ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ 23-8-1967

Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಪ್ರದೇಶ ಭಾಷೆ ಶಿಕ್ಷಣ ಮಾಧ್ಯಮ: ರಾಜ್ಯಗಳ ಶಿಕ್ಷಣ ಸಚಿವರ ಒಪ್ಪಿಗೆ

ನವದೆಹಲಿ, ಆ. 21– ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರದೇಶ ಭಾಷೆಗಳು ಶಿಕ್ಷಣ ಮಾಧ್ಯಮವಾಗಿರಬೇಕೆಂಬುದಕ್ಕೆ, ಅನೌಪಚಾರಿಕವಾಗಿ ಇಂದು ಇಲ್ಲಿ ಸಭೆ ಸೇರಿದ್ದ ರಾಜ್ಯಗಳ ಶಿಕ್ಷಣ ಸಚಿವರು ಸಾಮಾನ್ಯವಾಗಿ ತಮ್ಮ ಒಪ್ಪಿಗೆ ನೀಡಿದ್ದಾರೆ.

ಕೇಂದ್ರ ಶಿಕ್ಷಣ ಸಚಿವ ಡಾ. ತ್ರಿಗುಣ ಸೇನ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಅನೇಕ ರಾಜ್ಯಗಳಲ್ಲಿ, ಶಿಕ್ಷಣ ಮಾಧ್ಯಮ ಬದಲಾವಣೆ ಕಾರ್ಯಸುಗುಮಗೊಳಿಸಲು ಈಗಾಗಲೆ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ವಿವರ ನೀಡಲಾಯಿತು. ಆದರೆ ಅಸ್ಸಾಂ, ನಾಗಾರಾಜ್ಯ ಮತ್ತು ಮಣಿಪುರದ ಸಚಿವರು ಮಾತನಾಡುತ್ತ, ಪ್ರದೇಶ ಭಾಷೆಗಳನ್ನು ಶಿಕ್ಷಣ ಮಾಧ್ಯಮವಾಗಿಸುವ ಬಗ್ಗೆ ತಾವು ಎದುರಿಸುತ್ತಿರುವ ನಾನಾ ತೊಂದರೆಗಳನ್ನು ವಿವರಿಸಿದರು.

ಚೀನವೊಂದೇ ಯುದ್ಧಾಸಕ್ತ‌ ರಾಷ್ಟ್ರವೆಂಬುದು ಸುಸ್ಪಷ್ಟ

ಟೋಕಿಯೋ, ಆ. 21– ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ  ಸಮಸ್ಯೆಗಳಿಗೆ ಪರಿಹಾರವಾಗಿ ಯುದ್ಧಕ್ಕೆ ಚೀನವೊಂದೇ ಬೆಂಬಲ ನೀಡುತ್ತಿರುವ ರಾಷ್ಟ್ರವೆಂದು ಭಾರತದ ಉಪ ಪ್ರಧಾನಮಂತ್ರಿ ಶ್ರೀ ಮುರಾರಜಿ ದೇಸಾಯಿ ಅವರು ಇಂದು ತಿಳಿಸಿದರು.

ಭಾರತವು ಶಕ್ತಿಶಾಲಿಯಾಗಿರುವತನಕ ಏಷ್ಯ ಮತ್ತು ಇಡೀ ವಿಶ್ವದಲ್ಲಿ ಪರಮಾಧಿಕಾರ ಪಡೆಯುವ ಚೀನದ ಅಪೇಕ್ಷೆ ಕೈಗೂಡದು ಎಂದೂ ಅವರು ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT