50 ವರ್ಷಗಳ ಹಿಂದೆ

ಭೂ ಹಿಡುವಳಿ ಮಿತಿ ಜಾರಿಗೆ ಬಂದರೆ ಸ್ವಹಿತಕ್ಕೆ ಧಕ್ಕೆ: ಶಾಸಕರ ಭೀತಿ?

ನವದೆಹಲಿ, ಮೇ 17– ಒಬ್ಬ ವ್ಯಕ್ತಿಗೆ ಅಥವಾ ಒಂದು ಕುಟುಂಬಕ್ಕೆ ಎಷ್ಟು ಜಮೀನು ಇರಬೇಕೆಂಬ ಬಗ್ಗೆ ಪ್ರಧಾನಿ ಇಂದಿರಾಗಾಂಧಿ ಅವರು ತೀವ್ರವಾಗಿ ಗಮನ ಹರಿಸದಿರುವುದರಿಂದ ಈ ಪ್ರಶ್ನೆ ಆಯಾ ಲಾಬಿಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಮಟ್ಟದಲ್ಲೇ ಇದೆ.

ಪ್ರಶ್ನೆಯನ್ನು ಮುಖ್ಯಮಂತ್ರಿಗಳಿಗೇ ಬಿಟ್ಟರೆ, ಅವರ ಉದ್ದೇಶಿತ ಭೂ ಹಿಡುವಳಿ ಮಿತಿಯನ್ನು  ಒಪ್ಪದೇ ಹೋಗಬಹುದು; ಏಕೆಂದರೆ ಬಹುತೇಕ ಶಾಸಕರು ಗ್ರಾಮಾಂತರ ಪ್ರದೇಶದಿಂದ ಬಂದವರಾದ್ದರಿಂದ ಅವರಿಗೆ ಹೆಚ್ಚಿನ ಹಿಡುವಳಿ ಬಗ್ಗೆ ಹಿತಾಸಕ್ತಿ ಇದೆ; ಅಲ್ಲದೆ ಇವರಲ್ಲಿ ಅನೇಕರಿಗೆ ಭಾರಿ ಪ್ರಮಾಣದ ಜಮೀನುಗಳಿವೆ.

ಆದರೆ, ಪ್ರಧಾನಿಯವರ ನಿಲುವೇ ನೆಂಬುದು ಬಹಿರಂಗವಾದಾಗ, ಭೂ ಸುಧಾರಣೆಗಳನ್ನು ತಮ್ಮ ಮೇಲೆ ಹೇರಲಾಯಿತೆಂದು ಮುಖ್ಯಮಂತ್ರಿಗಳು ಹೇಳಬಹುದು. ಆಗಲೂ ಮಿತಿ ಹೇರಿದರೆ ದೇಶದಾದ್ಯಂತ ಸಂಚಲನ, ಕಳವಳ ಉಂಟಾಗುವುದು ಖಚಿತ.

ಇದರ ನಿಜವಾದ ಹಿನ್ನೆಲೆ ಕಥೆ ಸ್ವಾತಂತ್ರ್ಯ ಪೂರ್ವ ಕಾಲದ್ದು. ಆಗ ಜನ ಬೆಂಬಲ ಪಡೆಯಲು ಬಳಸುತ್ತಿದ್ದ ಘೋಷಣೆ ಎಂದರೆ, ‘ಸ್ವಾತಂತ್ರ್ಯಾ ನಂತರ ಜಮೀನ್ದಾರಿಕೆಯನ್ನು ನಿರ್ಮೂಲನಗೊಳಿಸುವುದು’ ಎಂಬುದು.

ಶೇ 80ರಷ್ಟು ಜನ ಗ್ರಾಮಾಂತರ ವಾಸಿಗ ಳಾದ್ದರಿಂದ ಈ ಘೋಷಣೆ ಜನಮನಸೂರೆ ಗೊಂಡಿತು. ಈಗಲೂ ಶೇ 25ರಷ್ಟು ಗ್ರಾಮಾಂ ತರ ವಾಸಿಗಳು ಭೂಹೀನರು,18 ಕೋಟಿ ಜನಕ್ಕೆ 5 ಎಕರೆಗೂ ಕಡಿಮೆ ಜಮೀನಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು